ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ಸಂಜು ಸ್ಯಾಮ್ಸನ್ ಆಟ ಆರ್‌ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್‌ಗೆ 2 ಬಾರಿ ಔಟ್!

IPL 2022: RR skipper Sanju Samson failed to make big scores against RCBs Wanindu Hasaranga

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇಂದು ( ಮೇ 27 ) ನಡೆಯಲಿರುವ ಪಂದ್ಯ ರಾಯಲ್ಸ್ ಕದನಕ್ಕೆ ಸಾಕ್ಷಿಯಾಗಲಿದೆ. ಹೌದು, ಈ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡರೆ, ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.

IPL 2022: ಕಳಪೆ ಫೀಲ್ಡಿಂಗ್‍ನಿಂದ ಹೆಚ್ಚು ರನ್ ನೀಡಿದ 3 ತಂಡಗಳಿವು! ಆರ್‌ಸಿಬಿ ನೀಡಿದ್ದೆಷ್ಟು?IPL 2022: ಕಳಪೆ ಫೀಲ್ಡಿಂಗ್‍ನಿಂದ ಹೆಚ್ಚು ರನ್ ನೀಡಿದ 3 ತಂಡಗಳಿವು! ಆರ್‌ಸಿಬಿ ನೀಡಿದ್ದೆಷ್ಟು?

ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, 14 ವರ್ಷಗಳಿಂದ ಟ್ರೋಫಿ ಗೆಲ್ಲದೇ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಯೋಜನೆಯಲ್ಲಿದೆ.

RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?

ಆದರೆ ಎರಡೂ ತಂಡಗಳಿಗೂ ಸಹ ಈ ಪಂದ್ಯದಲ್ಲಿ ಗೆಲುವು ಸುಲಭದ ತುತ್ತಲ್ಲ. ರಾಜಸ್ತಾನ್ ರಾಯಲ್ಸ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ 2 ಪಂದ್ಯಗಳಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಮಣ್ಣು ಮುಕ್ಕಿಸಿ ಗೆಲುವಿನ ನಾಗಾಲೋಟದಲ್ಲಿದೆ. ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟು ಹಾಕಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಬಲಿಷ್ಠ ಆಟಗಾರ ಎನಿಸಿಕೊಂಡಿರುವ ನಾಯಕ ಸಂಜು ಸ್ಯಾಮ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಬೌಲರ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದು, ಇದು ತಂಡಕ್ಕೆ ಭಾರಿ ಹಿನ್ನಡೆ ಎಂದೇ ಹೇಳಬಹುದು. ಈ ಕುರಿತಾದ ಮತ್ತಷ್ಟು ವಿವರ ಕೆಳಕಂಡಂತಿದೆ..

ಸಂಜು ಸ್ಯಾಮ್ಸನ್ ಆಟ ಈ ಬೌಲರ್ ಮುಂದೆ ನಡೆಯಲ್ಲ

ಸಂಜು ಸ್ಯಾಮ್ಸನ್ ಆಟ ಈ ಬೌಲರ್ ಮುಂದೆ ನಡೆಯಲ್ಲ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಬೌಲಿಂಗ್ ಮುಂದೆ ಸಂಜು ಸ್ಯಾಮ್ಸನ್ ಅಕ್ಷರಶಃ ನೆಲಕಚ್ಚಿದ್ದಾರೆ. ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಡೆದಿರುವ 2 ಲೀಗ್ ಹಂತದ ಪಂದ್ಯಗಳಲ್ಲಿ ವನಿಂದು ಹಸರಂಗಗೆ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿ ಮಂಕಾಗಿದ್ದಾರೆ.

ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ vs ವನಿಂದು ಹಸರಂಗ

ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ vs ವನಿಂದು ಹಸರಂಗ

ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಡೆದ ಮೊದಲನೇ ಲೀಗ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 8 ರನ್ ಗಳಿಸಿ ಔಟ್ ಆಗಿದ್ದರು. ಆ ಪಂದ್ಯದಲ್ಲಿ ವನಿಂದು ಹಸರಂಗ ಎಸೆದ ಎಸೆತಕ್ಕೆ ವನಿಂದು ಹಸರಂಗಗೇ ಕ್ಯಾಚ್ ನೀಡಿದ್ದ ಸಂಜು ಸ್ಯಾಮ್ಸನ್ ಪೆವಿಲಿಯನ್ ಸೇರಿದ್ದರು. ಇನ್ನು ಇತ್ತಂಡಗಳ ನಡುವಿನ ಎರಡನೇ ಪಂದ್ಯದಲ್ಲಿಯೂ ಕೂಡ ಸಂಜು ಸ್ಯಾಮ್ಸನ್ ವನಿಂದು ಹಸರಂಗ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಹೀಗೆ ಶ್ರೀಲಂಕಾದ ಸ್ಪಿನ್ನರ್ ಮುಂದೆ ರನ್ ಗಳಿಸಲು ಪರದಾಡಿ ವಿಕೆಟ್ ಒಪ್ಪಿಸಿ ನೆಲಕಚ್ಚಿರುವ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲಿ ಹಸರಂಗರನ್ನು ದೃಢವಾಗಿ ಎದುರಿಸುತ್ತಾರಾ ಅಥವಾ ಮತ್ತದೇ ತಮ್ಮ ಕಳಪೆ ಆಟವನ್ನು ಮುಂದುವರೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Rajat Patidar ಯಾರು?RCB ಸೇರೋದಕ್ಕೆ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಗೊತ್ತಾ? | #cricket | Oneindia Kannada
ಹಸರಂಗ ವಿರುದ್ಧ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 16 ರನ್!

ಹಸರಂಗ ವಿರುದ್ಧ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 16 ರನ್!

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿಯೂ ಹಸರಂಗಗೆ ವಿಕೆಟ್ ಒಪ್ಪಿಸಿರುವ ಸಂಜು ಸ್ಯಾಮ್ಸನ್ ಹಸರಂಗ ವಿರುದ್ಧ ಗಳಿಸಿರುವುದು ಕೇವಲ 16 ರನ್ ಮಾತ್ರ. ವನಿಂದು ಹಸರಂಗ ಎಸೆದಿರುವ 12 ಎಸೆತಗಳನ್ನು ಎದುರಿಸಿರುವ ಸಂಜು ಸ್ಯಾಮ್ಸನ್ 1 ಫೋರ್ ಮತ್ತು 2 ಸಿಕ್ಸರ್ ಸಿಡಿಸಿದ್ದಾರೆ. 9 ಎಸೆತಗಳಲ್ಲಿ ಯಾವುದೇ ರನ್ ಬಾರಿಸದೇ ಇರುವ ಸಂಜು ಸ್ಯಾಮ್ಸನ್ 2 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಮಾಂತ್ರಿಕ ವನಿಂದು ಹಸರಂಗ ಸಂಜು ಸ್ಯಾಮ್ಸನ್ ಮೇಲೆ ತೀವ್ರ ಹಿಡಿತ ಸಾಧಿಸಿರುವುದು ತಂಡಕ್ಕೆ ದೊಡ್ಡ ಧನಾತ್ಮಕ ಅಂಶವಾಗಿದೆ.

Story first published: Friday, May 27, 2022, 9:41 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X