RR vs GT: ರಾಜಸ್ತಾನ್ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ 37 ರನ್‌ಗಳ ಗೆಲುವು

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್‌ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಡೆ ನೀಡಿದ ಗುರಿ ಬೆನ್ನತ್ತಲಾಗದೇ, ರಾಜಸ್ತಾನ್ ರಾಯಲ್ಸ್ ಸೋಲನ್ನ ಒಪ್ಪಿಕೊಂಡಿದೆ.

ಗುಜರಾತ್‌ನ 193ರನ್‌ಗಳ ಗುರಿ ಬೆನ್ನತ್ತಿದ ಆರ್ಆರ್ ಪರ ಓಪನರ್ ಜಾಸ್ ಬಟ್ಲರ್ ಸ್ಫೋಟಕ ಆರಂಭ ನೀಡಿದ್ರು. ಮೊದಲ ಓವರ್‌ನಲ್ಲೇ ಶಮಿಗೆ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ಬಟ್ಲರ್ ನಂತರದ ಓವರ್‌ನಲ್ಲಿ ಎರಡು ಸಿಕ್ಸರ್ ಕಲೆಹಾಕಿದ್ರು.

ಆರ್ಆರ್ ಪರ ಅಬ್ಬರಿಸಿದ ಜಾಸ್‌ ಬಟ್ಲರ್‌

ಆರ್ಆರ್ ಪರ ಅಬ್ಬರಿಸಿದ ಜಾಸ್‌ ಬಟ್ಲರ್‌

ರಾಜಸ್ತಾನ್ ರಾಯಲ್ಸ್ ಪರ 24 ಎಸೆತಗಳಲ್ಲಿ 54 ರನ್ ಸಿಡಿಸಿದ ಜಾಸ್ ಬಟ್ಲರ್ ಅಬ್ಬರದ ಆರಂಭ ನೀಡುವ ಮೂಲಕ ಸುಲಭ ಗೆಲುವಿನ ಆಸೆ ಹುಟ್ಟಿಸಿದ್ರು. ಎಂಟು ಬೌಂಡರಿ ಮತ್ತು ಮೂರು ಅಮೋಘ ಸಿಕ್ಸರ್‌ಗಳ ನೆರವಿನಿಂದ ಆರೆಂಜ್ ಕ್ಯಾಪ್ ಪಡೆದ ಜಾಸ್ ಬಟ್ಲರ್ ಒಂದೆಡೆ ಅಬ್ಬರಿಸಿದ್ರೆ, ಮತ್ತೊಂದೆಡೆ ವಿಕೆಟ್‌ಗಳು ಉರುಳಿದವು.

ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರೆ, ಪ್ರಯೋಗಾತ್ಮಕವಾಗಿ ಮೂರನೇ ಕ್ರಮಾಂಕದಲ್ಲಿ ಆಡಿದ ಅಶ್ವಿನ್ ಒಂದು ಸಿಕ್ಸರ್ ಸಿಡಿಸಿ 8ರನ್‌ಗೆ ಔಟಾದ್ರು. 54ರನ್‌ ವೇಗವಾಗಿ ಸಿಡಿಸಿದ ಬಟ್ಲರ್ ಎದುರಾಳಿ ಬೌಲರ್ ಲ್ಯೂಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ನಾಯಕ ಸಂಜು ಸ್ಯಾಮ್ಸನ್ 11ರನ್‌ಗಳಿಸಿದ್ದಾಗ, ಹಾರ್ದಿಕ್ ಪಾಂಡ್ಯ ಬ್ರಿಲಿಯಂಟ್ ಫೀಲ್ಡಿಂಗ್‌ಗೆ ಸ್ಯಾಮ್ಸನ್ ಔಟಾದ್ರು.

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್‌: ವೀಡಿಯೋ ವೈರಲ್‌

ಒಬ್ಬರ ಹಿಂದೆ ಮತ್ತೊಬ್ಬರ ಪೆವಿಲಿಯನ್ ಪರೇಡ್

ಒಬ್ಬರ ಹಿಂದೆ ಮತ್ತೊಬ್ಬರ ಪೆವಿಲಿಯನ್ ಪರೇಡ್

ಓಪನಿಂಗ್‌ನಲ್ಲಿ ಜಾಸ್‌ ಬಟ್ಲರ್ ಅಬ್ಬರ ಬಿಟ್ಟರೆ, ರಾಜಸ್ತಾನದ ಪ್ರತಿ ಬ್ಯಾಟರ್ ಬೇಗನೆ ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಸೇರಿದರು. ರಾಸ್ಸಿ ವ್ಯಾನ್ ಡರ್ ಡಸ್ಸೆನ್ 6ರನ್, ಶಿಮ್ರೊನ್ 29 ರನ್‌, ರಿಯಾನ್ ಪರಾಗ್ 18, ಜೇಮ್ಸ್‌ ನೀಶಮ್ 17 ರನ್‌ ಗಳಿಸಿದ್ದಾರೆ. ಅಂತಿಮವಾಗಿ ರಾಜಸ್ತಾನ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.

ಪರಿಣಾಮ ಗುಜರಾತ್ ಟೈಟನ್ಸ್ 37ರನ್‌ಗಳ ಗೆಲುವಿನೊಂದಿಗೆ, ಪಾಯಿಂಟ್ಸ್ ಟೇಬಲ್‌ನಲ್ಲಿ 8 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಆದ್ರೆ ಇದರ ನಡುವೆ 18ನೇ ಓವರ್‌ ಬೌಲಿಂಗ್ ಮಾಡ್ತಿದ್ದ ಹಾರ್ದಿಕ್ ಪಾಂಡ್ಯ ಜೇಮ್ಸ್ ನಿಶಮ್ ವಿಕೆಟ್ ಪಡೆದ ಬೆನ್ನಲ್ಲೇ ಸ್ನಾಯು ಸೆಳೆತದಿಂದ ಓವರ್ ಮಧ್ಯದಲ್ಲೇ ಹೊರನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಆರಂಭಿಕ ಆಘಾತ ಅನುಭವಿಸಿದ ಗುಜರಾತ್ ಟೈಟನ್ಸ್‌

ಆರಂಭಿಕ ಆಘಾತ ಅನುಭವಿಸಿದ ಗುಜರಾತ್ ಟೈಟನ್ಸ್‌

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ 4 ವಿಕೆಟ್ ನಷ್ಟಕ್ಕೆ 192ರನ್ ಕಲೆಹಾಕಿದೆ. ರಾಜಸ್ತಾನ್ ರಾಯಲ್ಸ್‌ಗೆ 193ರನ್‌ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್‌ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ 12ರನ್‌ಗೆ ರನೌಟ್‌ಗೆ ಬಲಿಯಾದ್ರೆ, ಶುಭ್ಮನ್ ಗಿಲ್ 13ರನ್‌ಗಳಿಸಿದ್ದಾಗ ರಿಯಾನ್ ಪರಾಗ್ ಬೌಲಿಂಗ್‌ನಲ್ಲಿ ಹೆಟ್ಮೆಯರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇನ್ನು ಸಾಯಿ ಸುದರ್ಶನ್ ಬದಲು ಸ್ಥಾನ ಪಡೆದಿದ್ದ ಆಲ್‌ರೌಂಡರ್ ವಿಜಯ್ ಶಂಕರ್ ಕೇವಲ 2ರನ್‌ಗೆ ಕುಲ್‌ದೀಪ್ ಸೇನ್‌ಗೆ ವಿಕೆಟ್ ಒಪ್ಪಿಸಿದ್ದು ಬಹಳ ನಿರಾಸೆ ಮೂಡಿಸಿತು.

ಗುಜರಾತ್ ತಂಡಕ್ಕೆ ಮತ್ತೊಮ್ಮೆ ಪಾಂಡ್ಯ ಪವರ್

ಗುಜರಾತ್ ತಂಡಕ್ಕೆ ಮತ್ತೊಮ್ಮೆ ಪಾಂಡ್ಯ ಪವರ್

53ರನ್‌ಗೆ ಮೂರು ವಿಕೆಟ್ ಕಳೆದುಕೊಂಡ ಗುಜರಾತ್ ಟೈಟನ್ಸ್‌ಗೆ ಮತ್ತೊಮ್ಮೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದ್ರು. ಅಬ್ಬರದ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಅಜೇಯ 87 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದ್ರು. ಪಾಂಡ್ಯ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸ್ಫೋಟಕ ಸಿಕ್ಸರ್‌ಗಳಿದ್ದವು.

ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಅಭಿನವ್ ಮನೋಹರ್ 28 ಎಸೆತಗಳಲ್ಲಿ 43 ರನ್ ಕಲೆಹಾಕಿದ್ರು. ಇವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಸಹಿತ ಎರಡು ಸಿಕ್ಸರ್‌ಗಳಿದ್ದವು.

ಡೇವಿಡ್ ಮಿಲ್ಲರ್ ಅಬ್ಬರದ ಆಟ

ಡೇವಿಡ್ ಮಿಲ್ಲರ್ ಅಬ್ಬರದ ಆಟ

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ ಅಜೇಯ 31ರನ್ ಕಲೆಹಾಕುವ ಮೂಲಕ ತಂಡದ ಸ್ಕೋರನ್ನು 190ರ ಗಡಿದಾಟಿಸಿದ್ರು. ಐಪಿಎಲ್‌ನಲ್ಲಿ ಎರಡನೇ ಗರಿಷ್ಠ ರನ್ ಕಲೆಹಾಕಿದ ಹಾರ್ದಿಕ್ ಪಾಂಡ್ಯ ತಂಡದ ನಾಯಕನಿಗೆ ತಕ್ಕ ಆಟವಾಡಿದ್ರು. ಅಂತಿಮವಾಗಿ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.

ರಾಜಸ್ತಾನ್ ರಾಯಲ್ಸ್ ಪರ ಕುಲ್‌ದೀಪ್ ಸೇನ್, ಯುಜವೇಂದ್ರ ಚಹಾಲ್, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, April 14, 2022, 23:51 [IST]
Other articles published on Apr 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X