ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RR vs KKR: ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಪ್ಲೇಯರ್ಸ್‌ ಇದ್ದಾರೆಯೇ? ಮಿಸ್ ಮಾಡದಿರಿ

RR vs KKR

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 15ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ಈ ಸೀಸನ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಎದುರಾಗುತ್ತಿವೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿರುವ ರಾಜಸ್ತಾನ್ ರಾಯಲ್ಸ್ 5 ಪಂದ್ಯಗಳಲ್ಲಿ 3 ಪಂದ್ಯ ಗೆಲುವು 2 ಪಂದ್ಯಗಳ ಸೋಲಿನೊಂದಿಗೆ ಒಟ್ಟು 6 ಪಾಯಿಂಟ್ಸ್ ಕಲೆಹಾಕಿದೆ. ಇನ್ನು ಕೆಕೆಆರ್‌ ಆರನೇ ಸ್ಥಾನದಲ್ಲಿದ್ದು, ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲಿನೊಂದಿಗೆ 6 ಪಾಯಿಂಟ್ಸ್‌ ಗಳಿಸಿದೆ. ನೆಟ್‌ ರನ್‌ ರೇಟ್‌ನಲ್ಲಿ ಕೊಂಚ ಹಿಂದಿರುವ ಕಾರಣ ಆರ್‌ಆರ್‌ ನಂತರದ ಸ್ಥಾನದಲ್ಲಿದೆ.

ಕಳೆದ ಪಂದ್ಯಗಳನ್ನ ಸೋತಿವೆ ಉಭಯ ತಂಡಗಳು

ಕಳೆದ ಪಂದ್ಯಗಳನ್ನ ಸೋತಿವೆ ಉಭಯ ತಂಡಗಳು

ರಾಜಸ್ತಾನ್ ರಾಯಲ್ಸ್ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 37 ರನ್‌ಗಳಿಂದ ಸೋಲನ್ನ ಕಂಡಿತು. ಜೋಸ್ ಬಟ್ಲರ್ ಸ್ಫೋಟಕ 54 ರನ್ ಕಲೆಹಾಕಿದ್ರೂ ಸಹ ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ರಾಜಸ್ತಾನ್ ಸೋಲನ್ನ ಕಂಡಿತು.

ಮತ್ತೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್‌ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈ್ರಾಬಾದ್ ವಿರುದ್ಧ ಮುಗ್ಗರಿಸಿತು. 7 ವಿಕೆಟ್‌ಗಳಿಂದ ಸೋಲನ್ನಪ್ಪಿದ ಕೆಕೆಆರ್ ಪರ ನಿತಿಶ್ ರಾಣಾ 54 ರನ್ ಕಲೆಹಾಕಿದ್ರೆ, ಆ್ಯಂಡ್ರೆ ರಸ್ಸೆಲ್ 49 ರನ್ ಸಿಡಿಸಿದ್ರು.

ಹವಾಮಾನ ಮತ್ತು ಪಿಚ್ ರಿಪೋರ್ಟ್‌

ಹವಾಮಾನ ಮತ್ತು ಪಿಚ್ ರಿಪೋರ್ಟ್‌

ಇಂದು ಪಂದ್ಯ ನಡೆಯಲಿರುವ ಬ್ರಬೋರ್ನ್ ಸ್ಟೇಡಿಯಂನಲ್ಲಿ 30 ರಿಂದ 32 ಡಿಗ್ರಿ ಉಷ್ಣಾಂಶ ಮತ್ತು 67 ರಿಂದ 70% ಹ್ಯುಮಿಡಿಟಿಯನ್ನ ಕಾಣಬಹುದು. ಗಾಳಿಯು 18-21km ವೇಗವಾಗಿ ಬೀಸಲಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿನ ಪಿಚ್ ಸಾಮಾನ್ಯವಾಗಿ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತದೆ. ಇಬ್ಬನಿ ಅಂಶವು ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಣ್ಣ ಬೌಂಡರಿಗಳು ಮತ್ತು ವೇಗದ ಔಟ್‌ಫೀಲ್ಡ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಇಲ್ಲಿನ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 194 ಆಗಿದೆ.

ಚೇಸಿಂಗ್ ಮಾಡಿದ ತಂಡವೇ ಗೆದ್ದಿದ್ದು ಹೆಚ್ಚು

ಚೇಸಿಂಗ್ ಮಾಡಿದ ತಂಡವೇ ಗೆದ್ದಿದ್ದು ಹೆಚ್ಚು

ಈ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿರುವ ಉದಾಹರಣೆ ಹೆಚ್ಚಿದೆ. ಐಪಿಎಲ್ 2022ರ ಸೀಸನ್‌ನಲ್ಲಿ ಚೇಸಿಂಗ್ ಮಾಡಿದ ಟೀಂ ಹೆಚ್ಚು ಗೆಲ್ಲುತ್ತಿದ್ದು, ಇಲ್ಲಿಯೂ ಕೂಡ ಶೇಕಡಾ 60ರಷ್ಟು ಫಲಿತಾಂಶಗಳು ಚೇಸಿಂಗ್‌ನಿಂದ ಬಂದಿದೆ.

ಆರ್‌ಆರ್ ಮತ್ತು ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11

ಆರ್‌ಆರ್ ಮತ್ತು ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸೆನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಮ್ಸ್ ನೀಶಮ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ

ಕೋಲ್ಕತ್ತಾ ನೈಟ್ ರೈಡರ್ಸ್: ಆ್ಯರೋನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಉಮೇಶ್ ಯಾದವ್, ಅಮನ್ ಖಾನ್, ವರುಣ್ ಚಕ್ರವರ್ತಿ

ಫ್ಯಾಂಟಸಿ ಡ್ರೀಂ ಟೀಮ್‌ 1

ಫ್ಯಾಂಟಸಿ ಡ್ರೀಂ ಟೀಮ್‌ 1

ನಿಮ್ಮ ಫ್ಯಾಂಟೆಸಿ ಡ್ರೀಂ ಟೀಮ್‌ನಲ್ಲಿ ಜಾಸ್ ಬಟ್ಲರ್, ಯುಜವೇಂದ್ರ ಚಹಾಲ್, ಆ್ಯಂಡ್ರೆ ರಸ್ಸೆಲ್, ಪ್ಯಾಟ್ ಕಮಿನ್ಸ್‌, ಶ್ರೇಯಸ್ ಅಯ್ಯರ್ ಪ್ರಮುಖ ಆಟಗಾರರಾಗಿದ್ದಾರೆ. ಉಳಿದಂತೆ ಯಾವೆಲ್ಲಾ ಪ್ರಮುಖ ಆಟಗಾರರು ಹೆಚ್ಚು ಪಾಯಿಂಟ್ಸ್ ತಂದುಕೊಡಬಹುದು ಎಂದು ಅಂದಾಜಿಸಲಾಗಿದೆ.

ಕೀಪರ್ - ಜೋಸ್ ಬಟ್ಲರ್ (ನಾಯಕ)

ಬ್ಯಾಟ್ಸ್‌ಮನ್‌ಗಳು - ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೆಯರ್, ನಿತೀಶ್ ರಾಣಾ, ದೇವದತ್ ಪಡಿಕ್ಕಲ್

ಆಲ್ ರೌಂಡರ್ಸ್ - ಆಂಡ್ರೆ ರಸೆಲ್ (ಉಪನಾಯಕ), ಪ್ಯಾಟ್ ಕಮ್ಮಿನ್ಸ್

ಬೌಲರ್‌ಗಳು - ಯುಜುವೇಂದ್ರ ಚಹಾಲ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಸೇನ್

ಫ್ಯಾಂಟಸಿ ಡ್ರೀಂ ಟೀಮ್ 2

ಫ್ಯಾಂಟಸಿ ಡ್ರೀಂ ಟೀಮ್ 2

ಕೀಪರ್ - ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್

ಬ್ಯಾಟ್ಸ್‌ಮನ್‌ಗಳು - ಶ್ರೇಯಸ್ ಅಯ್ಯರ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ನಿತೀಶ್ ರಾಣಾ

ಆಲ್ ರೌಂಡರ್‌ಗಳು - ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ವೆಂಕಟೇಶ್ ಅಯ್ಯರ್

ಬೌಲರ್‌ಗಳು - ಯುಜುವೇಂದ್ರ ಚಹಾಲ್ (ಉಪನಾಯಕ), ಉಮೇಶ್ ಯಾದವ್, ಕುಲದೀಪ್ ಸೇನ್, ವರುಣ್ ಚಕ್ರವರ್ತಿ


ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ ಡ್ರೀಂ ಟೀಂ ಸಂಯೋಜನೆಯು 1-4-2-4 ಆಗಿದೆ.

Story first published: Monday, April 18, 2022, 9:03 [IST]
Other articles published on Apr 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X