ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR Qualifier 2: ಪಂದ್ಯದಲ್ಲಿ ಗೆಲ್ಲಲು ಡ್ರೀಮ್ ತಂಡ ಹೀಗಿರಬೇಕು; ಈತನಿಗೆ ನಾಯಕತ್ವ ನೀಡಬೇಕು

IPL 2022, RR vs RCB Qualifier 2: Dream team prediction and probable playing 11

ಲೀಗ್ ಹಂತದ ಅಂತಿಮ ಸಮಯದಲ್ಲಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿದು 14 ರನ್‌ಗಳ ಗೆಲುವನ್ನು ದಾಖಲಿಸುವುದರ ಮೂಲಕ ಕ್ವಾಲಿಫೈಯರ್ ಎರಡನೇ ಪಂದ್ಯವನ್ನಾಡುವ ಅರ್ಹತೆಯನ್ನು ಪಡೆದುಕೊಂಡಿದೆ.

ಈತನಿಂದಲೇ ಸೋತೆವು; ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್!ಈತನಿಂದಲೇ ಸೋತೆವು; ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್!

ಅತ್ತ ಲೀಗ್ ಹಂತದಲ್ಲಿ ಉತ್ತಮ ಆಟವನ್ನಾಡಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡುವ ಅವಕಾಶವನ್ನು ಪಡೆದ ರಾಜಸ್ಥಾನ್ ರಾಯಲ್ಸ್ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತ್ತು. ಆದರೆ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ನೇರವಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಸೋತ ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಬೇಕಾದ ಅನಿವಾರ್ಯತೆ ಎದುರಾಗಿದೆ.

RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?

ಹೀಗೆ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸುವ ತಂಡ ಯಾವುದು ಎಂಬುದನ್ನು ನಿರ್ಧರಿಸುವ ಈ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದ್ದು, ಈ ಪಂದ್ಯವು ನಾಳೆ ( ಮೇ 27 ) ಸಂಜೆ 7.30ಕ್ಕೆ ಆರಂಭವಾಗಲಿದೆ. ಹೀಗೆ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಯಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ನಿರತರಾಗಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಊಹಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಸಂಪಾದಿಸಬಹುದಾಗಿದೆ.

ಡ್ರೀಮ್ ಟೀಮ್ 1

ಡ್ರೀಮ್ ಟೀಮ್ 1

1 ಜೋಸ್ ಬಟ್ಲರ್, 2 ಫಾಫ್ ಡು ಪ್ಲೆಸಿಸ್, 3 ಗ್ಲೆನ್ ಮ್ಯಾಕ್ಸ್‌ವೆಲ್, 4 ರಜತ್ ಪಾಟಿದಾರ್, 5 ರಿಯಾನ್ ಪರಾಗ್, 6 ದಿನೇಶ್ ಕಾರ್ತಿಕ್, 7 ವನಿಂದು ಹಸರಂಗ, 8 ಹರ್ಷಲ್ ಪಟೇಲ್, 9 ಯುಜ್ವೇಂದ್ರ ಚಹಾಲ್, 10 ಪ್ರಸಿದ್ ಮೊಹಮ್ ಕೃಷ್ಣ, 10 ಪ್ರಸಿದ್.

ನಾಯಕ: ಫಾಫ್ ಡು ಪ್ಲೆಸಿಸ್, ಉಪನಾಯಕ: ಜೋಸ್ ಬಟ್ಲರ್, ವಿಕೆಟ್ ಕೀಪರ್: ದಿನೇಶ್ ಕಾರ್ತಿಕ್.

ಡ್ರೀಮ್ ಟೀಮ್ 2

ಡ್ರೀಮ್ ಟೀಮ್ 2

1. ಜೋಸ್ ಬಟ್ಲರ್, 2 ಯಶಸ್ವಿ ಜೈಸ್ವಾಲ್, 3 ಸಂಜು ಸ್ಯಾಮ್ಸನ್, 4 ಶಿಮ್ರೋನ್ ಹೆಟ್ಮೆಯರ್, 5 ರಜತ್ ಪಾಟಿದಾರ್, 6 ದಿನೇಶ್ ಕಾರ್ತಿಕ್, 7 ಆರ್ ಅಶ್ವಿನ್, 8 ಒಬೆದ್ ಮೆಕಾಯ್, 9 ಯುಜ್ವೇಂದ್ರ ಚಾಹಲ್, 10 ಜೋಶ್ ಹ್ಯಾಜಲ್ವುಡ್, 11 ಮೊಹಮ್ಮದ್ ಸಿರಾಜ್.

ನಾಯಕ: ಸಂಜು ಸ್ಯಾಮ್ಸನ್, ಉಪನಾಯಕ: ಯಶಸ್ವಿ ಜೈಸ್ವಾಲ್, ವಿಕೆಟ್ ಕೀಪರ್: ದಿನೇಶ್ ಕಾರ್ತಿಕ್.

ಫೀಲ್ಡ್ ಗೆ ನುಗ್ಗಿದ ಅಭಿಮಾನಿಯನ್ನು ಕುರಿಮರಿಯಂತೆ ಹೊತ್ತೊಯ್ದ ಪೊಲೀಸರು:Kohli ಮಾಡಿದ್ದೇನು? |#cricket |Oneindia
ಸಂಭಾವ್ಯ ಆಡುವ ಬಳಗ

ಸಂಭಾವ್ಯ ಆಡುವ ಬಳಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು: 1 ಫಾಫ್ ಡು ಪ್ಲೆಸಿಸ್ (ನಾಯಕ), 2, ವಿರಾಟ್ ಕೊಹ್ಲಿ, 3 ಗ್ಲೆನ್ ಮ್ಯಾಕ್ಸ್‌ವೆಲ್, 4 ರಜತ್ ಪಾಟಿದಾರ್, 5 ಮಹಿಪಾಲ್ ಲೊಮ್ರೋರ್, 6 ಶಹಬಾಜ್ ಅಹ್ಮದ್, 7 ದಿನೇಶ್ ಕಾರ್ತಿಕ್ (ವಿಕೆ), 8 ವನಿಂದು ಹಸರಂಗ, 9 ಹರ್ಷಲ್ ಪಟೇಲ್, 10 ಜೋಶ್ ಹ್ಯಾಜಲ್‌ವುಡ್, 11 ಮೊಹಮ್ಮದ್ ಸಿರಾಜ್.

ರಾಜಸ್ಥಾನ್ ರಾಯಲ್ಸ್: 1. ಜೋಸ್ ಬಟ್ಲರ್, 2. ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆ), 4. ರಿಯಾನ್ ಪರಾಗ್, 5. ​​ದೇವದತ್ ಪಡಿಕ್ಕಲ್, 6. ಶಿಮ್ರಾನ್ ಹೆಟ್ಮೆಯರ್, 7. ಆರ್ ಅಶ್ವಿನ್, 8. ಟ್ರೆಂಟ್ ಬೌಲ್ಟ್, 9. ಪ್ರಸಿದ್ಧ್ ಕೃಷ್ಣ, 10. ಯುಜ್ವೇಂದ್ರ ಚಹಾಲ್, 11. ಓಬೇದ್ ಮೆಕಾಯ್.

Story first published: Friday, May 27, 2022, 9:43 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X