ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಉತ್ತಮ ನಾಯಕನನ್ನು ಹೆಸರಿಸಿದ ಸಂಜಯ್ ಮಂಜ್ರೇಕರ್!

IPL 2022: Sanjay Manjrekar said Faf du Plessis looked better captain than Virat Kohli

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಈ ಹಿಂದಿನ ಆವೃತ್ತಿಗಿಂತ ಅದ್ಭುತ ಪ್ರದರ್ಶನ ನೀಡಿದೆ ಎಂದು ತಂಡವನ್ನು ಪ್ರಶಂಸಿದಿದ್ದಾರೆ. ಈ ಸಂದರ್ಭದಲ್ಲಿ ತಂಡದ ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆಯೂ ಪ್ರತಿಕ್ರಿಯಿಸಿದ್ದು ಇಬ್ಬರನ್ನು ಹೋಲಿಕೆ ಮಾಡಿದ್ದಾರೆ.

2021ರ ಐಪಿಎಲ್ ಆವೃತ್ತಿಯ ದ್ವಿತಿಯಾರ್ಧ ಆರಂಭವಾಗುತ್ತಿದ್ದಂತೆಯೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು ಮುಂದಿನ ಆವೃತ್ತಿಯಿಂದ ತಾನು ನಾಯಕನಾಗಿ ಮುಂದುವರಿಯುವುದಿಲ್ಲ ಕೇವಲ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದು ಘೋಷಿಸಿದ್ದರು. ಹೀಗಾಗಿ ಈ ಬಾರಿ ನಡೆದ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ಆರ್‌ಸಿಬಿ ತಂಡರ ಅವರನ್ನು ನಾಯಕನನ್ನಾಗಿ ನೇಮಿಸಿತ್ತು. ಫಾಫ್ ನಾಯಕತ್ವದಲ್ಲಿ ಆರ್‌ಸಿಬಿ ಫ್ಲೇಆಫ್‌ವರೆಗೆ ಪ್ರವೇಶಿಸಿದ್ದು ಟೂರ್ನಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?

ಕೊಹ್ಲಿಗಿಂತ ಫಾಫ್ ಬೆಸ್ಟ್ ಎಂದ ಮಂಜ್ರೇಕರ್

ಕೊಹ್ಲಿಗಿಂತ ಫಾಫ್ ಬೆಸ್ಟ್ ಎಂದ ಮಂಜ್ರೇಕರ್

ಕಳೆದ ಬಾರಿಯ ಐಪಿಎಲ್ ಆವೃತ್ತಿಗಿಂತ ಆರ್‌ಸಿಬ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದಿದ್ದಾರೆ ಮಂಜ್ರೆಕರ್. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ ಮಂಜ್ರೇಕರ್. ವಿರಾಟ್ ಕೊಹ್ಲಿಗಿಂತ ಫಾಫ್ ಉತ್ತಮ ನಾಯಕ ಎಂದಿದ್ದಾರೆ. ಆದರೆ ಅವರಿಬ್ಬರಿಂದಲೂ ಈ ಆವೃತ್ತಿಯಲ್ಲಿ ಮತ್ತಷ್ಟಿ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು. ಈ ಹಂತದವರೆಗೆ ಬಂದಿದ್ದ ಅವರು ಇಲ್ಲಿ ಗೆಲ್ಲಬೇಕಾಗಿತ್ತು. ಎಲ್ಲಿ ಎಡವಿದರು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ ಮಂಜ್ರೇಕರ್.

ಬೌಲಿಂಗ್ ವಿಭಾಗವನ್ನು ನಿಭಾಯಿಸಿದ ಬಗ್ಗೆ ಮೆಚ್ಚುಗೆ

ಬೌಲಿಂಗ್ ವಿಭಾಗವನ್ನು ನಿಭಾಯಿಸಿದ ಬಗ್ಗೆ ಮೆಚ್ಚುಗೆ

ಇನ್ನು ನಾಯಕನಾಗಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಮಂಜ್ರೇಕರ್ ಕೊಂಡಾಡಿದ್ದಾರೆ. "ಬೌಲಿಂಗ್ ವಿಭಾಗವನ್ನು ಬಳಸಿಕೊಂಡ ರೀತಿಗೆ ಫಾಫ್ ಅವರನ್ನು ಪ್ರಶಂಸಿಸಬೇಕು. ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಅದ್ಭುತವಾಗಿ ಫಾಫ್ ಆರಂಭವನ್ನು ಪಡೆದುಕೊಂಡರೂ ಹೆಚ್ಚಿನ ಆಟಗಾರರಂತೆ ಅದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ನನ್ನ ಪ್ರಕಾರ ನಾಯಕನಾಗಿ ಮುಂದುವರಿಯಲು ಫಾಫ್ ಉತ್ತಮ ಆಯ್ಕೆ" ಎಂದು ಸಂಜಯ್ ಮಂಜ್ರೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಾಫ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ

ಫಾಫ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ

ಇನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಲು ಯಶಸ್ವಿಯಾಗಿದೆ. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 8 ಗೆಲುವು ಹಾಗೂ 6 ಸೋಲಿನಿಂದಿಗೆ 4ನೇ ಸ್ಥಾನವನ್ನು ಪಡೆದುಕೊಂಡ ಆರ್‌ಸಿಬಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧಧ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲು ಅನುಭವಿಸಿದ ಕಾರಣ ಟೂರ್ನಿಯ ಫೈನಲ್ ಹಂತಕ್ಕೇರಲು ಆರ್‌ಸಿಬಿ ವಿಫಲವಾಗಿದೆ.

ಕೊಹ್ಲಿ ವೈಫಲ್ಯ, ಮಿಂಚಿದ ಡಿಕೆ, ಶಹ್ಬಾಜ್, ಹರ್ಷಲ್

ಕೊಹ್ಲಿ ವೈಫಲ್ಯ, ಮಿಂಚಿದ ಡಿಕೆ, ಶಹ್ಬಾಜ್, ಹರ್ಷಲ್

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಆಡಿದ 16 ಪಂದ್ಯಗಳಲ್ಲಿ ಕೊಹ್ಲಿ ಕೇವಲ ಎರಡು ಅರ್ಧ ಶತಕಗಳನ್ನು ಮಾತ್ರವೇ ಗಳಿಸಿದ್ದಾರೆ. ಆದರೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್, ಯುವ ಆಲ್‌ರೌಂಡರ್ ಶಹ್ಬಾಜ್ ಅಹ್ಮದ್ ಹಾಗೂ ವೇಗಿ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದು ತಂಡದ ಯಶಸ್ವಿಗೆ ಪ್ರಮುಖ ಪಾತ್ರವಹಿಸಿದ್ದಾರೆ

Story first published: Saturday, May 28, 2022, 19:55 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X