ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತದೇ ತಪ್ಪು: ಐಪಿಎಲ್‌ನ ಈ ತಂಡದ ನಾಯಕ ಕೊಹ್ಲಿ ನೋಡಿ ಬ್ಯಾಟಿಂಗ್ ಕಲಿಯಬೇಕಿದೆ ಎಂದ ರವಿಶಾಸ್ತ್ರಿ

IPL 2022: Sanju Samson needs to get into Virat Kohlis game says Ravi Shastri

ಇಂಡಿಯನ್ ಪ್ರೀಮಿಯರ್ ಲೀಗ್, ದೇಸಿ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಇರುವ ಉತ್ತಮ ವೇದಿಕೆ ಎಂಬ ಖ್ಯಾತಿಯನ್ನು ಪಡೆದಿದೆ. ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯುವ ಆಟಗಾರರಿಗೆ ಮಾತ್ರವಲ್ಲದೇ ಈಗಾಗಲೇ ಅಂತರರಾಷ್ಟ್ರೀಯ ತಂಡದಲ್ಲಿ ಆಡಿ ಕಳಪೆ ಫಾರ್ಮ್‌ ಹೊಂದಿ ತಂಡದಿಂದ ಹೊರಬಿದ್ದ ಆಟಗಾರರಿಗೂ ಸಹ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಕೂಡ ಸಹಕಾರಿಯಾಗಿದೆ.

RCB vs RR: ಅಬ್ಬರಿಸಿದ ಅಹ್ಮದ್, ಡಿಕೆ; ರಾಜಸ್ಥಾನ್ ರಾಯಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಆರ್‌ಸಿಬಿRCB vs RR: ಅಬ್ಬರಿಸಿದ ಅಹ್ಮದ್, ಡಿಕೆ; ರಾಜಸ್ಥಾನ್ ರಾಯಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಆರ್‌ಸಿಬಿ

ಇಂತಹ ಉತ್ತಮ ವೇದಿಕೆಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಮತ್ತೆ ಅಂತರರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದು ಮಿಂಚಿದ ಹಲವಾರು ಕ್ರಿಕೆಟಿಗರ ಉದಾಹರಣೆಗಳು ನಮ್ಮೆಲ್ಲರ ಮುಂದೆಯೇ ಇದ್ದು, ಇನ್ನೂ ಕೆಲ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿ ಅಂತರರಾಷ್ಟ್ರೀಯ ತಂಡ ಸೇರಿಯೂ ಸಹ ಅಲ್ಲಿ ಉತ್ತಮ ಪ್ರದರ್ಶನ ನೀಡಲಾಗದೇ ವಿಫಲರಾಗಿದ್ದಾರೆ.

ಐಪಿಎಲ್ 2022: ಎಲ್ಲಾ 10 ತಂಡಗಳ ಬೆಲೆಯ ವಿವರ ಇಲ್ಲಿದೆ; ದುಬಾರಿ ತಂಡ ಯಾವುದು?ಐಪಿಎಲ್ 2022: ಎಲ್ಲಾ 10 ತಂಡಗಳ ಬೆಲೆಯ ವಿವರ ಇಲ್ಲಿದೆ; ದುಬಾರಿ ತಂಡ ಯಾವುದು?

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದು, ಟೂರ್ನಿಯಲ್ಲಿ ಕೆಲ ಯುವ ಪ್ರತಿಭೆಗಳು ಮಿಂಚುತ್ತಿದ್ದರೆ, ಇನ್ನೂ ಕೆಲ ಅನುಭವಿ ಕ್ರಿಕೆಟಿಗರು ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಅಂತಹ ಅನುಭವಿ ಕ್ರಿಕೆಟಿಗನೋರ್ವನ ಕುರಿತು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದು, ಆತ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಿ ಕಲಿಯಬೇಕಿದೆ ಎಂದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಸ್ಥಿರತೆ ಇಲ್ಲದ್ದರ ಕುರಿತು ಶಾಸ್ತ್ರಿ ಬೇಸರ

ಸ್ಥಿರತೆ ಇಲ್ಲದ್ದರ ಕುರಿತು ಶಾಸ್ತ್ರಿ ಬೇಸರ

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಕುರಿತು ರವಿಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಸಂಜು ಸ್ಯಾಮ್ಸನ್ ಒಂದೆರಡು ಪಂದ್ಯಗಳಲ್ಲಿ ಅಬ್ಬರಿಸಿ ನಂತರದ ಪಂದ್ಯಗಳಲ್ಲಿ ಸಾಲು ಸಾಲು ಕಡಿಮೆ ರನ್ ಗಳಿಸುವ ಕಾರಣಕ್ಕೆ ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ರವಿಶಾಸ್ತ್ರಿ ಕೂಡ ಈ ಕುರಿತು ಮಾತನಾಡಿದ್ದು, ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇರಬೇಕು ಎಂದಿದ್ದಾರೆ.

ಹತ್ತು ವರ್ಷಗಳಿಂದ ಅದೇ ತಪ್ಪು

ಹತ್ತು ವರ್ಷಗಳಿಂದ ಅದೇ ತಪ್ಪು

ಸಂಜು ಸ್ಯಾಮ್ಸನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 27 ಎಸೆತಗಳಿಗೆ 55 ರನ್ ಕಲೆಹಾಕಿದ್ದರು, ನಂತರ ನಡೆದ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 21 ಎಸೆತಗಳಲ್ಲಿ 30 ರನ್ ಗಳಿಸಿದ್ದರು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ತೃತೀಯ ಪಂದ್ಯದಲ್ಲಿ 8 ಎಸೆತಗಳಲ್ಲಿ 8 ರನ್ ಕಲೆಹಾಕಿದರು. ಹೀಗೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ನಂತರದ ಎರಡು ಪಂದ್ಯಗಳಲ್ಲಿ ಅದೇ ರೀತಿ ಅಬ್ಬರಿಸುವಲ್ಲಿ ವಿಫಲವಾಗಿರುವುದರ ಕುರಿತು ಮಾತನಾಡಿರುವ ರವಿಶಾಸ್ತ್ರಿ ಹತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಆತ 20ರಿಂದ 25 ರನ್ ಗಳಿಸಿ ಔಟ್ ಆಗಿ ಮತ್ತದೇ ತಪ್ಪು ಮಾಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.

Kohli ಹಾಗು Chahal ಅವರ ಮುಖಾಮುಖಿಯ ಅಂತ್ಯ ಹೀಗಿತ್ತು | Oneindia Kannada
ಕೊಹ್ಲಿ ಬ್ಯಾಟಿಂಗ್ ನೋಡಿ ಕಲಿಯಬೇಕಿದೆ

ಕೊಹ್ಲಿ ಬ್ಯಾಟಿಂಗ್ ನೋಡಿ ಕಲಿಯಬೇಕಿದೆ

ಇನ್ನೂ ಮುಂದುವರೆದು ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಕುರಿತು ಮಾತನಾಡಿರುವ ರವಿಶಾಸ್ತ್ರಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಧಾನವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಹಿಡಿತ ಹಾಗೂ ಸ್ಥಿರತೆ ಹೊಂದಿದ್ದು, ಎದುರಾಳಿಗಳ ವಿರುದ್ಧ ದೊಡ್ಡ ರನ್ ಕಲೆಹಾಕುತ್ತಾರೆ, ಸಂಜು ಸ್ಯಾಮ್ಸನ್ ಕೂಡ ವಿರಾಟ್ ಕೊಹ್ಲಿ ರೀತಿ ಆಡಿದರೆ, ಎದುರಾಳಿ ಬೌಲರ್‌ಗಳ ಬೌಲಿಂಗ್‌ನ್ನು ಕೇವಲ ವೀಕ್ಷಿಸಿ ಬ್ಯಾಟ್ ಬೀಸುವುದಕ್ಕಿಂತ ಎಸೆತಗಳನ್ನು ಸರಿಯಾಗಿ ಗಮನಿಸಿ ಬ್ಯಾಟ್ ಬೀಸಿದರೆ ಹೆಚ್ಚಿನ ರನ್ ಕಲೆಹಾಕಬಹುದು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.

Story first published: Wednesday, April 6, 2022, 12:50 [IST]
Other articles published on Apr 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X