ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದೆಂಥ ನಡವಳಿಕೆ: ಔಟ್ ಆಗಿ ಮೆಕ್ಕಲಮ್ ಜೊತೆ ಮೈದಾನದಲ್ಲೇ ವಾದಕ್ಕಿಳಿದ ಶ್ರೇಯಸ್ ಐಯ್ಯರ್ ವಿರುದ್ಧ ಕಿಡಿ!

IPL 2022: Shreyas Iyer argued with KKR head coach Brendon McCullum during KKR vs RR game

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬೃಹತ್ ರನ್ ಮೊತ್ತಗಳ ಹಲವು ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ಬಹುತೇಕ ಪಂದ್ಯಗಳಲ್ಲಿ ಬೃಹತ್ ಮೊತ್ತ ದಾಖಲಾಗಿದ್ದು, ಹಲವು ಪಂದ್ಯಗಳಲ್ಲಿ ಈ ಮೊತ್ತವನ್ನು ಚೇಸ್ ಕೂಡ ಮಾಡಲಾಗಿದೆ. ಅದೇ ರೀತಿ ನಿನ್ನೆ ( ಏಪ್ರಿಲ್ 18 ) ನಡೆದ ಟೂರ್ನಿಯ 30ನೇ ಪಂದ್ಯ ಕೂಡ ಬೃಹತ್ ರನ್‌ ಮೊತ್ತದ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಮುಂಬೈನ ಬ್ರನೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಿದವು.

ಕೆಕೆಆರ್ ವಿರುದ್ಧ ರಾಜಸ್ಥಾನ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಎರಡೂ ರಾಯಲ್ಸ್ ಪಾಲು!ಕೆಕೆಆರ್ ವಿರುದ್ಧ ರಾಜಸ್ಥಾನ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಎರಡೂ ರಾಯಲ್ಸ್ ಪಾಲು!

ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಶತಕ ಸಿಡಿಸಿ ಅಬ್ಬರಿಸಿದರೆ, ಮಧ್ಯಮ ಕ್ರಮಾಂಕದ ಆಟಗಾರರಾದ ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ವೇಗವಾಗಿ ರನ್ ಕಲೆಹಾಕಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ವಿಫಲವಾದ ಕೋಲ್ಕತ್ತಾ ನೈಟ್ ರೈಡರ್ಸ್ 218 ರನ್‌ಗಳ ಬೃಹತ್ ಗುರಿಯನ್ನು ಪಡೆಯಿತು.

ಈ ಬ್ಯಾಟ್ಸ್‌ಮನ್‌ಗೆ ಬೌಲ್ ಮಾಡುವುದು ತುಂಬಾನೆ ಕಷ್ಟವಾಗಿತ್ತು: ಸುನಿಲ್ ನರೈನ್ಈ ಬ್ಯಾಟ್ಸ್‌ಮನ್‌ಗೆ ಬೌಲ್ ಮಾಡುವುದು ತುಂಬಾನೆ ಕಷ್ಟವಾಗಿತ್ತು: ಸುನಿಲ್ ನರೈನ್

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಆರನ್ ಫಿಂಚ್ ಅರ್ಧಶತಕ ಸಿಡಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಸುನಿಲ್ ನರೈನ್ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿದರು. ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 51 ಎಸೆತಗಳಲ್ಲಿ 85 ರನ್ ಗಳಿಸಿ ಯುಜುವೇಂದ್ರ ಚಹಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ರಾಜಸ್ಥಾನ್ ರಾಯಲ್ಸ್ ವೇಗವಾಗಿ ವಿಕೆಟ್ ಕಳೆದುಕೊಂಡು ಆಲ್ಔಟ್ ಆಗಿ 7 ರನ್‌ಗಳ ಸೋಲನ್ನು ಅನುಭವಿಸಿ ಹ್ಯಾಟ್ರಿಕ್ ಸೋಲನ್ನು ಕಂಡಿತು. ಹೀಗೆ ಶ್ರೇಯಸ್ ಐಯ್ಯರ್ ನಾಯಕತ್ವದ ತಂಡ ಆರಂಭದಲ್ಲಿ ಅಬ್ಬರಿಸಿ ಇತ್ತೀಚಿನ ಪಂದ್ಯಗಳಲ್ಲಿ ಸಾಲುಸಾಲು ಸೋಲನ್ನು ಅನುಭವಿಸಿದ್ದು ಐಯ್ಯರ್ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗೂ ಶ್ರೇಯಸ್ ಐಯ್ಯರ್ ಇದೇ ಪಂದ್ಯದ ವೇಳೆ ತಮ್ಮ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್ ಜೊತೆ ವಾದಕ್ಕಿಳಿದ ಘಟನೆ ನಡೆದಿದೆ. ಈ ಕುರಿತಾದ ಮಾಹಿತಿ ಕೆಳಕಂಡಂತಿದೆ..

ಔಟ್ ಆದ ಬೆನ್ನಲ್ಲೇ ಜೋರಾಗಿ ಮಾತನಾಡಿದ ಐಯ್ಯರ್

ಔಟ್ ಆದ ಬೆನ್ನಲ್ಲೇ ಜೋರಾಗಿ ಮಾತನಾಡಿದ ಐಯ್ಯರ್

ಯುಜುವೇಂದ್ರ ಚಹಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಶ್ರೇಯಸ್ ಐಯ್ಯರ್ ಡಗ್ಔಟ್ ಬಳಿ ತೆರಳುತ್ತಿದ್ದಂತೆ ಅಲ್ಲೇ ಕುಳಿತಿದ್ದ ಕೋಚ್ ಬ್ರೆಂಡನ್ ಮೆಕ್ಕಲಮ್‌ಗೆ ಯಾವುದೇ ವಿಷಯದ ಕುರಿತು ದೂರು ನೀಡುತ್ತಿರುವುದರ ರೀತಿ ಕಂಡುಬಂದಿದೆ. ಡಗ್ಔಟ್‌ಗೆ ತೆರಳಿ ಬ್ಯಾಟ್ ಇಡುವ ಮುನ್ನವೇ ಕೋಚ್ ಜೊತೆ ಈ ರೀತಿ ಶ್ರೇಯಸ್ ಐಯ್ಯರ್ ವಾದಕ್ಕಿಳಿದಿದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ನಡವಳಿಕೆ ಸರಿಯಲ್ಲ

ಈ ನಡವಳಿಕೆ ಸರಿಯಲ್ಲ

ಇನ್ನು ಕೋಚ್ ಬ್ರೆಂಡನ್ ಮೆಕ್ಕಲಮ್ ಜೊತೆ ಶ್ರೇಯಸ್ ಐಯ್ಯರ್ ನಡೆದುಕೊಂಡಿರುವ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಓರ್ವ ಕೋಚ್ ಜತೆ ಈ ರೀತಿ ಮಾತನಾಡುವುದು ಸರಿಯಲ್ಲ, ಡಗ್ಔಟ್‌ಗೆ ತೆರಳಿ ಬ್ಯಾಟ್ ಇಟ್ಟ ನಂತರ ಸಮಾಧಾನವಾಗಿ ಚರ್ಚಿಸುವ ಬದಲು ಈ ರೀತಿ ಹೋಗುತ್ತಿದ್ದಂತೆ ಕೂಗಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ ಈ ವಿಡಿಯೋದಲ್ಲಿ ಹೆಚ್ಚು ಪ್ರತಿಕ್ರಿಯೆ ನೀಡದೇ ಕುಳಿತಿದ್ದ ಬ್ರೆಂಡನ್ ಮೆಕ್ಕಲಮ್ ಕಂಡ ಕೆಲ ನೆಟ್ಟಿಗರು ಶ್ರೇಯಸ್ ಐಯ್ಯರ್ ನಡೆಗೆ ಕಿಡಿಕಾರಿದ್ದಾರೆ.

ಪ್ಲೇ‌ಆಫ್ ಗೆ ಎಂಟ್ರಿ ಕೊಡಬೇಕು ಅಂದ್ರೆ ಮುಂಬೈಗಿರೋ ದಾರಿ ಏನು? | Oneindia Kannada
ಟೂರ್ನಿಯಲ್ಲಿ ಶ್ರೇಯಸ್ ಐಯ್ಯರ್ ಅಂಕಿಅಂಶ

ಟೂರ್ನಿಯಲ್ಲಿ ಶ್ರೇಯಸ್ ಐಯ್ಯರ್ ಅಂಕಿಅಂಶ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 7 ಪಂದ್ಯಗಳನ್ನಾಡಿದ್ದು, 236 ರನ್ ಕಲೆಹಾಕಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ 85 ರನ್ ಬಾರಿಸಿರುವ ಶ್ರೇಯಸ್ ಐಯ್ಯರ್ 2 ಬಾರಿ ಅರ್ಧಶತಕ ಸಿಡಿಸಿದ್ದಾರೆ.

Story first published: Tuesday, April 19, 2022, 15:28 [IST]
Other articles published on Apr 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X