ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಯಿಂದ ಹೊರಬಿದ್ದಿರುವ ಹರ್ಷಲ್ ಪಟೇಲ್ ಬದಲು ಕಣಕ್ಕೆ ಈ ಆಟಗಾರ; ತಂಡದಲ್ಲಿ ಭಾರೀ ಬದಲಾವಣೆ!

IPL 2022: Siddarth Kaul likely ro replace Harshal Patel in RCB vs CSK game

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದು 15 ಪಂದ್ಯಗಳನ್ನಾಡಿ 32 ವಿಕೆಟ್‌ಗಳನ್ನು ಪಡೆಯುವುದರ ಮೂಲಕ ಪರ್ಪಲ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮಿದ್ದ ಪ್ರತಿಭಾವಂತ ಬೌಲರ್ ಹರ್ಷಲ್ ಪಟೇಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 10.75 ಕೋಟಿ ನೀಡಿ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಅವರನ್ನು ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಹೀಗೆ ಈ ಬಾರಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಕಣಕ್ಕಿಳಿದಿರುವ ಹರ್ಷಲ್ ಪಟೇಲ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.

IPL 2022: ಈ ಐವರು ಕಣಕ್ಕಿಳಿದಿದ್ದರೆ ಮುಂಬೈ ಇಂಡಿಯನ್ಸ್‌‌ಗೆ ಸತತ ಸೋಲಿನ ಮುಖಭಂಗವಾಗುತ್ತಿರಲಿಲ್ಲ!IPL 2022: ಈ ಐವರು ಕಣಕ್ಕಿಳಿದಿದ್ದರೆ ಮುಂಬೈ ಇಂಡಿಯನ್ಸ್‌‌ಗೆ ಸತತ ಸೋಲಿನ ಮುಖಭಂಗವಾಗುತ್ತಿರಲಿಲ್ಲ!

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿದು ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 23 ರನ್ ನೀಡಿ 2 ವಿಕೆಟ್ ಪಡೆದರು. ಈ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಹರ್ಷಲ್ ಪಟೇಲ್ ಅವರ ಸೋದರಿ ನಿಧನ ಹೊಂದಿದ ಕಾರಣ ಪಟೇಲ್ ತಕ್ಷಣವೇ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ಪ್ರಯಾಣ ಬೆಳೆಸಿ ಬಯೋ ಬಬಲ್ ತೊರೆದರು.

RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ತಪ್ಪದೇ ಹೊರಗಿಡಿ!RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ತಪ್ಪದೇ ಹೊರಗಿಡಿ!

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಕ್ತಾಯದ ನಂತರ ಇಂದು ( ಏಪ್ರಿಲ್ 12 ) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೆಣಸಾಟ ನಡೆಸಲಿದ್ದು, ಈ ಪಂದ್ಯಕ್ಕೆ ಬಯೋ ಬಬಲ್ ತೊರೆದಿದ್ದ ಹರ್ಷಲ್ ಪಟೇಲ್ ಲಭ್ಯರಾಗುತ್ತಾರಾ ಅಥವಾ ಅವರ ಬದಲಾಗಿ ಬದಲಿ ಆಟಗಾರರು ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೆಳಕಂಡಂತಿದೆ..

ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಾರಾ?

ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಾರಾ?

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಕ್ತಾಯದ ನಂತರ ಬಯೋ ಬಬಲ್ ತ್ಯಜಿಸಿರುವ ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿದ್ದರೂ ಸಹ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಹೌದು, ಬಯೋ ಬಬಲ್ ತ್ಯಜಿಸಿ ನಂತರ ತಂಡ ಸೇರಿರುವ ಹರ್ಷಲ್ ಪಟೇಲ್ ನಿಯಮದ ಪ್ರಕಾರ 3 ದಿನಗಳ ಕಡ್ಡಾಯ ಕ್ವಾರಂಟೈನ್‌ನ್ನು ಅನುಸರಿಸಲೇಬೇಕಾಗಿದೆ. ಹೀಗಾಗಿ ಹರ್ಷಲ್ ಪಟೇಲ್ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ತಂಡ ಸೇರಿದ್ದರೂ ಸಹ ಪಂದ್ಯದಲ್ಲಿ ಕಣಕ್ಕಿಳಿಯಲು ಅಲಭ್ಯರಾಗಲಿದ್ದಾರೆ.

ಹರ್ಷಲ್ ಪಟೇಲ್ ಬದಲು ಕಣಕ್ಕಿಳಿಯಲಿದ್ದಾರೆ ಈ ಆಟಗಾರ

ಹರ್ಷಲ್ ಪಟೇಲ್ ಬದಲು ಕಣಕ್ಕಿಳಿಯಲಿದ್ದಾರೆ ಈ ಆಟಗಾರ

ಇನ್ನು ಹರ್ಷಲ್ ಪಟೇಲ್ ಅಲಭ್ಯರಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಸಿದ್ಧಾರ್ಥ್ ಕೌಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. 2013ರಿಂದ 2021ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಒಟ್ಟು 54 ಪಂದ್ಯಗಳನ್ನಾಡಿರುವ ಸಿದ್ಧಾರ್ಥ್ ಕೌಲ್ 58 ವಿಕೆಟ್ ಪಡೆದಿದ್ದಾರೆ.

ಯಾರಿದು Suyash Prabhudessai | Virat Kohli Reaction | Oneindia Kannada
ತಂಡದಲ್ಲಿ ಪ್ರಮುಖ ಬದಲಾವಣೆ

ತಂಡದಲ್ಲಿ ಪ್ರಮುಖ ಬದಲಾವಣೆ

ಇನ್ನು ತಂಡದಲ್ಲಿ ಹರ್ಷಲ್ ಪಟೇಲ್ ಅಲಭ್ಯತೆಯಿಂದಾಗಿ ಬದಲಿ ಆಟಗಾರರು ಕಣಕ್ಕಿಳಿಯುವುದರ ಜೊತೆಗೆ ತಂಡದಲ್ಲಿ ಇತರೆ ಪ್ರಮುಖ ಬದಲಾವಣೆಗಳೂ ಸಹ ಆಗುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾ ವೇಗಿಗಳಾದ ಜೋಶ್ ಹೇಜಲ್‌ವುಡ್ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದು, ಈ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಬದಲಾಗಿ ಜೋಶ್ ಹೇಜಲ್‌ವುಡ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Story first published: Tuesday, April 12, 2022, 17:10 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X