ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಮೂವರಲ್ಲಿ ಟೀಮ್ ಇಂಡಿಯಾಗೆ ಯಾರು ಆಯ್ಕೆಯಾಗ್ತಾರೋ ನೋಡೋಣ ಎಂದ ಗಂಗೂಲಿ

IPL 2022: Sourav Ganguly names 2 uncapped players who impressed him in this tournament

ಇಂಡಿಯನ್ ಪ್ರೀಮಿಯರ್ ಲೀಗ್, ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂದೇ ಖ್ಯಾತಿಯನ್ನು ಹೊಂದಿರುವಂತಹ ಬೃಹತ್ ಚುಟುಕು ಕ್ರಿಕೆಟ್ ಸಮರ. ಈ ಕ್ಯಾಶ್ ರಿಚ್ ಲೀಗ್ ಹಲವಾರು ಯುವ ಕ್ರಿಕೆಟಿಗರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ವೇದಿಕೆಯನ್ನು ಕಲ್ಪಿಸಿಕೊಟ್ಟ ಹಲವಾರು ಉದಾಹರಣೆಗಳಿವೆ.

ಭಾರತ vs ದ. ಆಫ್ರಿಕಾ: ಐದು ಪಂದ್ಯಗಳ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಸೌತ್ ಆಫ್ರಿಕಾಭಾರತ vs ದ. ಆಫ್ರಿಕಾ: ಐದು ಪಂದ್ಯಗಳ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಸೌತ್ ಆಫ್ರಿಕಾ

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಆಯ್ಕೆಗಾರರ ಮನ ಗೆದ್ದು, ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಸ್ಟಾರ್ ಕ್ರಿಕೆಟಿಗರಾಗಿ ಹಲವಾರು ಆಟಗಾರರು ನಿಂತಿದ್ದು, ಕಳಪೆ ಪ್ರದರ್ಶನ ನೀಡಿ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಹೊರಬಿದ್ದ ಹಲವಾರು ಅನುಭವಿ ಆಟಗಾರರಿಗೂ ಸಹ ಈ ಇಂಡಿಯನ್ ಪ್ರೀಮಿಯರ್ ಲೀಗ್ ಕಮ್‌ಬ್ಯಾಕ್ ಮಾಡಲು ಸಹಕಾರಿಯಾಗಿದೆ.

ಕ್ರಿಸ್‌ಗೇಲ್‌ ಮತ್ತು ಎಬಿಡಿಗೆ RCBಯ ಹಾಲ್‌ ಆಫ್ ಫೇಮ್ ಗೌರವ: ಭಾವುಕನಾದ ಎಬಿಡಿಕ್ರಿಸ್‌ಗೇಲ್‌ ಮತ್ತು ಎಬಿಡಿಗೆ RCBಯ ಹಾಲ್‌ ಆಫ್ ಫೇಮ್ ಗೌರವ: ಭಾವುಕನಾದ ಎಬಿಡಿ

ಇದಕ್ಕೆ ತಾಜಾ ಉದಾಹರಣೆಯೆಂದರೆ ಹಾರ್ದಿಕ್ ಪಾಂಡ್ಯ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾ ಸ್ಥಾನ ಗಿಟ್ಟಿಸಿಕೊಂಡಿರುವ ಹಲವು ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಇನ್ನು ಇದೇ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ನಾಯಕ್ವವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಹಾರ್ದಿಕಾ ಪಾಂಡ್ಯ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆಗಳು ಹೆಚ್ಚಿವೆ. ಪಾಂಡ್ಯ ಜತೆಗೆ ಯುಜುವೇಂದ್ರ ಚಹಲ್, ಕುಲ್‌ದೀಪ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ಕೂಡ ಆಯ್ಕೆಗಾರರ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದು, ಮತ್ತೆ ಟೀಮ್ ಇಂಡಿಯಾ ಸೇರುವ ಸಾಧ್ಯತೆಗಳಿವೆ. ಇನ್ನು ಅನುಭವಿ ಆಟಗಾರರ ಜತೆಗೆ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚುತ್ತಿರುವ ಇಬ್ಬರು ಕ್ರಿಕೆಟಿಗರ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಹಾಗೂ ಟೂರ್ನಿಯಲ್ಲಿ ಮಿಂಚುತ್ತಿರುವ ಮೂವರು ಆಟಗಾರರು ಟೀಮ್ ಇಂಡಿಯಾಗೆ ಆಯ್ಕೆಯಾಗುವ ಕುರಿತೂ ಸಹ ಗಂಗೂಲಿ ಮಾತನಾಡಿದ್ದಾರೆ. ಇದರ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ..

ಟೀಮ್ ಇಂಡಿಯಾಗೆ ಈತ ಆಯ್ಕೆಯಾದರೆ ಆಶ್ಚರ್ಯವಿಲ್ಲ

ಟೀಮ್ ಇಂಡಿಯಾಗೆ ಈತ ಆಯ್ಕೆಯಾದರೆ ಆಶ್ಚರ್ಯವಿಲ್ಲ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿರುವ ಯುವ ವೇಗಿ ಉಮ್ರಾನ್ ಮಲಿಕ್ ಕುರಿತು ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಿಡ್‌ಡೇ ಸಂದರ್ಶನದಲ್ಲಿ ಮಾತನಾಡಿರುವ ಗಂಗೂಲಿ "150 ಕಿ.ಮೀ. ವೇಗದಲ್ಲಿ ಎಷ್ಟು ಬೌಲರ್‌ಗಳು ಚೆಂಡನ್ನು ಎಸೆಯಬಲ್ಲರು? ಹೆಚ್ಚು ಮಂದಿ ಇಲ್ಲ. ಈತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ನನಗೇನು ಆಶ್ಚರ್ಯವಿಲ್ಲ. ನಾವು ಈ ಬೌಲರ್‌ನ್ನು ಬಳಸುವಾಗ ನಿಗಾ ವಹಿಸಿ ಜಾಗರೂಕತೆಯಿಂದ ಬಳಸಬೇಕು" ಎಂದು ಉಮ್ರಾನ್ ಮಲಿಕ್ ಕುರಿತು ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ಗಂಗೂಲಿ ಮನಗೆದ್ದ ಮತ್ತೋರ್ವ ಬೌಲರ್ ಈತ

ಗಂಗೂಲಿ ಮನಗೆದ್ದ ಮತ್ತೋರ್ವ ಬೌಲರ್ ಈತ

ಉಮ್ರಾನ್ ಮಲಿಕ್ ಜೊತೆಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಕುಲ್‌ದೀಪ್ ಸೇನ್ ಬೌಲಿಂಗ್ ಕೂಡ ನನಗೆ ಇಷ್ಟವಾಯಿತು ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿರುವ ಕುಲ್‌ದೀಪ್ ಸೇನ್ 8 ವಿಕೆಟ್‌ಗಳನ್ನು ಪಡೆದಿದ್ದಾರೆ.

Mumbai Indians ಗೆಲ್ಲುವಂತಹ ಪಂದ್ಯದಲ್ಲಿ ಸೋತಿದ್ದು ಹೀಗೆ | Oneindia Kannada
ಈ ಮೂವರ ಆಯ್ಕೆ ಆಯ್ಕೆಗಾರರಿಗೆ ಬಿಟ್ಟದ್ದು

ಈ ಮೂವರ ಆಯ್ಕೆ ಆಯ್ಕೆಗಾರರಿಗೆ ಬಿಟ್ಟದ್ದು

ಇನ್ನೂ ಮುಂದುವರೆದು ಮಾತನಾಡಿದ ಗಂಗೂಲಿ ಟಿ ನಟರಾಜ್ ಕೂಡ ಕಮ್‌ಬ್ಯಾಕ್ ಮಾಡಿದ್ದು, ತಂಡದಲ್ಲಿ ಈಗಾಗಲೇ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್, ಕುಲ್‌ದೀಪ್ ಸೇನ್ ಮತ್ತು ಟಿ ನಟರಾಜನ್ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ನಿರ್ಧಾರ ಆಯ್ಕೆಗಾರರಿಗೆ ಬಿಟ್ಟದ್ದು ಎಂದಿದ್ದಾರೆ.

Story first published: Tuesday, May 17, 2022, 14:25 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X