ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: SRH ಕೋಚ್‌ ಆಗಿ ಆಯ್ಕೆಗೊಂಡ ಬ್ರಿಯಾನ್ ಲಾರಾ, ಡೇಲ್ ಸ್ಟೇನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15 ನೇ ಸೀಸನ್‌ಗಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಯಾರಿ ನಡೆಸಿದ್ದು, ರೀಟೈನ್ ಪ್ರಕ್ರಿಯೆ ಕೂಡ ಮುಗಿದಿದೆ. ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ ಎನ್ನಲಾಗಿದೆ.

Brian lara and steyn

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಐಪಿಎಲ್ 15 ನೇ ಸೀಸನ್‌ಗೆ 8 ತಂಡಗಳ ಬದಲಿಗೆ 10 ತಂಡಗಳ ಭಾಗವಹಿಸುವಿಕೆಯನ್ನು ಅನುಮೋದಿಸಿದೆ, ಇದರಿಂದಾಗಿ ಲಕ್ನೋ ಮತ್ತು ಅಹಮದಾಬಾದ್ ಎರಡು ಹೊಸ ತಂಡಗಳನ್ನು ಸೇರಿಸಲಾಗಿದೆ.

ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಅಭಿಮಾನಿಗಳು ಐಪಿಎಲ್ ಮೆಗಾ ಹರಾಜಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿಯು ತನ್ನ ಹೊಸ ಮ್ಯಾನೇಜ್‌ಮೆಂಟ್ ಅನ್ನು ಪರಿಚಯಿಸಿದೆ.

2016ರ ಐಪಿಎಲ್ ಚಾಂಪಿಯನ್ ಎಸ್‌ಆರ್‌ಎಚ್‌ ತಂಡದ ಕೋಚ್ ಹಾಗೂ ಇತರೆ ಸಹಾಯಕ ಕೋಚ್‌ಗಳ ಕುರಿತು ಎಸ್‌ಆರ್‌ಎಚ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಪ್ರಕಟಿಸಿದೆ. ಎಸ್‌ಆರ್‌ಎಚ್‌ನ ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಆಯ್ಕೆಯಾಗಿದ್ದು, ಬ್ರಿಯಾನ್ ಲಾರ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಗೊಂಡಿದ್ದಾರೆ. ಇನ್ನು ಮುರಳೀಧರನ್, ಡೇಲ್ ಸ್ಟೇನ್‌ನಂತಹ ದಿಗ್ಗಜ ಬೌಲರ್‌ಗಳು ಕೂಡ ಹೈದ್ರಾಬಾದ್ ಬಲ ಹೆಚ್ಚಿಸಿದ್ದಾರೆ.

IPL 2022ರಲ್ಲಿ ಎಸ್‌ಆರ್‌ಎಚ್‌ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳು

ಬ್ರಿಯಾನ್ ಲಾರಾ: ಸ್ಟ್ರಾಟರ್ಜಿ ಮತ್ತು ಬ್ಯಾಟಿಂಗ್ ಕೋಚ್
ಟಾಮ್ ಮೂಡಿ: ಹೆಡ್ ಕೋಚ್
ಸೈಮನ್ ಕ್ಯಾಟಿಚ್: ಅಸಿಸ್ಟೆಂಟ್ ಕೋಚ್
ಮುತ್ತಯ್ಯ ಮುರಳೀಧರನ್: ಸ್ಟ್ರಾಟರ್ಜಿ ಮತ್ತು ಸ್ಪಿನ್ ಬೌಲಿಂಗ್ ಕೋಚ್
ಡೇಲ್ ಸ್ಟೇನ್: ಪೇಸ್ ಬೌಲಿಂಗ್ ಕೋಚ್
ಹೇಮಂಗ್ ಬದಾನಿ: ಫೀಲ್ಡಿಂಗ್ ಕೋಚ್

ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿದ್ರೆ ಭಾರತಕ್ಕೆ ಪ್ಲಸ್ ಪಾಯಿಂಟ್: MSK ಪ್ರಸಾದ್

ಎಸ್‌ಆರ್‌ಎಚ್‌ನ ರೀಟೈನ್ ಪ್ಲೇಯರ್ಸ್

ಎಸ್‌ಆರ್‌ಎಚ್‌ನ ರೀಟೈನ್ ಪ್ಲೇಯರ್ಸ್

ಸನ್‌ರೈಸರ್ಸ್ ಹೈದ್ರಾಬಾದ್ (ಎಸ್‌ಆರ್‌ಎಚ್) ಮೂವರು ಆಟಗಾರರನ್ನ 2022ರ ಐಪಿಎಲ್ ಸೀಸನ್‌ಗೆ ರೀಟೈನ್ ಮಾಡಿಕೊಂಡಿದೆ. ಕೇನ್ ವಿಲಿಯಮ್ಸನ್ 14 ಕೋಟಿ ರೂಪಾಯಿಗೆ ರೀಟೈನ್ ಆದ ಮೊದಲ ಆಟಗಾರನಾಗಿದ್ದು, ಉಮ್ರಾನ್ ಮಲ್ಲಿಕ್ 4 ಕೋಟಿ ರೂಪಾಯಿ ಮತ್ತು ಅಬ್ದುಲ್ ಸಮಾದ್ 4 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ.

ಆದ್ರೆ ಪ್ರಮುಖ ಕೀ ಸ್ಪಿನ್ನರ್ ರಶೀದ್ ಖಾನ್‌ರ ಮನವೊಲಿಸಿ ರೀಟೈನ್ ಮಾಡಿಕೊಳ್ಳುವಲ್ಲಿ ಎಸ್‌ಆರ್‌ಎಚ್ ವಿಫಲಗೊಂಡಿದೆ. ಜೊತೆಗೆ ರಶೀದ್ ಖಾನ್‌ರನ್ನ ತಮ್ಮ ಫ್ರಾಂಚೈಸಿಯಿಂದ ತೊರೆಯುವಂತೆ ಲಕ್ನೋ ಫ್ರಾಂಚೈಸಿ ಮಾಡುತ್ತಿದೆ ಎಂದು ಈಗಾಗಲೇ ಬಿಸಿಸಿಐಗೆ ದೂರು ನೀಡಿದೆ.

ಎಸ್‌ಆರ್‌ಎಚ್ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡ ಬಳಿಕ ಅದರ ಪರ್ಸ್ ಮೌಲ್ಯವು 68 ಕೋಟಿ ರೂಪಾಯಿಗಳಷ್ಟಿದೆ.

ಐಪಿಎಲ್ 2022 ಸಿದ್ಧತೆಗೂ ಮುನ್ನ ಹಿನ್ನಡೆ; ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಟೂರ್ನಿ!

ತಾನು ಪ್ರತಿನಿಧಿಸಿದ ತಂಡಕ್ಕೆ ಕೋಚ್ ಆದ ಡೇಲ್ ಸ್ಟೇನ್!

ತಾನು ಪ್ರತಿನಿಧಿಸಿದ ತಂಡಕ್ಕೆ ಕೋಚ್ ಆದ ಡೇಲ್ ಸ್ಟೇನ್!

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇಯ್ನ್ ತಮ್ಮ ವೃತ್ತಿಜೀವನದಲ್ಲಿ ಎಸ್‌ಆರ್‌ಎಚ್ ಪರ ಒಂದೆರಡು ಸೀಸನ್ ಆಡಿದ್ದಾರೆ. ಆದ್ರೆ ಇದೀಗ ತಾವು ಆಡಿದ ಫ್ರಾಂಚೈಸಿಗೆ ಕೋಚ್ ಆಗಿ ಬಂದಿರುವುದು ವಿಶೇಷ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 95 ಪಂದ್ಯಗಳನ್ನು ಆಡಿದ್ದಾರೆ. ಆಫ್ರಿಕಾದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬಾತ ಸ್ಟೇನ್ ಇದುವರೆಗೂ 93 ಟೆಸ್ಟ್ ಪಂದ್ಯಗಳಲ್ಲಿ 22.95 ಬೌಲಿಂಗ್ ಸರಾಸರಿಯಲ್ಲಿ 439 ವಿಕೆಟ್‌ಗಳೊಂದಿಗೆ ಮಿಂಚಿದ್ದಾರೆ.

ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್, ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದು, ಲೀಗ್‌ನಲ್ಲಿ 97 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಮುಖ ಸ್ಟಾರ್‌ ಆಟಗಾರರನ್ನ ಈಗಾಗಲೇ ಕಳೆದುಕೊಂಡ ಎಸ್‌ಆರ್‌ಎಚ್‌ನ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ರಾಜೀನಾಮೆ ಸಲ್ಲಿಸಿದ್ದು, ಹೊಸ ಮ್ಯಾನೇಜ್‌ಮೆಂಟ್‌ನೊಂದಿಗೆ ಎಸ್‌ಆರ್ಎಚ್‌ ಸಿದ್ದಗೊಂಡಿದೆ.

Story first published: Thursday, December 23, 2021, 17:06 [IST]
Other articles published on Dec 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X