ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SRH vs KKR: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿರಾಯಾಸವಾಗಿ ಗೆದ್ದ ಕೆಕೆಆರ್

IPL 2022: SRH vs KKR: Kolkata Knight Riders Beat Sunrisers Hyderabad By 54 Runs

ಪ್ರಸ್ತುತ ನಡೆಯುತ್ತಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 61ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಎಸ್‌ಆರ್‌ಎಚ್ ವಿರುದ್ಧ ಕೆಕೆಆರ್ 54 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಎಸ್‌ಆರ್‌ಎಚ್ ಪ್ಲೇಆಫ್ ಬಾಗಿಲು ಮುಚ್ಚಿದಂತಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 54 ರನ್‌ಗಳ ಜಯ ದಾಖಲಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಇನ್ನು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಏಳನೇ ಬಾರಿ ಪರಾಭವ ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದ್ದು, ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ ಕೋಲ್ಕತ್ತಾ ನೈಟ್ ರೈಡರ್ಸ್ 178 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಕೇನ್ ವಿಲಿಯಮ್ಸನ್ ಬಳಗ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್‌ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕರಾದ ವೆಂಕಟೇಶ್ ಅಯ್ಯರ್ (7) ಮತ್ತು ಅಜಿಂಕ್ಯಾ ರಹಾನೆ (28) ಅಬ್ಬರಿಸುವ ಮೊದಲೇ ಜೊತೆಯಾಟ ಮುರಿದು ಬಿತ್ತು. ಮಾರ್ಕೋ ಜಾನ್ಸೆನ್ ಬೌಲಿಂಗ್‌ನಲ್ಲಿ ವೆಂಕಟೇಶ್ ಅಯ್ಯರ್ ಬೌಲ್ಡ್ ಆದರು. ನಂತರ ಬಂದ ನಿತೀಶ್ ರಾಣಾ ಜೊತೆಗೂಡಿ ಉತ್ತಮ ರನ್ ಕಲೆ ಹಾಕಿದರು.

ಇನ್ನೇನು ನಿತೀಶ್ ರಾಣಾ (26) ಅಬ್ಬರಿಸುವ ಸೂಚನೆ ಕೊಟ್ಟಾಗಲೇ ಅವರನ್ನು ಉಮ್ರಾನ್ ಮಲ್ಲಿಕ್ ಔಟ್ ಮಾಡಿದರು. ನಂತರ ಅಜಿಂಕ್ಯಾ ರಹಾನೆ ಮಲ್ಲಿಕ್‌ಗೆ ವಿಕೆಟ್ ಒಪ್ಪಿಸಿದರು. ಯುವ ಆಟಗಾರ ರಿಂಕು ಸಿಂಗ್ (6) ಅವರನ್ನು ನಟರಾಜನ್ ಎಲ್‌ಬಿ ಬಲೆಗೆ ಕೆಡವಿದರು.

SRH vs KKR: ಎಸ್‌ಆರ್‌ಎಚ್ ಗೆಲ್ಲಲು ಉತ್ತಮ ಮೊತ್ತದ ಗುರಿ ನೀಡಿದ ಕೆಕೆಆರ್SRH vs KKR: ಎಸ್‌ಆರ್‌ಎಚ್ ಗೆಲ್ಲಲು ಉತ್ತಮ ಮೊತ್ತದ ಗುರಿ ನೀಡಿದ ಕೆಕೆಆರ್

ನಂತರ 6ನೇ ವಿಕೆಟ್‌ಗೆ ಆಂಡ್ರೆ ರಸೆಲ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಜೊತೆಗೂಡಿ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ದಂಡಿಸಿದರು. ಈ ಜೊತೆಯಾಟವನ್ನು ಭವನೇಶ್ವರ್ ಕುಮಾರ್ ಸ್ಯಾಮ್ ಬಿಲ್ಲಿಂಗ್ಸ್ (34) ವಿಕೆಟ್ ಪಡೆಯುವುದರೊಂದಿಗೆ ಮುರಿದರು. ನಂತರ ಬಂದ ಸುನಿಲ್ ನರೈನ್ 1 ರನ್ ಗಳಿಸಿದರೆ, ಆಂಡ್ರೆ ರಸೆಲ್ 28 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗುಳಿದರು.

IPL 2022: SRH vs KKR: Kolkata Knight Riders Beat Sunrisers Hyderabad By 54 Runs

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳಾದ ಉಮ್ರಾನ್ ಮಲಿಕ್ 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 3 ವಿಕೆಟ್ ಪಡೆದರು. ಇದೇ ವೇಳೆ ಟಿ. ನಟರಾಜನ್ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ 1 ವಿಕೆಟ್ ಪಡೆದರು. ಮಾರ್ಕೋ ಜಾನ್ಸೆನ್ 30 ರನ್ ನೀಡಿ ಒಂದು ವಿಕೆಟ್ ಪಡೆದರು.

ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 178 ರನ್‌ಗಳ ಗುರಿಯನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕರಾದ ಅಭಿಷೇಕ್ ಶರ್ಮ ಮತ್ತು ಕೇನ್ ವಿಲಿಯಮ್ಸನ್ ಅವರಿಂದ ಉತ್ತಮ ಜೊತೆಯಾಟ ಬರಲಿಲ್ಲ. ಕೇನ್ ವಿಲಿಯಮ್ಸನ್ ಅವರು 9 ರನ್ ಗಳಿಸಿ ಔಟಾದರು. ನಂತರ ಬಂದ ರಾಹುಲ್ ತ್ರಿಪಾಠಿ (9) ಅಬ್ಬರಿಸುವ ಅಬ್ಬರಿಸುವ ಮೊದಲೇ ವಿಕೆಟ್ ಒಪ್ಪಿಸಿದರು. ಆಮೇಲೆ ಏಡನ್ ಮಾರ್ಕ್ರಾಮ್ (32) ಮತ್ತು ಅಭಿಷೇಕ್ ಶರ್ಮ (43) ಪ್ರತಿರೋಧ ಒಡ್ಡಲು ಪ್ರಯತ್ನಿಸಿದರು. ಆದರೆ ಈ ವೇಳೆ ಈ ಇಬ್ಬರು ಔಟಾಗುತ್ತಿದ್ದಂತೆ, ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಕಡೆ ಮುಖ ಮಾಡಿತು.

IPL 2022: SRH vs KKR: Kolkata Knight Riders Beat Sunrisers Hyderabad By 54 Runs

ನಿಕೋಲಸ್ ಪೂರನ್ ಮತ್ತು ವಾಷಿಂಗ್ಟನ್ ಸುಂದರ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ನಂತರ ಶಶಾಂಕ್ ಸಿಂಗ್ 11 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಂದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ತಂಡವನ್ನು ಗೆಲ್ಲಿಸಲಾಗಲಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್
ಕೋಲ್ಕತ್ತಾ ತಂಡದ ಪರ ಆಂಡ್ರೆ ರಸೆಲ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಟೀಮ್ ಸೌಥಿ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಇನ್ನುಳಿದಂತೆ ಉಮೇಶ್ ಯಾದವ್, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.

Story first published: Saturday, May 14, 2022, 23:26 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X