ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್‌, ಸಂಭಾವ್ಯ ಪ್ಲೇಯಿಂಗ್ 11

PBKS VS SRH

ಮುಂಬೈನ ವಾಂಖೆಡೆ ಮೈದಾನವು ಐಪಿಎಲ್ 2022ರ ಸೀಸನ್‌ನ ಕೊನೆಯ ಲೀಗ್ ಪಂದ್ಯಕ್ಕೆ ಸಜ್ಜಾಗಿದ್ದು, ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ 70ನೇ ಪಂದ್ಯವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಫಲಿತಾಂಶವು ಯಾವುದೇ ಮಹತ್ವವನ್ನು ಹೊಂದಿಲ್ಲ.

ಆದ್ರೂ ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಪಂಜಾಬ್ ಕಿಂಗ್ಸ್‌ ಪ್ಲೇ ಆಫ್ ತಲುಪಿದ್ರೂ ಸಹ ಕೊನೆಯ ಪಂದ್ಯದಲ್ಲಿ ಗೆಲುವಿನ ಮೂಲಕ ನಿರ್ಗಮಿಸಲು ಯೋಜನೆ ರೂಪಿಸಿಕೊಂಡಿದೆ. ಸನ್‌ರೈಸರ್ಸ್ ಹೈದ್ರಾಬಾದ್ ಪರ ಕೇನ್ ವಿಲಿಯಮ್ಸನ್ ಲಭ್ಯತೆಯು ಬಹುತೇಕ ಅನುಮಾನವಾಗಿದ್ದು, ಪಂಜಾಬ್ ಕಿಂಗ್ಸ್‌ ತಂಡವು ಇದನ್ನೇ ಅನುಕೂಲವಾಗಿ ತೆಗೆದುಕೊಳ್ಳುತ್ತಾ ಎಂಬುದನ್ನ ಕಾದು ನೋಡ್ಬೇಕು.

ಸನ್‌ರೈಸರ್ಸ್ ಹೈದ್ರಾಬಾದ್ ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ. ಅದೇ ಪಂಜಾಬ್ ಕಿಂಗ್ಸ್‌ ಏಳನೇ ಸ್ಥಾನ ಪಡೆದಿದ್ದು ಅದೇ ಸ್ಥಾನವನ್ನ ಉಳಿಸಿಕೊಳ್ಳುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 13 ಪಂದ್ಯಗಳಲ್ಲಿ ಆರು ಪಂದ್ಯ ಗೆದ್ದಿರುವ ಎಸ್‌ಆರ್‌ಎಚ್ ಹಾಗೂ ಪಂಜಾಬ್ ಕಿಂಗ್ಸ್‌ ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿವೆ.

ಹವಾಮಾನ ವರದಿ

ಹವಾಮಾನ ವರದಿ

ಮುಂಬೈನ ವಾಂಖೆಡೆ ಮೈದಾನದಲ್ಲಿ ರಾತ್ರಿ 7.30ಕ್ಕೆ ನಡೆಯುತ್ತಿರುವ ಈ ಪಂದ್ಯದ ಸಮಯದಲ್ಲಿ ಹವಾಮಾನವು 30 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದ್ದು, ಶೇ. 72ರಷ್ಟು ಹ್ಯುಮಿಡಿಟಿ ಇರಲಿದೆ ಮತ್ತು 11km/hr ವೇಗದಲ್ಲಿ ಗಾಳಿ ಬೀಸಲಿದೆ. ಇನ್ನು ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆಯಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ವಾಂಖೆಡೆ ಸ್ಟೇಡಿಯಂನಲ್ಲಿ ಬ್ಯಾಟರ್‌ಗಳಿಗೆ ಸಾಕಷ್ಟು ಫೇವರಿಟ್ ಪಿಚ್‌ಗಳಲ್ಲಿ ಒಂದಾಗಿದೆ. ಆದ್ರೂ ಸಹ ಪಿಚ್‌ನಲ್ಲಿ ಬೌನ್ಸ್‌ಗತಿ ಹೆಚ್ಚಿರುವುದನ್ನ ಕಾಣಬಹುದು. ಚಿಕ್ಕ ಬೌಂಡರಿ ಲೈನ್‌ಗಳು ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಕಲೆಹಾಕಲು ಸಹಾಯಕಾರಿಯಾಗಿವೆ.

ರಾತ್ರಿ ವೇಳೆಯಲ್ಲಿ ಭಾರಿ ಇಬ್ಬನಿ ಅಂಶವಿರುವ ಕಾರಣ ಎರಡೂ ತಂಡಗಳು ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಬಯಸುತ್ತವೆ. ಸೂಪರ್-ಫಾಸ್ಟ್ ಔಟ್‌ಫೀಲ್ಡ್‌ನೊಂದಿಗೆ, ವಾಂಖೆಡೆ ಸ್ಟೇಡಿಯಂನಲ್ಲಿ ಹೆಚ್ಚಿನ ಸ್ಕೋರಿಂಗ್ ಆಟಗಳು ಯಾವಾಗಲೂ ಕಂಡುಬರುತ್ತದೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್‌ ಸ್ಕೋರ್ 161 ಆಗಿದೆ.

ಐಪಿಎಲ್ 2022: ಡೆಲ್ಲಿ ಪ್ಲೇಆಫ್ ಕನಸು ಭಗ್ನಗೊಳಿಸಿದ ಮುಂಬೈ: ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್‌ಸಿಬಿ

ಎಸ್‌ಆರ್‌ಎಚ್ ಮತ್ತು ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ

ಎಸ್‌ಆರ್‌ಎಚ್ ಮತ್ತು ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ

ಸನ್‌ರೈಸರ್ಸ್ ಹೈದ್ರಾಬಾದ್
ಅಭಿಷೇಕ್ ಶರ್ಮಾ, ಪ್ರಿಯಾಂ ಗರ್ಗ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್(ನಾಯಕ ಮತ್ತು ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರಾನ್ ಮಲಿಕ್

ಪಂಜಾಬ್ ಕಿಂಗ್ಸ್‌
ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್

IPL 2022: MI vs DC ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಲಿಸ್ಟ್

ಫ್ಯಾಂಟೆಸಿ ಡ್ರೀಂ ಟೀಮ್ 1

ಫ್ಯಾಂಟೆಸಿ ಡ್ರೀಂ ಟೀಮ್ 1

ನಾಯಕ - ಲಿಯಾಮ್ ಲಿವಿಂಗ್‌ಸ್ಟೋನ್‌, ಜಾನಿ ಬೈರ್‌ಸ್ಟೋವ್

ಉಪನಾಯಕ - ಉಮ್ರಾನ್ ಮಲಿಕ್, ನಿಕೋಲಸ್ ಪೂರನ್

ಕೀಪರ್ಸ್ - ಜಾನಿ ಬೈರ್‌ಸ್ಟೋವ್, ನಿಕೋಲಸ್ ಪೂರನ್

ಬ್ಯಾಟ್ಸ್‌ಮನ್‌ಗಳು - ರಾಹುಲ್ ತ್ರಿಪಾಠಿ, ಶಿಖರ್ ಧವನ್, ಅಭಿಷೇಕ್ ಶರ್ಮಾ

ಆಲ್ ರೌಂಡರ್‌ಗಳು - ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ), ಏಡೆನ್ ಮಾರ್ಕ್‌ರಾಮ್, ರಿಷಿ ಧವನ್

ಬೌಲರ್‌ಗಳು - ಕಗಿಸೊ ರಬಾಡ, ಉಮ್ರಾನ್ ಮಲಿಕ್ (ಉಪನಾಯಕ), ರಾಹುಲ್ ಚಹಾರ್

ಫ್ಯಾಂಟೆಸಿ ಡ್ರೀಂ ಟೀಮ್ 2

ಫ್ಯಾಂಟೆಸಿ ಡ್ರೀಂ ಟೀಮ್ 2

ಕೀಪರ್ಸ್ - ಜಾನಿ ಬೈರ್‌ಸ್ಟೋವ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ)

ಬ್ಯಾಟ್ಸ್‌ಮನ್‌ಗಳು - ರಾಹುಲ್ ತ್ರಿಪಾಠಿ, ಶಿಖರ್ ಧವನ್, ಭಾನುಕಾ ರಾಜಪಕ್ಷೆ, ಪ್ರಿಯಂ ಗರ್ಗ್

ಆಲ್ ರೌಂಡರ್‌ಗಳು - ಲಿಯಾಮ್ ಲಿವಿಂಗ್‌ಸ್ಟೋನ್, ಏಡೆನ್ ಮಾರ್ಕ್ರಾಮ್

ಬೌಲರ್‌ಗಳು - ಕಗಿಸೊ ರಬಾಡ, ಉಮ್ರಾನ್ ಮಲಿಕ್, ಟಿ. ನಟರಾಜನ್

ತಂಡದ ಆಟಗಾರರ ಸಂಯೋಜನೆಯನ್ನು ಪರಿಗಣಿಸಿದರೆ, ಪಂಜಾಬ್ ಕಿಂಗ್ಸ್ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಿದೆ.

Story first published: Sunday, May 22, 2022, 16:41 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X