ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದ್ರಾಬಾದ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್‌: ಟ್ವಿಟ್ಟರ್‌ನಲ್ಲಿ ಲಿವಿಂಗ್‌ಸ್ಟೋನ್‌ಗೆ ಜೈಕಾರ

Liam livingstone

ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ 2022ರ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದು ಪಾಯಿಂಟ್ಸ್ ಟೇಬಲ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಟೂರ್ನಿ ಕೊನೆಗೊಳಿಸಿದೆ. ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ ಸುಲಭವಾಗಿ ಪಂದ್ಯ ಗೆದ್ದ ಪಂಜಾಬ್ 158ರನ್‌ ಟಾರ್ಗೆಟ್ ಅನ್ನು 15.1 ಓವರ್‌ನಲ್ಲಿಯೇ ಗುರಿ ತಲುಪಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದ್ರಾಬಾದ್ ಪರ ನಾಯಕನಾಗಿ ಭುವನೇಶ್ವರ್ ಕುಮಾರ್ ತಂಡವನ್ನ ಮುನ್ನಡೆಸಿದ್ರು. ಆದ್ರೆ ತಂಡದಲ್ಲಿ ಅಭಿಷೇಕ್ ಶರ್ಮಾ 43 ರನ್‌ಗಳಿಸಿದ್ದೇ ಹೆಚ್ಚಿನ ವೈಯಕ್ತಿಕ ಸ್ಕೋರ್ ಆಗಿತ್ತು. 20 ಓವರ್‌ಗಳಲ್ಲಿ ಎಸ್‌ಆರ್‌ಎಚ್ಚ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.

ಈ ಗುರಿಯನ್ನ ಬೆನ್ನತ್ತಿದ ಪಂಜಾಬ್ ಪರ ಶಿಖರ್ ಧವನ್ 39, ಜಾನಿ ಬೈಸ್ಟ್ರೋವ್ 23, ಲಿಯಾಮ್ ಲಿವಿಂಗ್‌ಸ್ಟೋನ್ ಅಜೇಯ 49ರನ್‌ಗಳ ನೆರವಿನಿಂದ ಸುಲಭವಾಗಿ ಪಂದ್ಯ ಗೆದ್ದು ಬೀಗಿತು. 22 ಎಸೆತಗಳಲ್ಲಿ 49 ರನ್ ಕಲೆಹಾಕಿದ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು.

ಪಂಜಾಬ್ ಕಿಂಗ್ಸ್ ಈ ಪಂದ್ಯ ಗೆದ್ದ ಬಳಿಕ ಎರಡು ಪಾಯಿಂಟ್ಸ್ ಕಲೆಹಾಕುವುದರ ಜೊತೆಗೆ ರನ್‌ರೇಟ್ ಕೂಡ ಉತ್ತಮಪಡಿಸಿಕೊಂಡು ಆರನೇ ಸ್ಥಾನಕ್ಕೇರಿತು. ಲಿವಿಂಗ್‌ಸ್ಟೋನ್‌ರ ಭರ್ಜರಿ ಆಟವನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಪಂಜಾಬ್ ಕಿಂಗ್ಸ್ ಏಕೆ ಪ್ಲೇ ಆಫ್ ತಲುಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಬೆಂಚ್: ಭಾನುಕಾ ರಾಜಪಕ್ಸೆ, ರಿಷಿ ಧವನ್, ರಾಹುಲ್ ಚಾಹರ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ಟೈಡೆ, ಪ್ರಭಾಸಿಮ್ರಾನ್ ಸಿಂಗ್, ವೈಭವ್ ಅರೋರಾ, ಅನ್ಶ್ ಪಟೇಲ್, ರಾಜ್ ಬಾವಾ

ಸನ್‌ರೈಸರ್ಸ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಂ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮೆರೊ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ್ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್‌ಹಕ್ ಫಾರೂಕ್, ಉಮ್ರಾನ್

Dinesh Karthik 2019ರ ನಂತರ ಈಗ ಮತ್ತೊಮ್ಮೆ ಇಂಡಿಯಾ ಜೆರ್ಸಿಯಲ್ಲಿ | Oneindia Kannada

Story first published: Sunday, May 22, 2022, 23:53 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X