ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಇರುವುದರಿಂದ ಈ ಪ್ರತಿಭಾವಂತ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದ ಸ್ಟೇನ್!

IPL 2022: Strange to see Rahul Tripathi hasnt got an opportunity in Team India says Dale Steyn

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಲ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರ

ಒಂದೆಡೆ ಈ ಹಿಂದೆ ಟೀಮ್ ಇಂಡಿಯಾದಲ್ಲಿದ್ದಾಗ ಉತ್ತಮ ಪ್ರದರ್ಶನ ನೀಡಲಾಗದೇ ಕಳಪೆ ಫಾರ್ಮ್ ಹೊಂದಿ ಹಾಗೂ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡು ಹೊರಬಿದ್ದಿರುವ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಆಯ್ಕೆಗಾರರ ಗಮನ ಸೆಳೆದು ಮತ್ತೆ ಟೀಮ್ ಇಂಡಿಯಾ ಸೇರಿಕೊಳ್ಳುವ ಯತ್ನದಲ್ಲಿದ್ದರೆ, ಮತ್ತೊಂದೆಡೆ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡದೇ ಇರುವ ಅನೇಕ ಪ್ರತಿಭಾವಂತ ಯುವ ಕ್ರಿಕೆಟಿಗರೂ ಸಹ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಸೇರಿಕೊಳ್ಳುವ ಯೋಚನೆಯಲ್ಲಿದ್ದಾರೆ.

IPL 2022: ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಕುರಿತು ತುಟಿ ಬಿಚ್ಚಿದ ಎಂಎಸ್ ಧೋನಿ ಹೇಳಿದ್ದಿಷ್ಟುIPL 2022: ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಕುರಿತು ತುಟಿ ಬಿಚ್ಚಿದ ಎಂಎಸ್ ಧೋನಿ ಹೇಳಿದ್ದಿಷ್ಟು

ಅದರಲ್ಲಿಯೂ ಇದೇ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುವುದರಿಂದ ಟೀಮ್ ಇಂಡಿಯಾ ಆಯ್ಕೆಗಾರರು ತಂಡಕ್ಕೆ ಆಸರೆ ಆಗಬಲ್ಲ ಆಟಗಾರರ ಹುಡುಕಾಟದಲ್ಲಿದ್ದು, ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಆಡುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವುದೆಂದರೆ ಸುಲಭದ ಮಾತಲ್ಲ. ಈಗಾಗಲೇ ಹಲವಾರು ಪ್ರತಿಭಾವಂತ ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಸಿಗದೇ ಪರದಾಡುತ್ತಿದ್ದು, ಅದೇ ರೀತಿಯ ಆಟಗಾರನೋರ್ವನ ಕುರಿತು ಇದೀಗ ದಕ್ಷಿಣ ಆಫ್ರಿಕಾದ ಮಾಜಿ ವೇಗಿ, ಪ್ರಸ್ತುತ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಈತನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದೇ ಇರುವುದು ಅಚ್ಚರಿ ಮೂಡಿಸಿದೆ

ಈತನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದೇ ಇರುವುದು ಅಚ್ಚರಿ ಮೂಡಿಸಿದೆ

ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿರುವ ಡೇಲ್ ಸ್ಟೇನ್ ತಮ್ಮ ತಂಡದ ಪ್ರಮುಖ ಆಟಗಾರ ರಾಹುಲ್ ತ್ರಿಪಾಠಿ ಕುರಿತು ಮಾತನಾಡಿದ್ದಾರೆ. ಆದಷ್ಟು ಬೇಗ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ತಂಡದಲ್ಲಿ ರಾಹುಲ್ ತ್ರಿಪಾಠಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವ ಡೇಲ್ ಸ್ಟೇನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚುವ ಆಟಗಾರರಿಗೆ ಆಯ್ಕೆಗಾರರು ಅವಕಾಶ ನೀಡುತ್ತಾರೆ ಎಂದಿದ್ದಾರೆ ಹಾಗೂ ರಾಹುಲ್ ತ್ರಿಪಾಠಿಗೆ ಇಲ್ಲಿಯವರೆಗೂ ಅವಕಾಶ ಸಿಗದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

ಕೊಹ್ಲಿ ಇರುವುದರಿಂದ ಸ್ಥಾನ ಸಿಗುತ್ತಿಲ್ಲ

ಕೊಹ್ಲಿ ಇರುವುದರಿಂದ ಸ್ಥಾನ ಸಿಗುತ್ತಿಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ಡೇಲ್ ಸ್ಟೇನ್ ರಾಹುಲ್ ತ್ರಿಪಾಠಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸುವ ಆಟಗಾರ ಎಂದು ಪ್ರಶಂಸಿಸಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಮೂರನೇ ಕ್ರಮಾಂಕ ವಿರಾಟ್ ಕೊಹ್ಲಿ ಪಾಲಾಗಿರುವುದರಿಂದ ರಾಹುಲ್ ತ್ರಿಪಾಠಿಗೆ ಆ ಸ್ಥಾನ ಸಿಗುವುದು ಕಷ್ಟ ಎಂದು ಡೇಲ್ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮತ್ತು ಹಿಂದಿನ ಟೂರ್ನಿಗಳಲ್ಲಿ ರಾಹುಲ್ ತ್ರಿಪಾಠಿ ನೀಡಿರುವ ಪ್ರದರ್ಶನಗಳನ್ನು ಗಮನಿಸಿದರೆ ಆತನ ಆಟ ತುಂಬಾ ಸುಧಾರಿಸಿರುವುದನ್ನು ಗಮನಿಸಬಹುದು ಎಂದಿರುವ ಡೇಲ್ ಸ್ಟೇನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ರಾಹುಲ್ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ರಾಹುಲ್ ತ್ರಿಪಾಠಿ ಐಪಿಎಲ್ ಅಂಕಿ ಅಂಶ

ರಾಹುಲ್ ತ್ರಿಪಾಠಿ ಐಪಿಎಲ್ ಅಂಕಿ ಅಂಶ

2017ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ರಾಹುಲ್ ತ್ರಿಪಾಠಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪ್ರಸಕ್ತ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದಾರೆ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಪ್ರತಿವರ್ಷವೂ ಅರ್ಧಶತಕಗಳನ್ನು ಬಾರಿಸಿರುವ ರಾಹುಲ್ ತ್ರಿಪಾಠಿ ಒಟ್ಟಾರೆ 69 ಐಪಿಎಲ್ ಇನ್ನಿಂಗ್ಸ್ ಆಡಿದ್ದು, 1613 ರನ್ ಬಾರಿಸಿದ್ದಾರೆ. 93 ರಾಹುಲ್ ತ್ರಿಪಾಠಿ ಐಪಿಎಲ್ ಇತಿಹಾಸದಲ್ಲಿ ಬಾರಿಸಿರುವ ಅತ್ಯಧಿಕ ರನ್ ಆಗಿದೆ. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿರುವ ರಾಹುಲ್ ತ್ರಿಪಾಠಿ 9 ಪಂದ್ಯಗಳನ್ನಾಡಿ 228 ರನ್ ಗಳಿಸಿದ್ದು ಇನ್ನಿಂಗ್ಸ್ ಒಂದರಲ್ಲಿ 71 ರನ್ ಚಚ್ಚಿ ಅಬ್ಬರಿಸಿದ್ದಾರೆ.

Story first published: Wednesday, May 4, 2022, 10:19 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X