ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಪ್ರವಾಸದಲ್ಲಿ ಈತನಿಗೆ ಅವಕಾಶ ನೀಡಿ: ಯುವ ವೇಗಿ ಬಗ್ಗೆ ಸುನಿಲ್ ಗವಾಸ್ಕರ್ ಬ್ಯಾಟಿಂಗ್

IPL 2022: Sunil Gavaskar said Take Umran Malik to England for one-off Test, limited-overs series

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ ಯುವ ವೇಗಿ ಉಮ್ರಾನ್ ಮಲಿಕ್. ಅದರಲ್ಲೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದು ಆಘಾತ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಉಮ್ರಾನ್ ಮಲಿಕ್ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸದಲ್ಲಿ ಯುವ ವೇಗಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಜಮ್ಮು ಮೂಲದ 22ರ ಹರೆಯದ ಉಮ್ರಾನ್ ಮಲಿಕ್ ಗುಜರಾತ್ ಟೈಟನ್ಸ್ ವಿರುದ್ಧ ಅದ್ಭುತ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪಡೆದುಕೊಂಡಿದ್ದ ಐದು ವಿಕೆಟ್‌ಗಳ ಪೈಕಿ ನಾಲ್ಕು ದಾಂಡಿಗರನ್ನು ಬೌಲ್ಡ್ ಮಾಡುವ ಮೂಲಕ ವಿಕೆಟ್ ಫೆವಿಲಿಯನ್‌ಗೆ ಅಟ್ಟಿದ್ದರು. ಈ ಮೂಲಕ ತನ್ನ ಬೌಲಿಂಗ್‌ನ ನಿಖರತೆಯನ್ನು ಮತ್ತೊಮ್ಮೆ ಸಾಬೀತಿಪಡಿಸಿದ್ದಾರೆ ಯುವ ವೇಗಿ. ಆದರೆ ಉಮ್ರಾನ್ ಮಲಿಕ್ ಐದು ವಿಕೆಟ್‌ಗಳ ಗೊಂಚಲು ಪಡೆದ ಹೊರತಾಗಿಯೂ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋಲು ಅನುಭವಿಸಬೇಕಾಯಿತು. ರಶೀದ್ ಖಾನ್ ಅಂತಿಮ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹೈದರಾಬಾದ್‌ನಿಂದ ಜಯವನ್ನು ಕಸಿದುಕೊಂಡಿದ್ದರು.

ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್

ಪಂದ್ಯದ ಬಳಿಕ ಮಾತನಾಡಿದ ಕಾಮೆಂಟೇಟರ್ ಆಗಿರುವ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿಸುತ್ತಾ "ಆತನ ಮುಂದಿನ ತಂಡ ಟೀಮ್ ಇಂಡಿಯಾ" ಎಂದಿದ್ದಾರೆ. ಆದರೆ ಉಮ್ರಾನ್ ಮಲಿಕ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆಯವುವ ಬಗ್ಗೆ ಅನುಮಾಣವಿದೆ ಎಂದು ಕೂಡ ಗವಾಸ್ಕರ್ ಹೇಳಿದರು. "ಉಮ್ರಾನ್ ಬಹುಶಃ ಭಾರತದ ಪರವಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ. ಯಾಕೆಂದರೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಇದ್ದಾರೆ. ಹೀಗಾಗಿ ಅವರಿಗೆ ಆಡಲು ಅವಕಾಶ ದೊರೆಯುವ ಸಾಧ್ಯತೆಯಿಲ್ಲ" ಎಂದಿದ್ದಾರೆ.

"ಆದರೆ ಭಾರತ ತಂಡದೊಂದಿಗೆ ಆತ ಪ್ರಯಾಣಿಸಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಾ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಬೇಕು. ಅದು ಬಹಳಷ್ಟು ಪರಿಣಾಮವನ್ನು ಬೀರಲಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?

ಈ ಯುವ ಆಟಗಾರ ಸ್ಥಿರವಾಗಿ ಗಂಟೆಗೆ 150ಕಿ.ಮೀಗಿಂತಲೂ ವೇಗವಾಗಿ ಬೌಲಿಂಗ್ ನಡೆಸುತ್ತಿದ್ದಾರೆ. ಅಲ್ಲದೆ ವಿಕೆಟ್ ಕಬಳಿಸುವದರಲ್ಲಿಯೂ ಉಮ್ರಾನ್ ಮಲಿಕ್ ಪರಿಣಾಮಕಾರಿಯಾಗಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ 15 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಜೂನ್ ತಿಂಗಳಿನಲ್ಲಿ ಭಾರತ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಕಳೆದ ವರ್ಣ ಕೊರೊನಾವೈರಸ್ ಕಾರಣಕ್ಕೆ ಪೂರ್ಣಗೊಳ್ಳದೆ ಮುಂದೂಡಿಕೆಯಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಅಲ್ಲದೆ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Story first published: Friday, April 29, 2022, 17:31 [IST]
Other articles published on Apr 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X