ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಹೇಳಿಕೊಳ್ಳುವಂತಹ ದೊಡ್ಡ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಟೂರ್ನಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ 6 ಪಂದ್ಯಗಳಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲುವುದರ ಮೂಲಕ 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹೀಗೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮತ್ತೊಂದು ಆವೃತ್ತಿಯಲ್ಲಿ ಎಡವಿದೆ.

ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರಾ ಅಫ್ಘಾನಿಸ್ತಾನದ ಈ ಕ್ರಿಕೆಟ್ ಕೋಚ್?ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರಾ ಅಫ್ಘಾನಿಸ್ತಾನದ ಈ ಕ್ರಿಕೆಟ್ ಕೋಚ್?

ತಮ್ಮ ತಂಡ ಎಡವಿದರೂ ಕೂಡ ತಂಡದ ನಾಯಕ ಕೆಎಲ್ ರಾಹುಲ್ ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಫ್ರಾಂಚೈಸಿ ತಂಡವೊಂದಕ್ಕೆ ಓರ್ವ ಆಟಗಾರನಿಂದ ಯಾವ ರೀತಿಯ ಪ್ರದರ್ಶನ ಬೇಕೋ ಅದನ್ನು ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ನೀಡಿದ್ದಾರೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಎಲ್ ರಾಹುಲ್ 13 ಪಂದ್ಯಗಳನ್ನಾಡಿ 626 ರನ್ ಗಳಿಸಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ಪರ ತಾವು ಆಡಿರುವ 4 ಐಪಿಎಲ್ ಆವೃತ್ತಿಗಳ ಪೈಕಿ 3 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚಿನ ರನ್ ಕಲೆ ಹಾಕಿದ್ದಾರೆ. ಹೌದು, 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 593 ರನ್ ಕಲೆಹಾಕಿದ್ದ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ಪರ ತಾವು ಆಡಿದ ಇನ್ನುಳಿದ 3 ಆವೃತ್ತಿಗಳಲ್ಲಿಯೂ 600ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದಾರೆ.

ಐಪಿಎಲ್ 2021: ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ನೆಲಕಚ್ಚಿದ 11 ಆಟಗಾರರ ಪಟ್ಟಿಐಪಿಎಲ್ 2021: ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ನೆಲಕಚ್ಚಿದ 11 ಆಟಗಾರರ ಪಟ್ಟಿ

ಹೀಗೆ ಪಂಜಾಬ್ ಕಿಂಗ್ಸ್ ಪರ ಓರ್ವ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿರುವ ಕೆ ಎಲ್ ರಾಹುಲ್ ಅವರನ್ನು ಮುಂಬರಲಿರುವ ಆವೃತ್ತಿಯಲ್ಲಿಯೂ ಪಂಜಾಬ್ ಕಿಂಗ್ಸ್ ತಂಡ ಉಳಿಸಿಕೊಳ್ಳುವ ಯೋಚನೆಯಲ್ಲಿರುತ್ತದೆ. ಆದರೆ ಮೂಲಗಳ ಪ್ರಕಾರ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಹರಾಜಿನಲ್ಲಿ ತನ್ನನ್ನು ತಂಡದಿಂದ ಕೈಬಿಡುವಂತೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮುಂಬರುವ ಹರಾಜಿನಲ್ಲಿ ಕೆಎಲ್ ರಾಹುಲ್ ಬೇರೆ ತಂಡವನ್ನು ಸೇರುವುದು ಖಚಿತವಾಗಿದೆ. ಹೀಗೆ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ನೂತನ ತಂಡವನ್ನು ಸೇರಲಿದ್ದು, ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಖರೀದಿಸಿ ಆತನಿಗೆ ನಾಯಕತ್ವ ನೀಡುವ ಸಾಧ್ಯತೆಗಳು ಹೆಚ್ಚಿರುವ 3 ತಂಡಗಳ ಪಟ್ಟಿ ಈ ಕೆಳಕಂಡಂತಿದೆ ಓದಿ..

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾಗುವ ಮುನ್ನವೇ ಅಧಿಕೃತವಾಗಿ ಘೋಷಣೆಯನ್ನು ಹೊರಡಿಸಿದ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ಬಳಿಕ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕನ ಅಗತ್ಯತೆಯಿದ್ದು, ಕೆ ಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಿ ನಾಯಕ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಿವೆ.

2. ಸನ್ ರೈಸರ್ಸ್ ಹೈದರಾಬಾದ್

2. ಸನ್ ರೈಸರ್ಸ್ ಹೈದರಾಬಾದ್

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ತಂಡವೆಂದರೆ ಅದು ಸನ್ ರೈಸರ್ಸ್ ಹೈದರಾಬಾದ್. ಟೂರ್ನಿ ಆರಂಭವಾದಾಗ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸಾಲು ಸಾಲು ಸೋಲುಗಳನ್ನು ಕಂಡ ಕಾರಣ ನಾಯಕತ್ವವನ್ನು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು. ಹೀಗಾದರೂ ಸಹ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಲೇ ಇಲ್ಲ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡ ನಾಯಕನ ಹುಡುಕಾಟದಲ್ಲಿದ್ದು ಮುಂಬರಲಿರುವ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಖರೀದಿಸಿ ತಮ್ಮ ತಂಡಕ್ಕೆ ನಾಯಕನನ್ನಾಗಿ ನೇಮಿಸುವ ಸಾಧ್ಯತೆಗಳು ಹೆಚ್ಚಿವೆ.

3. ಕೋಲ್ಕತ್ತಾ ನೈಟ್ ರೈಡರ್ಸ್

3. ಕೋಲ್ಕತ್ತಾ ನೈಟ್ ರೈಡರ್ಸ್

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಆರಂಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸಾಲುಸಾಲು ಪಂದ್ಯಗಳಲ್ಲಿ ಸೋತು ಮಂಕಾಗಿತ್ತು. ಆದರೆ ಯು ಎ ಇ ಚರಣ ಆರಂಭವಾದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಇದೀಗ ಕ್ವಾಲಿಫೈಯರ್ 2 ಪಂದ್ಯಕ್ಕೂ ಲಗ್ಗೆ ಇಟ್ಟಿದೆ. ತಂಡದ ಆಟಗಾರರ ಅದ್ಭುತ ಪ್ರದರ್ಶನದಿಂದ ಈ ಹಂತವನ್ನು ತಲುಪಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಯಶಸ್ಸಿನಲ್ಲಿ ನಾಯಕ ಇಯಾನ್ ಮಾರ್ಗನ್ ಅವರ ಕೊಡುಗೆ ಅಷ್ಟಕ್ಕಷ್ಟೇ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ. ಹೀಗಾಗಿ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕೆ ಎಲ್ ರಾಹುಲ್ ಅವರನ್ನು ಖರೀದಿಸಿ ನಾಯಕ ಸ್ಥಾನ ನೀಡುವ ಸಾಧ್ಯತೆಗಳಿವೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 12:25 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X