RCB vs RR: ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಗೆ ಕಂಠಕವಾಗುತ್ತಾರಾ ಈ 3 ತನ್ನದೇ ಮಾಜಿ ಆಟಗಾರರು!

ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆಲ್ಲುವ ಕನಸಿಗೆ ಆರ್‌ಸಿಬಿ ಮತ್ತೊಮ್ಮೆ ರೆಕ್ಕೆ ಪುಕ್ಕ ಕಟ್ಟಿಕೊಂಡಿದೆ. ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಪ್ರವೇಶಿಸಿರುವ ಆರ್‌ಸಿಬಿ ಮೊದಲ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬೀಗಿದ್ದು ಮತ್ತೊಂದು ಸವಾಲು ಎದುರಿಸಲು ಸಜ್ಜಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಫಾಫ್ ಡು ಪ್ಲೆಸಿಸ್ ಪಡೆಗೆ ಈಗ ರಾಜಸ್ಥಾನ್ ರಾಯಲ್ಸ್ ತಂಡ ಎದುರಾಗಿದ್ದು ಶುಕ್ರವಾರ ಈ ಸೆಣೆಸಾಟ ನಡೆಯಲಿದೆ.

ಆದರೆ ಈ ಪಂದ್ಯ ಆರ್‌ಸಿಬಿಗೆ ಖಂಡಿತಾ ಸುಲಭ ಸವಾಲಾಗಿರುವುದಿಲ್ಲ ಎಂಬುದು ಸ್ಪಷ್ಟ. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಮೆರೆದ ಬಳಿಕ ಮತ್ತೊಮ್ಮೆ ಆ ಸಾಧನೆ ಮಾಡಲು ವಿಫಲವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಟ್ರೋಫಿಯನ್ನು ಗೆಲ್ಲಲೇಬೇಕೆಂಬ ಹಟತೊಟ್ಟು ಸವಾಲೊಡ್ಡುತ್ತಿದೆ. ಆರ್‌ಸಿಬಿ ತಂಡ ಮೊದಲ ಬಾರಿ ಟ್ರೋಫಿ ಗೆಲ್ಲುವ ಕನಸನ್ನು ಭಗ್ನ ಗೊಳಿಸುವ ಉತ್ಸಾಹದಲ್ಲಿದೆ. ಆದರೆ ಇದಕ್ಕೆ ತಕ್ಕನಾದ ಪ್ರತಿತಂತ್ರವನ್ನು ಹೆಣೆಯುತ್ತಿದೆ ಆರ್‌ಸಿಬಿ.

IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?

ಈ ಹಂತದಲ್ಲಿ ಆರ್‌ಸಿಬಿ ತಂಡಕ್ಕೆ ತನ್ನದೇ ಮೂವರು ಆಟಗಾರರು ಕಂಠಕವಾಗುವ ಭೀತಿ ಎದುರಾಗಿದೆ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಈ ಮೊದಲು ತನ್ನದೇ ತಂಡದಲ್ಲಿದ್ದ ಆಟಗಾರರು ತನ್ನ ಪಾಲಿಗೆ ವಿಲನ್‌ಗಳಾಗಿ ಕಾಡಿರುವ ದೃಷ್ಠಾಂತಗಳು ಕಣ್ಣ ಮುಂದಿದೆ. ಹೀಗಾಗಿ ಮತ್ತೊಮ್ಮೆ ಅಂಥಾದ್ದೇ ಸ್ಥೀತಿ ಆರ್‌ಸಿಬಿಗೆ ಎದುರಾಗಲಿದೆಯಾ ಎಂಬುದು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಹಾಗಾದರೆ ಆರ್‌ಸಿಬಿಗೆ ರಾಜಸ್ಥಾನ್ ರಾಯಲ್ಸ ವಿರುದ್ಧದ ಪಂದ್ಯದಲ್ಲಿ ಕಾಡಬಹುದಾದ ತನ್ನದೇ ತಂಡದಲ್ಲಿದ್ದ ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ..

ಯುಜುವೇಂದ್ರ ಚಾಹಲ್

ಯುಜುವೇಂದ್ರ ಚಾಹಲ್

ಯುಜುವೇಂದ್ರ ಚಾಹಲ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಆಟಗಾರ. ರಾಜಸ್ಥಾನ್ ರಾಯಲ್ಸ್ ತಂಡ ಈ ಐಪಿಎಲ್ ಟೂರ್ನಿಯಲ್ಲಿ ಯಶಸ್ಸು ಸಾಧಿಸುವಲ್ಲಿ ಚಾಹಲ್ ಅವರ ಪ್ರದರ್ಶನವೂ ಪ್ರಮುಖ ಕಾರಣವಾಗಿದೆ. ಸುದೀರ್ಘ 8 ಆವೃತ್ತಿಗಳಲ್ಲಿ ಚಾಹಲ್ ಆರ್‌ಸಿಬಿ ತಂಡದ ಭಾಗವಾಗಿದ್ದು ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅದರ ಹೊರತಾಗಿಯೂ ಚಾಹಲ್ ಅವರನ್ನು ಕಳೆದ ಆವೃತ್ತಿಯಲ್ಲಿ ರೀಟೈನ್ ಮಾಡಿಕೊಳ್ಳದೆ ಆರ್‌ಸಿಬಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ರಾಜಸ್ಥಾನ್ ರಾಯಲ್ಸ್ ತಂಡದ ತೆಕ್ಕೆಗೆ ಬಿದ್ದ ಚಾಹಲ್ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಹೀಗಾಗಿ ಫೈನಲ್ ಹಂತಕ್ಕೇರಲು ನಿರ್ಣಾಯಕವಾಗಿರುವ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಚಾಹಲ್ ಮೇಲೆ ವಿಶೇಷ ಕಣ್ಣಿಡಲೇಬೇಕಿದೆ.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಈ ಹಿಂದಿನ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 2020 ಹಾಗೂ 2021ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಪಡಿಕ್ಕಲ್. ಒಂದು ಶತಕವನ್ನು ಕೂಡ ಪಡಿಕ್ಕಲ್ ಆರ್‌ಸಿಬಿ ಪರವಾಗಿ ಬಾರಿಸಿ ಮಿಂಚಿದ್ದಾರೆ. ಇದೀಗ ಈ ಬಾರಿ ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯುತ್ತಿದ್ದು ಮಧ್ಯಮ ಕ್ರಮಾಂಕದ ಜವಾಬ್ಧಾರಿ ಹೊತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿ ತಂಡವನ್ನು ಓಫೈನಲ್ ಹಂತಕ್ಕೇರಿಸುವ ಇರಾದೆಯನ್ನು ಖಂಡಿತಾ ಪಡಿಕ್ಕಲ್ ಹೊಂದಿರುತ್ತಾರೆ. ಹೀಗಾಗಿ ಕನ್ನಡಿಗ ದೇವತ್ ಪಡಿಕ್ಕಲ್ ಕೂಡ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿಗೆ ಕಂಠಕವಾಗುವ ಸಾಧ್ಯತೆಯಿದೆ.

KGF ಮತ್ತು ರಜತ್ ಕಟ್ಟಿಹಾಕೋಕೆ ರಾಜಸ್ತಾನ್ ರಣತಂತ್ರ:ಗೆದ್ದೋರು ಪೈನಲ್,ಸೋತೋರು ಮನೆಗೆ | Oneindia Kannada
ಶಿಮ್ರಾನ್ ಹೇಟ್ಮೇಯರ್

ಶಿಮ್ರಾನ್ ಹೇಟ್ಮೇಯರ್

ಸ್ಪೋಟಕ ಆಟಗಾರ ಶಿಮ್ರಾನ್ ಹೆಟ್ಮೇಯರ್ ಸಾಮರ್ಥ್ಯ ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ಗೊತ್ತಿದೆ. ಏಕಾಂಗಿಯಾಗಿ ಪಂದ್ಯವನ್ನು ಕಸಿದುಕೊಳ್ಳುವ ಸಾಮರ್ಥ್ಯ ಈ ಕೆರೀಬಿಯನ್ ಮೂಲದ ಆಟಗಾರನಿಗೆ ಇದೆ. ಇವರು ಕೂಡ ಆರ್‌ಸಿಬಿ ತಮಡದ ಮಾಜಿ ಆಟಗಾರ. 2019ರ ಆವೃತ್ತಿಯಲ್ಲಿ ಕೊಹ್ಲಿ ನೇತೃತ್ವದ ತಂಡದ ಭಾಗವಾಗಿದ್ದರು. ನಂತರಡ ಎರಡು ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಶಿಮ್ರಾನ್ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಕಣಕ್ಕಿಳಿದಿದ್ದಾರೆ. ಈ ಆವೃತ್ತಿಯಲ್ಲಿಯೂ ಕೆಲ ಉತ್ತಮ ಪ್ರದರ್ಶನಗಳನ್ನು ನೀಡಿರುವ ಹೆಟ್ಮೇಯರ್ ಆರ್‌ಸಿಬಿ ವಿರುದ್ಧ ಅಬ್ಬರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಈ ಆಟಗಾರನ ವಿರುದ್ಧ ಕೂಡ ಆರ್‌ಸಿಬಿ ವಿಶೇಷ ರಣತಂತ್ರಗಳನ್ನು ಹೆಣೆಯಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, May 26, 2022, 23:16 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X