ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಮುಂದಿನ ಸೀಸನ್‌ಗೆ ಹೊಸ ನಾಯಕನ ಹುಡುಕಾಟ ನಡೆಸಲಿವೆ ಈ 4 ತಂಡಗಳು

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್ ನಲ್ಲಿ ಕೆಲ ನಾಯಕರು ಕಳಪೆ ಪ್ರದರ್ಶನದ ಮೂಲಕ ಅಭಿಮಾನಿಗಳ ಮತ್ತು ಫ್ರಾಂಚೈಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತನ್ನ ವೈಯಕ್ತಿಕ ಪ್ರದರ್ಶನದ ಜೊತೆಗೆ ತಂಡದ ಪ್ರದರ್ಶನವೂ ಕುಸಿದಿದೆ. ಹೀಗಾಗಿ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ.

ನಾಯಕರಾದ ರೋಹಿತ್ ಶರ್ಮಾ, ಎಂಎಸ್ ಧೋನಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೇನ್ ವಿಲಿಯಮ್ಸನ್ ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್ ನಾಯಕರಾಗಿ ಚಪ್ಪಾಳೆ ಗಿಟ್ಟಿಸಿದರು. ಈ ಬಾರಿ ನಿರಾಸೆಗೊಂಡಿರುವ ಹಲವು ತಂಡಗಳು ಮುಂದಿನ ಋತುವಿನಲ್ಲಿ ಹೊಸ ನಾಯಕರನ್ನು ಹುಡುಕುತ್ತಿವೆ. ಮುಂದಿನ ಋತುವಿನಲ್ಲಿ ಹೊಸ ನಾಯಕರನ್ನು ಹೊಂದುವ ಸಾಧ್ಯತೆಯಿರುವ ತಂಡಗಳನ್ನು ಈ ಕೆಳಗೆ ಕಾಣಬಹುದು.

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್

ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಈ ಋತುವಿನಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಿದ್ದರು. ಆದರೆ ನಾಯಕನಾಗಿ ಮಯಾಂಕ್ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಮಯಾಂಕ್ ತನ್ನ ಪ್ರದರ್ಶನವನ್ನು ಸುಧಾರಿಸಲು ಮತ್ತು ತಂಡವನ್ನ ಉತ್ತಮವಾಶಗಿ ಮುನ್ನಡೆಸಲು ಸಾಧ್ಯವಾಗಲಿಲ್ಲ.

ಓಪನಿಂಗ್‌ನಲ್ಲಿ ಕಳಪೆಯಾಗಿದ್ದಾಗ ಮಯಾಂಕ್, ಮಿಡಲ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದರೂ ಸಹ ಅವರ ಪ್ರದರ್ಶನ ಸುಧಾರಿಸಲಿಲ್ಲ. ಮುಂದಿನ ಋತುವಿನಲ್ಲಿ ಪಂಜಾಬ್‌ಗೆ ಉತ್ತಮ ನಾಯಕನ ಅಗತ್ಯವಿದೆ. ಮಯಾಂಕ್ ಬದಲಿಗೆ ಶಿಖರ್ ಧವನ್ ಅವರನ್ನು ಪಂಜಾಬ್ ಪರಿಗಣಿಸುವ ಸಾಧ್ಯತೆಯಿರುವ ನಾಯಕ. ಈ ಬಾರಿ ಆರಂಭಿಕರಾಗಿ ಧವನ್ ಉತ್ತಮ ಪ್ರದರ್ಶನ ನೀಡಿದರು. ಧವನ್ ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು.

ಜಸ್ಪ್ರೀತ್ ಬುಮ್ರಾ ದಾಖಲೆ: ಸತತ ಏಳು ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್

ಸನ್‌ರೈಸರ್ಸ ಹೈದ್ರಾಬಾದ್

ಸನ್‌ರೈಸರ್ಸ ಹೈದ್ರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಋತುವಿನಲ್ಲಿ ಹೊಸ ನಾಯಕನನ್ನು ಹುಡುಕುವ ಸಾಧ್ಯತೆಯಿದೆ. ಈ ಬಾರಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಹೈದರಾಬಾದ್ ಪ್ಲೇ-ಆಫ್ ತಲುಪಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ವಿಲಿಯಮ್ಸನ್ ಬ್ಯಾಟಿಂಗ್ ನಲ್ಲಿ ಭಾರಿ ವೈಫಲ್ಯ ಅನುಭವಿಸಿದರು. ಆದ್ದರಿಂದ ಮುಂದಿನ ಋತುವಿನಲ್ಲಿ ಹೈದರಾಬಾದ್ ಹೊಸ ನಾಯಕನನ್ನು ಪರಿಗಣಿಸಬಹುದು.

ವೇಗದ ಬೌಲರ್ ಉಮ್ರಾನ್, ಅರ್ಷ್‌ದೀಪ್‌ಗೆ ಒಲಿದು ಬಂದ ಅದೃಷ್ಟ: ಟೀಮ್ ಇಂಡಿಯಾದಲ್ಲಿ ಅವಕಾಶ

ಹೈದರಾಬಾದ್ ಪ್ರಸ್ತುತ ತಂಡದಿಂದ ಏಡನ್ ಮಕ್ರಾಮ್ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ. ಹೊರಗಿನವರನ್ನು ಪರಿಗಣಿಸಿದರೆ, ಹೈದರಾಬಾದ್ ಸ್ಟೀವ್ ಸ್ಮಿತ್ ಅವರನ್ನು ನೋಡುತ್ತಿರಬಹುದು. ಈ ಬಾರಿಯ ಮೆಗಾ ಹರಾಜಿನಲ್ಲಿ ಯಾರೂ ಖರೀದಿಸದ ಸ್ಮಿತ್ ಅವರನ್ನು ಮುಂದಿನ ಋತುವಿನಲ್ಲಿ ಹೈದರಾಬಾದ್ ಪರಿಗಣಿಸಬಹುದು. ಅಗ್ರ ಕ್ರಮಾಂಕದಲ್ಲಿ ಆಂಕರ್ ಪಾತ್ರದಲ್ಲಿ ಸ್ಥಿರವಾಗಿ ಸ್ಮಿತ್ ಆಡಬಲ್ಲರು.

ಚೆನ್ನೈ ಸೂಪರ್ ಕಿಂಗ್ಸ್‌

ಚೆನ್ನೈ ಸೂಪರ್ ಕಿಂಗ್ಸ್‌

ಮುಂದಿನ ಋತುವಿನಲ್ಲಿ ಸಿಎಸ್‌ಕೆಎಯಲ್ಲಿಯೇ ಇರುವುದಾಗಿ ಎಂಎಸ್ ಧೋನಿ ಸ್ಪಷ್ಟಪಡಿಸಿದ್ದಾರೆ. ಆದರೆ ಧೋನಿ ನಾಯಕನಾಗಿ ಮುಂದುವರಿಯುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ಋತುವಿನಲ್ಲಿ ಧೋನಿ ನಿವೃತ್ತಿ ಹೊಂದುವುದು ಬಹುತೇಕ ಖಚಿತವಾಗಿರುವುದರಿಂದ, ಮುಂದಿನ ಋತುವಿನಲ್ಲಿ ಹೊಸ ನಾಯಕನನ್ನು ಕರೆತರಲು ಮತ್ತು ಧೋನಿ ಅಡಿಯಲ್ಲಿ ಅವರನ್ನು ಪೋಷಿಸಲು ಸಿಎಸ್‌ಕೆ ಪ್ರಯತ್ನಿಸುತ್ತದೆ. ಸಿಎಸ್‌ಕೆ ರವೀಂದ್ರ ಜಡೇಜಾ ಅವರನ್ನು ನಾಯಕನಾಗಿ ಮಾಡಿ ಕೈ ಸುಟ್ಟುಕೊಂಡಿದೆ. ಹೀಗಾಗಿ ಮುಂದಿನ ಋತುವಿನಲ್ಲಿ ಹೊಸ ನಾಯಕನನ್ನು ಹುಡುಕಬೇಕಾಗಿದೆ.

ಸದ್ಯ ತಂಡದಲ್ಲಿ ನಾಯಕನಾಗಿ ಪ್ರಯತ್ನಿಸಲು ಸೂಕ್ತ ಆಟಗಾರರಿಲ್ಲ ಎಂದೇ ಹೇಳಬಹುದು. ಆದ್ದರಿಂದ, ಸಿಎಸ್‌ಕೆ ವಿದೇಶಿ ನಾಯಕನನ್ನು ನೋಡುತ್ತಿದೆ. ವರದಿಗಳ ಪ್ರಕಾರ, ಸಿಎಸ್‌ಕೆ ಬೆನ್ ಸ್ಟೋಕ್ಸ್‌ನನ್ನು ತಂಡದ ನಾಯಕನಾಗಲು ಬಯಸಿದೆ. ಸ್ಟೋಕ್ಸ್‌ ದೀರ್ಘಾವಧಿಯ ಆಧಾರದ ಮೇಲೆ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರ. ವೇಗಿ ಆಲ್‌ರೌಂಡರ್ ಪ್ರಸ್ತುತ ಇಂಗ್ಲೆಂಡ್‌ನ ಟೆಸ್ಟ್ ನಾಯಕರಾಗಿದ್ದಾರೆ.

Dinesh Karthik 2019ರ ನಂತರ ಈಗ ಮತ್ತೊಮ್ಮೆ ಇಂಡಿಯಾ ಜೆರ್ಸಿಯಲ್ಲಿ | Oneindia Kannada
ಮುಂಬೈ ಇಂಡಿಯನ್ಸ್‌

ಮುಂಬೈ ಇಂಡಿಯನ್ಸ್‌

ರೋಹಿತ್ ಶರ್ಮಾ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ ಆದರೆ ಮುಂಬೈ ಮುಂದಿನ ಋತುವಿನಲ್ಲಿ ಭವಿಷ್ಯದ ನಾಯಕನನ್ನು ಪರಿಗಣಿಸಬೇಕಾಗಿದೆ. ರೋಹಿತ್ ಅವರ ವಯಸ್ಸು ಮತ್ತು ಕಳೆದ ಮೂರು ವರ್ಷಗಳ ಪ್ರದರ್ಶನವನ್ನು ಅಂದಾಜಿಸಿದರೆ, ತಂಡವು ಹೊಸ ನಾಯಕನ ಬಗ್ಗೆ ಯೋಚಿಸಬೇಕಾಗಿದೆ. ಮುಂಬೈ ಸೂರ್ಯಕುಮಾರ್ ಯಾದವ್ ಅವರನ್ನು ನೂತನ ನಾಯಕರನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ. ಸ್ಥಿರವಾಗಿ ಆಡುವ ಸೂರ್ಯಕುಮಾರ್ ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.

Story first published: Sunday, May 22, 2022, 21:01 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X