ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಐವರು ವಿದೇಶಿ ಆಟಗಾರರು

Rashid khan

ಇಂಡಿಯನ್ ಪ್ರೀಮಿಯರ್ ಲೀಗ್ 15 ಆವೃತ್ತಿಗೆ ಅಧಿಕೃತ ದಿನಾಂಕ ಹೊರಬೀಳುವ ಮೊದಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಎಂಟು ಹಳೆಯ ತಂಡಗಳ ಜೊತೆಗೆ ಎರಡು ಹೊಸ ತಂಡಗಳು ಕಣಕ್ಕಿಳಿಯಲಿವೆ.

ಈ ಟೂರ್ನಿಗೂ ಮೊದಲು ಜನವರಿ ಮೊದಲ ವಾರ ಇಲ್ಲವೇ, ಅದಕ್ಕೂ ಮೊದಲೇ ಡಿಸೆಂಬರ್ ಕೊನೆಯ ವಾರದಲ್ಲಿ ಐಪಿಎಲ್ ಹರಾಜು ನಡೆಯಬಹುದು ಎನ್ನಲಾಗಿದೆ. ಹೀಗಾಗಿ ಯಾವ ಸ್ಟಾರ್‌ ಆಟಗಾರರು ಯಾವ ಫ್ರಾಂಚೈಸಿ ಸೇರಲಿದ್ದಾರೆ? ಎಷ್ಟು ಮೊತ್ತಕ್ಕೆ ಬಿಡ್ ಆಗಲಿದ್ದಾರೆ? ಎಂಬಿತ್ಯಾದಿ ವಿಷಯಗಳೆಲ್ಲಾ ಚರ್ಚೆಗೆ ಬಂದಿವೆ.

ಈಗಾಗಲೇ ನಡೆದಿರುವ ರೀಟೈನ್ ಪ್ರಕ್ರಿಯೆಯಲ್ಲಿ ಹಳೆಯ 8 ಫ್ರಾಂಚೈಸಿಗಳು, 19 ಭಾರತೀಯರು ಮತ್ತು 8 ವಿದೇಶಿಯರನ್ನು ಒಳಗೊಂಡಂತೆ ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ. ಆದರೆ ಹರಾಜಿಗೆ ತೆರಳಿರುವ ಆಟಗಾರರಲ್ಲಿ, ಅದ್ರಲ್ಲೂ ವಿದೇಶಿ ಆಟಗಾರರಲ್ಲಿ ಯಾರು ಹೆಚ್ಚು ಬಿಡ್ ಆಗಬಹುದು ಎಂಬ ಮಾಹಿತಿ ಈ ಕೆಳಗಿದೆ.

8 ವಿದೇಶಿ ಆಟಗಾರರನ್ನ ರೀಟೈನ್ ಮಾಡಿರುವ ಫ್ರಾಂಚೈಸಿಗಳು

8 ವಿದೇಶಿ ಆಟಗಾರರನ್ನ ರೀಟೈನ್ ಮಾಡಿರುವ ಫ್ರಾಂಚೈಸಿಗಳು

ಫ್ರಾಂಚೈಸಿಗಳು ಉಳಿಸಿಕೊಂಡಿರುವ 8 ವಿದೇಶಿ ಆಟಗಾರರೆಂದರೆ ಕೇನ್ ವಿಲಿಯಮ್ಸನ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಕಿರಾನ್ ಪೊಲಾರ್ಡ್, ಮೊಯಿನ್ ಅಲಿ, ಜೋಸ್ ಬಟ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅನ್ರಿಚ್ ನಾರ್ಟ್ಜೆ. ಉಳಿದ ಆಟಗಾರರನ್ನು ಆಯಾ ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದು, ಅವರು ಹರಾಜು ಪೂಲ್‌ಗೆ ಹಿಂತಿರುಗಿದ್ದಾರೆ. ಈ ಆಟಗಾರರಲ್ಲಿ ಯಾರು ಹೆಚ್ಚು ಬಿಡ್ ಆಗಬಹುದು ಮುಂದೆ ತಿಳಿಯಿರಿ.

ಈ ಆರು ಪ್ರಮುಖ ಆಟಗಾರರು IPL 2022 ಹರಾಜಿಗೂ ಮೊದಲೇ ಸೇಲ್ ಆಗಲಿದ್ದಾರೆ: ಆಕಾಶ್ ಚೋಪ್ರಾ

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಕಳೆದ ಸೀಸನ್‌ನಲ್ಲಿ ಕಳಪೆ ಫಾರ್ಮ್‌ನಿಂದ ಎಸ್‌ಆರ್ಎಚ್ ತಂಡದಿಂದ ಹೊರಬಿದ್ದಿದ್ದ ಡೇವಿಡ್ ವಾರ್ನರ್‌ನನ್ನ ಸನ್ ರೈಸರ್ಸ್ ಹೈದರಾಬಾದ್ ಮುಂದಿನ ಸೀಸನ್ ಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ನಿಸ್ಸಂದೇಹವಾಗಿ, ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್ ಯಶಸ್ಸಿಗೆ ಅತಿದೊಡ್ಡ ಕೊಡುಗೆ ನೀಡಿದ ಡೇವಿಡ್ ವಾರ್ನರ್ ಇನ್ನು ಮುಂದೆ ಐಪಿಎಲ್‌ನಲ್ಲಿ ಹೈದರಾಬಾದ್‌ ಪರ ಆಡುವುದಿಲ್ಲ.

ಕೇವಲ 150 ಪಂದ್ಯಗಳಲ್ಲಿ 41.59 ಸರಾಸರಿಯಲ್ಲಿ 5500 ರನ್ ಗಳಿಸುವಲ್ಲಿ ಯಶಸ್ವಿಯಾಗಿರುವ ವಾರ್ನರ್, ಐಪಿಎಲ್‌ನಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಎಸ್‌ಆರ್‌ಎಚ್‌ 2016 ರಲ್ಲಿ ತಮ್ಮ ಮೊದಲ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾರ್ನರ್ ವಿಶ್ವಕಪ್‌ನಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದು ಈತನ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ರಶೀದ್ ಖಾನ್

ರಶೀದ್ ಖಾನ್

ಕ್ರಿಕೆಟ್ ಜಗತ್ತಿನ ಮಾಂತ್ರಿಕ ಸ್ಪಿನ್ನರ್ ಆಗಿರುವ ರಶೀದ್ ಖಾನ್‌ರನ್ನ ಎಸ್‌ಆರ್‌ಎಚ್ ಫ್ರಾಂಚೈಸಿ ಬಿಟ್ಟುಕೊಟ್ಟು ಕೈ ಕೈ ಹಿಸುಕಿಕೊಳ್ತಿದೆ. ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್‌ರನ್ನ ತಮ್ಮ ಫ್ರಾಂಚೈಸಿಯಿಂದ ತೊರೆಯುವಂತೆ ಲಕ್ನೋ ಫ್ರಾಂಚೈಸಿ ಮಾಡುತ್ತಿದೆ ಎಂದು ಎರಡು ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿವೆ.

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ಮುಂದಿನ ವರ್ಷದ ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಗಾಗಿ ಆಡುವ ಸಾಧ್ಯತೆಯಿದೆ. ಅವರು ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರು ಹರಾಜಿನಲ್ಲಿ ದೊಡ್ಡ ಬಿಡ್ಡಿಂಗ್ ವಾರ್‌ಗೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲಾ ವಿದೇಶಿ ಆಟಗಾರರ ಪೈಕಿ ರಶೀದ್ ಖಾನ್ ಅತಿ ಹೆಚ್ಚು ಬಿಡ್ ಪಡೆಯಬಹುದು.

ಟ್ರೆಂಟ್ ಬೌಲ್ಟ್‌

ಟ್ರೆಂಟ್ ಬೌಲ್ಟ್‌

ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್‌ ಕೂಡ ಐಪಿಎಲ್ 15ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಲ್ಲ ವಿದೇಶಿ ಆಟಗಾರನಾಗಿದ್ದಾನೆ. ಅವರ ಕಳೆದ ಎರಡು ವರ್ಷಗಳು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಉತ್ತಮವಾಗಿ ಬೌಲ್‌ ಮಾಡಿದ್ದಾರೆ. ಆದ್ರೆ 2020 ರ ಆವೃತ್ತಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಅಷ್ಟೇನು ಮಿಂಚಲಿಲ್ಲ. ಆದ್ರೆ ಮುಂಬೈ ಇಂಡಿಯನ್ಸ್ ಪರ ಸಂಪೂರ್ಣವಾಗಿ ವಿಭಿನ್ನ ಬೌಲರ್ ಆಗಿ ಕಾಣಿಸಿಕೊಂಡರು.

ಮುಂಬೈ ಇಂಡಿಯನ್ಸ್, ದುರದೃಷ್ಟವಶಾತ್, ಮೆಗಾ ಹರಾಜಿನ ಮುಂಚೆಯೇ ಅವರನ್ನು ಬಿಡುಗಡೆ ಮಾಡಬೇಕಾಯಿತು. ಫ್ರಾಂಚೈಸಿಗಳು ಈತನ ಅನುಭವ ಮತ್ತು ಪ್ರದರ್ಶನ ಮೇಲೆ ಗಮನ ವಿಟ್ಟಿದ್ದು, ಬೌಲ್ಟ್ ಮೇಲೆ ಕಣ್ಣಿಟ್ಟಿರುತ್ತಾರೆ. ಹೀಗಾಗಿ ಈತ ವಿದೇಶಿ ಆಟಗಾರರಲ್ಲಿ ಹೆಚ್ಚಿನ ಬಿಡ್ ಅನ್ನು ಪಡೆಯಬಹುದು.

IPL 2022: ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಐವರು ಭಾರತೀಯ ಆಟಗಾರರು

ವಹಿಂದು ಹಸರಂಗ

ವಹಿಂದು ಹಸರಂಗ

2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ಹಸರಂಗ ಅವರು ಅಸಾಧಾರಣ ಆಟವಾಡಿದ್ದರು. ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಈತ. ಶ್ರೀಲಂಕಾ ಸೆಮಿಫೈನಲ್‌ಗೆ ತಲುಪದಿದ್ರು, ವಹಿಂದು ಹಸರಂಗಾ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

8 ಪಂದ್ಯಗಳಲ್ಲಿ ಅವರು 9.75 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಪಡೆದಿರುವ ಈತ ಖಂಡಿತವಾಗಿಯೂ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯುವ ಆಟಗಾರರಾಗಲಿದ್ದಾರೆ.

Ajaz Patel ಕ್ರಿಕೆಟ್ ಇತಿಹಾಸದ ಪುಟಗಳನ್ನು ಸೇರಿದ ದಿನ | Oneindia Kannada
ಜಾನಿ ಬೈಸ್ಟ್ರೋವ್

ಜಾನಿ ಬೈಸ್ಟ್ರೋವ್

ಜಾನಿ ಬೈರ್‌ಸ್ಟೋವ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಉತ್ತಮ ಆಟ ಪ್ರದರ್ಶಿಸಿದ್ದರು. 2021ರ ಆವೃತ್ತಿಯಲ್ಲಿ ಎಸ್‌ಆರ್‌ಎಚ್ ಪರ ಆಡುವಾಗ ಸ್ಫೋಟಕ ಇನ್ನಿಂಗ್ಸ್ ಪ್ರದರ್ಶಿಸಿದ್ರು. ಪಂದ್ಯಾವಳಿಯ ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 41.33 ಸರಾಸರಿಯಲ್ಲಿ 248 ರನ್ ಗಳಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಬೈಸ್ಟ್ರೋವ್ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ತೆರೆಯುವ ಮತ್ತು ಬ್ಯಾಟಿಂಗ್ ಮಾಡುವ ಅವರ ಸಾಮರ್ಥ್ಯವು ಫ್ರಾಂಚೈಸಿಗಳಿಂದ ಹೆಚ್ಚಿನ ಬಿಡ್‌ಗಳನ್ನು ಆಕರ್ಷಿಸುತ್ತದೆ. ಈ ಬಾರಿ ಅತಿ ಹೆಚ್ಚು ಬಿಡ್ ಆಗಬಲ್ಲ ವಿದೇಶಿ ಆಟಗಾರರಲ್ಲಿ ಈ ಇಂಗ್ಲೆಂಡ್ ಆಟಗಾರ ಕೂಡ ಸೇರಿದ್ದಾರೆ.

Story first published: Saturday, December 4, 2021, 15:29 [IST]
Other articles published on Dec 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X