ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈ ಸೀಸನ್‌ನಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡಿದ 5 ಪ್ಲೇಯರ್ಸ್

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಕೊನೆಯ ಲೀಗ್ ಪಂದ್ಯವನ್ನ ಶನಿವಾರ (ಮೇ. 21) ಆಡಲಿವೆ. ಹೀಗಿರುವಾಗ ಐಪಿಎಲ್ 15ನೇ ಸೀಸನ್‌ನ ಎರಡು ಹೊಸ ತಂಡಗಳು ಸೇರಿದಂತೆ ರಾಜಸ್ತಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ.

ಈ ಸೀಸನ್‌ನಲ್ಲಿ 9 ಬಾರಿ ಕಪ್ ಗೆದ್ದಿರುವ ಮುಂಬೈ ಮತ್ತು ಚೆನ್ನೈ ತಂಡಗಳು ಮನೆ ಸೇರಿದ ಮೊದಲೆರಡು ತಂಡಗಳಾಗಿವೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಿರ್ಗಮನದ ಜೊತೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಂತಹ ಅನೇಕ ಸೂಪರ್‌ಸ್ಟಾರ್‌ಗಳ ಕಳಪೆ ಪ್ರದರ್ಶನಗಳು ಈ ಋತುವಿನಲ್ಲಿ ಅಭಿಮಾನಿಗಳನ್ನು ನಿರಾಸೆಗೊಳಿಸಿವೆ.

ಆದ್ರೆ ಕಳೆದ ಸೀಸನ್‌ಗೆ ಹೋಲಿಸಿದ್ರೆ, ಕೆಲವು ಆಟಗಾರರು ಅದ್ಭುತವಾಗಿ ಕಂಬ್ಯಾಖ್ ಮಾಡಿದ್ದಾರೆ. ಐಪಿಎಲ್ 2021ರಲ್ಲಿ ಮಂಕಾಗಿದ್ದ ಈ ಐವರು ಆಟಗಾರರು 2022ರ ಸೀಸನ್‌ನಲ್ಲಿ ಮಿಂಚಿದ್ದಾರೆ. ಆ ಐವರು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ಕಾಣಬಹುದು.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದ್ದ ಆಟಗಾರ. ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕರಾಗಿದ್ದ ವಾರ್ನರ್, ತಂಡದ ಮ್ಯಾನೇಜ್‌ಮೆಂಟ್‌ನೊಂದಿಗಿನ ಘರ್ಷಣೆಯ ಮೂಲಕ ಟೂರ್ನಿಯ ಅರ್ಧದಲ್ಲೇ ಹೊರಗುಳಿದಿದ್ದರು. ವಾರ್ನರ್ ಕಳೆದ ಋತುವಿನಲ್ಲಿ ಎಂಟು ಪಂದ್ಯಗಳಲ್ಲಿ 195 ರನ್ ಗಳಿಸಿದ್ದರು. ಆದರೆ ಈ ಬಾರಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಪರ 11 ಇನ್ನಿಂಗ್ಸ್‌ಗಳಲ್ಲಿ 427 ರನ್ ಗಳಿಸಿದರು. ಇದರಲ್ಲಿ ಐದು ಅರ್ಧಶತಕಗಳು ಸೇರಿವೆ.

ದೀಪಕ್ ಹೂಡಾ

ದೀಪಕ್ ಹೂಡಾ

ದೀಪಕ್ ಹೂಡಾ 2021 ರಲ್ಲಿ ಪಂಜಾಬ್ ಕಿಂಗ್ಸ್‌ನೊಂದಿಗೆ ನಿರಾಶಾದಾಯಕ ಪ್ರದರ್ಶನ ನೀಡಿದರು. ಸ್ಪಿನ್ ಆಲ್ ರೌಂಡರ್ ಆಗಿರುವ ಹೂಡಾ 12 ಪಂದ್ಯಗಳಲ್ಲಿ 160 ರನ್ ಗಳಿಸಿದ್ದರು. ಸರಾಸರಿ ಕೇವಲ 16 ಆಗಿತ್ತು. ಆದರೆ ಈ ಬಾರಿ ದೀಪಕ್ ಹೂಡಾ ಲಕ್ನೋ ಸೂಪರ್ ಜೈಂಟ್ಸ್ ಜೊತೆ ಮಿಂಚಿದರು. ಹೂಡಾ ಇದುವರೆಗೆ 14 ಪಂದ್ಯಗಳಲ್ಲಿ 406 ರನ್ ಗಳಿಸಿದ್ದಾರೆ. ಸರಾಸರಿ 31.23 ಮತ್ತು ಸ್ಟ್ರೈಕ್‌ರೇಟ್‌ 133.55ರಲ್ಲಿ ಬ್ಯಾಟ್ ಬೀಸಿದ್ದಾರೆ. ಅಗ್ರ ಕ್ರಮಾಂಕ ಕಳೆದುಕೊಂಡರೂ ಈ ಋತುವಿನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್ ಕಟ್ಟುವಲ್ಲಿ ಹೂಡಾ ಶಕ್ತರಾಗಿದ್ದಾರೆ. ಭಾರತ ಟಿ20 ತಂಡಕ್ಕೂ ಹೂಡಾ ಅವರನ್ನು ಪರಿಗಣಿಸಲಾಗಿದೆ.

MI vs DC: ಪಂದ್ಯಕ್ಕೂ ಮುನ್ನ ಇನ್ಸ್ಟಾಗ್ರಾಂ ಸ್ಟೋರಿ ಹರಿಬಿಟ್ಟ ಅರ್ಜುನ್ ತೆಂಡೂಲ್ಕರ್; ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ!

ಕುಲದೀಪ್ ಯಾದವ್

ಕುಲದೀಪ್ ಯಾದವ್

ಕಳೆದ ಋತುವಿನಲ್ಲಿ ಕೆಕೆಆರ್ ಜೊತೆ ಬೆಂಚ್ ಮೇಲೆ ಕುಳಿತು ಸುಸ್ತಾಗಿದ್ದ ಕುಲದೀಪ್ ಯಾದವ್ ಈ ಬಾರಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿರುವ ಚೈನಾಮನ್ ಸ್ಪಿನ್ನರ್ ಈ ಬಾರಿ ಡೆಲ್ಲಿ ಜತೆಗಿದ್ದಾರೆ. ಕುಲದೀಪ್ 13 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿದ್ದಾರೆ. ಕುಲದೀಪ್ ಎರಡು ಬಾರಿ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಕುಲದೀಪ್ ಕಳೆದ ಸೀಸನ್‌ನ ಕಳಪೆ ಪ್ರದರ್ಶನದಿಂದ ಬಲವಾದ ಕಂಬ್ಯಾಕ್ ಮಾಡಿದ್ದಾರೆ.

IPL 2022: ಕ್ವಾಲಿಫೈಯರ್ 1 ಪಂದ್ಯ ನಿಗದಿ, ಗುಜರಾತ್ ಜೊತೆ ಸೆಣಸಾಡಲಿದೆ ಈ ತಂಡ; ಇಲ್ಲಿದೆ ವಿವರ

ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಕಳೆದ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಸಹಾ 9 ಪಂದ್ಯಗಳಲ್ಲಿ ಕೇವಲ 131 ರನ್ ಗಳಿಸಿದ್ದರು. ಸರಾಸರಿ 14.55 ಮತ್ತು ಸ್ಟ್ರೈಕ್‌ರೇಟ್‌ 93.57 ಆಗಿತ್ತು. ಆದರೆ ಈ ಬಾರಿ ಸಹಾ ಅಮೋಘ ಪ್ರದರ್ಶನ ನೀಡಿ ಗುಜರಾತ್ ಟೈಟಾನ್ಸ್ ಗೆ ಬಂದರು. ಆರಂಭಿಕ ಆಟಗಾರ ಇದುವರೆಗೆ 312 ರನ್ ಗಳಿಸಿದ್ದಾರೆ. 39 ಸರಾಸರಿ ಮತ್ತು 124.80 ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಗುಜರಾತ್ ಪರ ಉತ್ತಮ ಆರಂಭ ಒದಗಿಸುತ್ತಿರುವ ಈ ಅನುಭವಿ ಬ್ಯಾಟರ್ ಮೂರು ಅರ್ಧಶತಕಗಳನ್ನ ದಾಖಲಿಸಿದ್ದಾರೆ. ಈ ಋತುವಿನಲ್ಲಿ ಸಹಾ ಅವರ ಪ್ರದರ್ಶನವು ಕಳೆದ ಸೀಸನ್‌ಗಿಂತ ಉತ್ತಮವಾಗಿದೆ.

ನಿಕೋಲಸ್ ಪೂರನ್

ನಿಕೋಲಸ್ ಪೂರನ್

ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಜೊತೆಗಿದ್ದ ನಿಕೋಲಸ್ ಪೂರನ್ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ವಿಂಡೀಸ್ ಪರ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಪ್ರಸ್ತುತ ಶ್ರೇಷ್ಠ ಆಟಗಾರ ಎಂದೇ ಹೆಸರಾಗಿರುವ ಪೂರನ್ ಕಳೆದ ಋತುವಿನಲ್ಲಿ 85 ರನ್ ಗಳಿಸಿದ್ದರು. ಮೈದಾನದಲ್ಲಿ ಗಮನ ಸೆಳೆದರೂ ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರು. ಆದರೆ, ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಿಕೋಲಸ್ ಪೂರನ್ 13 ಪಂದ್ಯಗಳಲ್ಲಿ 301 ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಅವರ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವಾಗ ಪೂರನ್ ಬಲವಾದ ಕಂಬ್ಯಾಕ್ ಮಾಡಿದ್ದಾರೆ.

Story first published: Saturday, May 21, 2022, 14:10 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X