ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!

IPL 2022: These 5 Team India cricketers IPL form is concern for the Indian National Team

15ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದ್ದು ಟೂರ್ನಿಯಲ್ಲಿ ಸಾಕಷ್ಟು ಏರಿಳಿತಳು ನಡೆಯುತ್ತಿದೆ. ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಹಾಗೂ ಬೌಲಿಂಗ್ ಎರಡೂ ವಿಭಾಗದಿಂದಲೂ ಪರಿಣಾಮಕಾರಿ ಪ್ರದರ್ಶನ ವ್ಯಕ್ತವಾಗುತ್ತಿರುವುದು ಟೂರ್ನಿಯ ಸಕಾರಾತ್ಮಕ ಅಂಶಗಳಲ್ಲಿ ಒಂದು. ಅನುಭವಿ ಆಟಗಾರರೊಂದಿಗೆ ಯುವ ಆಟಗಾರರು ಕೂಡ ತಮ್ಮ ಸಾಮರ್ಥ್ಯವನ್ನು ಈ ಬಾರಿ ಬಹಿರಂಗಪಡಿಸಿದ್ದಾರೆ.

ಆದರೆ ಕೆಲ ಪ್ರಮುಖ ಆಟಗಾರರ ಪ್ರದರ್ಶನ ಈ ಬಾರಿಯ ಐಪಿಎಲ್‌ನಲ್ಲಿ ನೀರಸವಾಗಿದೆ. ಅದರಲ್ಲೂ ಟೀಮ್ ಇಂಡಿಯಾ ಟಿ20 ತಂಡದ ಪ್ರಮುಖ ಭಾಗವಾಗಿರುವ ಕೆಲ ಆಟಗಾರರೇ ಈ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಈ ಟೂರ್ನಿಯಲ್ಲಿ ಆಟಗಾರರ ಫಾರ್ಮ್ ಐಪಿಎಲ್‌ನ ದೃಷ್ಟಿಯಿಂದ ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಮಡದ ದೃಷ್ಟಿಯಿಂದಲೂ ಬಹಳ ನಿರ್ಣಾಯಕವಾಗಿದೆ. ಅದರಲ್ಲೂ ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಈ ಸಂದರ್ಭದಲ್ಲಿ ಪ್ರಮುಖ ಆಟಗಾರರ ಈ ಕಳಪೆ ಪ್ರದರ್ಶನ ನಿಜಕ್ಕೂ ಕಳವಳಕ್ಕೆ ಕಾರಣವಾಗಿದೆ.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ಹಾಗಾದರೆ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ವಿಫಲವಾಗಿ ಕಳವಳ ಮೂಡಿಸಿರುವ ಐವರು ಭಾರತೀಯ ತಂಡದ ಆಟಗಾರರು ಯಾರು? ಮುಂದೆ ಓದಿ..

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್

ಟೀಮ್ ಇಂಡಿಯಾದ ಮೂರು ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಶಾರ್ದೂಲ್ ಠಾಕೂರ್ ಈ ಬಾರಿಯ ಆವೃತ್ತಿಯಲ್ಲಿ ನಿರಾಸೆ ಮೂಡಿಸಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ಶಾರ್ದೂಲ್ ಪ್ರದರ್ಶನ ಗಮನಾರ್ಹವಾಗಿಲ್ಲ. ಆಡಿರುವ 12 ಪಂದ್ಯಗಳಲ್ಲಿ ಸರಾಸರಿ 45ರಂತೆ ಕೇವಲ 9 ವಿಕೆಟ್ ಪಡೆಯುವಲ್ಲಿ ಮಾತ್ರವೇ ಶಾರ್ದೂಲ್ ಸಫಲವಾಗಿದ್ದಾರೆ. ಆದರೆ ಪ್ರತಿ ಓವರ್‌ಗೆ 9.8ರಂತೆ ರನ್‌ ಬಿಟ್ಟುಕೊಟ್ಟಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಒಂದು ಹಂತಕ್ಕೆ ತಂಡಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎಂಬುದು ಮಾತ್ರ ಸತ್ಯ.

ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಶಾರ್ದೂಲ್ ಅದ್ಭುತ ಬೌಲಿಂಗ್ ದಾಳಿ ನಡೆಸಿ ತಂಡ ಟ್ರೋಫಿ ಗೆಲ್ಲುವಲ್ಲಿ ತಮ್ಮ ಕೊಡುಗೆಯನ್ನೂ ನೀಡಿದ್ದರು. ಆಡಿದ 16 ಪಂದ್ಯಗಳಲ್ಲಿ ಠಾಕೂರ್ 21 ವಿಕೆಟ್ ಪಡೆದಿದ್ದ ಶಾರ್ದೂಲ್ ಈ ಫಾರ್ಮ್‌ಅನ್ನು ಈ ಬಾರಿಯ ಆವೃತ್ತಿಯಲ್ಲಿ ಮುಂದುವರಿಸಲು ವಿಫಲವಾಗಿದ್ದಾರೆ.

ರಿಷಭ್ ಪಂತ್

ರಿಷಭ್ ಪಂತ್

24ರ ಹರೆಯದ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂತ್ ನೇತೃತ್ವದಲ್ಲಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಡೆಲ್ಲಿ ಈ ಬಾರಿಯ ಆವೃತ್ತಿಯಲ್ಲಿ ಅಂತಾ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಪ್ಲೇಆಫ್ ಹಂತಕ್ಕೇರುವ ಪೈಪೋಟಿಯಲ್ಲಿ ಉಳಿದುಕೊಂಡಿದ್ದರೂ ಈ ಹಾದಿ ಸುಲಭವಿಲ್ಲ. ಈ ಸಂದರ್ಭದಲ್ಲಿ ರಿಷಭ್ ಪಂತ್ ಅವರ ವೈಯಕ್ತಿಕ ಫಾರ್ಮ್ ಕೂಡ ಕಳೆದುಕೊಂಡಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ. ಪಂತ್ ಈ ಬಾರಿಯ ಆವೃತ್ತಿಯಲ್ಲಿ ಈವರೆಗೆ ಒಂದು ಅರ್ಧ ಶತಕವನ್ನು ಬಾರಿಸುವಲ್ಲಿಯೂ ವಿಫಲವಾಗಿದ್ದಾರೆ.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತಿ ದುಬಾರಿ ಆಟಗಾರನಾಗಿ ಈ ಬಾರಿಯ ಆವೃತ್ತಿಗೆ ಕಣಕ್ಕಿಳಿದು ನಂತರ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡ ಅನುಭವಿ ಆಟಗಾರ ರವೀಂದ್ರ ಜಡೇಜಾಗೆ ಈ ಆವೃತ್ತಿ ಅತ್ಯಂತ ಕಹಿ ನೆನಪುಗಳನ್ನೇ ನೀಡಿದೆ. ನಾಯಕನಾಗಿ, ಆಟಗಾರನಾಗಿ ಎಲ್ಲಾ ವಿಭಾಗದಲ್ಲಿಯೂ ರವೀಂದ್ರ ಜಡೇಜಾ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 16 ಕೋಟಿ ಮೊತ್ತಕ್ಕೆ ರೀಟೈನ್ ಆಗಿದ್ದ ಜಡೇಜಾ ಅವರನ್ನು ತಂಡ ನಾಯಕನನ್ನಾಗಿ ನೇಮಕ ಮಾಡಿತ್ತು. ಆದರೆ ಸತತ ಸೋಲಿನ ಬಳಿಕ, ವೈಯಕ್ತಿಕ ಪ್ರದರ್ಶನ ಕೂಡ ಕಳಪೆಯಾದ ಕಾರಣ ನಾಯಕತ್ವವನ್ನು ತೊರೆದರು.

ರವೀಂದ್ರ ಜಡೇಜಾ ಆಡಿದ 10 ಪಂದ್ಯಗಳಲ್ಲಿ ಕೇವಲ 116 ರನ್ ಮಾತ್ರವೇ ಗಳಿಸಿದ್ದಾರೆ. ಸರಾಸರಿ 19.33 ಆಗಿದ್ದರೆ ಸ್ಟ್ರೈಕ್‌ರೇಟ್ 118.37. 2021ರ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಜಡೇಜಾ 75.66 ಸರಾಸರುಯಲ್ಲಿ ಹಾಗೂ 145.51 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿ ಇಂಥಾ ಕಳಪೆ ಪ್ರದರ್ಶನವನ್ನು ಅರಗಿಸಿಕೊಳ್ಳಲು ರವೀಂದ್ರ ಜಡೇಜಾ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಬೌಲಿಂಗ್‌ನಲ್ಲಿ ಜಡೇಜಾ ಪ್ರದರ್ಶನ ಮತ್ತಷ್ಟು ಕಳಪೆಯಾಗಿದ್ದು ಆಡಿದ ಹತ್ತು ಪಂದ್ಯಗಳಲ್ಲಿ 5 ವಿಕೆಟ್ ಮಾತ್ರವೇ ಪಡೆದುಕೊಂಡಿದ್ದಾರೆ. ಹೀಗಾಗಿ ಜಡೇಜಾ ಪ್ರದರ್ಶನ ಟೀಮ್ ಇಂಡಿಯಾದ ದೃಷ್ಟಿಯಿಂದಲೂ ಆತಂಕ ಮೂಡಿಸಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಈ ಬಾರಿಯ ಐಪಿಎಲ್ ದುಸ್ವಪ್ನದಂತೆ ಕಾಡುತ್ತಿದೆ. ವಿರಾಟ್ ಕೊಹ್ಲಿ ರನ್‌ಗಳಿಸಲು ಅಕ್ಷರಶಃ ತಿಣುಕಾಡುತ್ತಿದ್ದಾರೆ. ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಈವರೆಗೆ 12 ಪಂದ್ಯಗಳನ್ನು ಈ ಬಾರಿಯ ಆವೃತ್ತಿಯಲ್ಲಿ ಆಡಿದ್ದು ಇದರಲ್ಲಿ 111.34ರ ಸ್ಟ್ರೈಕ್‌ರೇಟ್‌ನೊಂದಿಗೆ 216 ರನ್‌ಗಳನ್ನು ಗಳಿಸಿದ್ದಾರೆ. ನಾಯಕತ್ವದ ಜವಾಬ್ಧಾರಿ ತೊರೆದು ಕೇವಲ ಆಟಗಾರನಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದು ಅವರ ಕಳಪೆ ಫಾರ್ಮ್‌ಗೆ ಸಾಕ್ಷಿಯಾಗಿದೆ. ನಂತರ ಒಂದು ಅರ್ಧ ಶತಕ ದಾಖಲಿಸಿದರೂ ಕೊಹ್ಲಿ ಸ್ಟ್ರೈಕ್‌ರೇಟ್ ಉತ್ತಮವಾಗಿರಲಿಲ್ಲ. ವಿಶ್ವ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿರುವ ಕೊಹ್ಲಿಯಿಂದ ದೊಡ್ಡ ಮಟ್ಟದ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಈಗಿನ ಅವರ ಫಾರ್ಮ್ ವಿಶ್ವಕಪ್ ದೃಷ್ಟಿಯಿಂದ ಕಳವಳ ಮೂಡಿಸಿರುವುದು ಸುಳ್ಳಲ್ಲ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಅತ್ಯಂತ ಹೀನಾಯ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಸಹಿತ ಪ್ರಮುಖ ಆಟಗಾರರಿಂದ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ಬಾರದಿರುವುದು ತಂಡಕ್ಕೆ ನಿರಾಸೆ ಮೂಡಿಸಿದೆ. ಅದರಲ್ಲೂ ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದಿರುವ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ ಅವರು ಈ ಬಾರಿಯ ಆವೃತ್ತಿಯಲ್ಲಿ ನೀಡಿರುವ ಪ್ರದರ್ಶನ ತಂಡದ ಹಿನ್ನಡೆಗೆ ಕಾರಣವಾಗಿದೆ. ಆಡಿರುವ 11 ಒಂದ್ಯಗಳಲ್ಲಿ ರೋಹಿತ್ ಶರ್ಮಾ 200 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ 125 ರಷ್ಟಿದೆ. ರೋಹಿತ್ ಶರ್ಮಾ ಅವರಿಗೆ ಕೂಡ ವಿರಾಟ್ ಕೊಹ್ಲಿಯಂತೆಯೇ ಇದು ತಮ್ಮ ವೃತ್ತಿ ಜೀವನದ ಅತ್ಯಂತ ಕೆಟ್ಟ ಐಪಿಎಲ್ ಆವೃತ್ತಿಯಾಗಿದೆ. ಟೀಮ್ ಇಂಡಿಯಾದ ಮೂರು ಮಾದರಿಯಲ್ಲಿಯೂ ನಾಯಕನಾಗಿರುವ ರೋಹಿತ್ ಶರ್ಮಾ ಅವರ ಈ ಪ್ರದರ್ಶನ ಮ್ಯಾನೇಜ್‌ಮೆಂಟ್‌ಗೂ ಸಹಜವಾಗಿ ಚಿಂತೆ ಹೆಚ್ಚಿಸಿರುತ್ತದೆ.

Story first published: Friday, May 13, 2022, 14:48 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X