ಪೈಸಾ ವಸೂಲ್: ಕಡಿಮೆ ಮೊತ್ತ ಪಡೆದ್ರೂ, ಸಖತ್ ಫರ್ಪಾಮೆನ್ಸ್ ನೀಡಿದ IPL ಪ್ಲೇಯರ್ಸ್

ಐಪಿಎಲ್ 15ನೇ ಸೀಸನ್‌ ಈ ಹಿಂದಿನ ಐಪಿಎಲ್ ಸೀಸನ್‌ಗಿಂತ ಸಾಕಷ್ಟು ಕುತೂಹಲದೊಂದಿಗೆ ಕಾಣಿಸಿಕೊಳ್ಳಲಿದೆ. ಏಕೆಂದರೆ ಪ್ರತಿ ಸೀಸನ್‌ನಂತೆ ಕೇವಲ ಎಂಟು ತಂಡಗಳಷ್ಟೇ ಕಾದಾಟಕ್ಕೆ ಇಳಿಯುತ್ತಿಲ್ಲ. ಬದಲಾಗಿ ಈ ಬಾರಿ 10 ತಂಡಗಳು ಅಖಾಡಕ್ಕಿಳಿಯಲಿದ್ದು, ಇದುವರೆಗೂ ನಡೆಯುತ್ತಿದ್ದ ಒಟ್ಟು 60 ಪಂದ್ಯಗಳ ಬದಲಿಗೆ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.

ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಐಪಿಎಲ್ 2020ರ ಪೂರ್ಣ ಸೀಸನ್ ಮತ್ತು ಐಪಿಎಲ್ 2021ರ ಅರ್ಧ ಸೀಸನ್‌ ಯುಎಇನಲ್ಲಿ ನಡೆಯಿತು. ಆದ್ರೆ ಈ ಬಾರಿ ಎಲ್ಲಿ ಟೂರ್ನಿಯನ್ನ ನಡೆಸಬೇಕು ಎಂಬುದರ ಕುರಿತಾಗಿ ಬಿಸಿಸಿಐ ಚರ್ಚೆ ನಡೆಸುತ್ತಿದ್ದು, ಅಂತಿಮ ತೀರ್ಮಾನ ಅಧಿಕೃತವಾಗಿ ಹೊರಬೀಳಬೇಕಿದೆ.

ಇದರ ನಡುವೆ ಬೆಂಗಳೂರಿನಲ್ಲಿ ಫೆಬ್ರವರಿ 12-13ರಂದು ಐಪಿಎಲ್ ಮೆಗಾ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆಟಗಾರರ ಮೇಲೆ ಫ್ರಾಂಚೈಸಿಗಳು ಭಾರೀ ಮೊತ್ತದ ಬಿಡ್‌ ನಡೆಸಲಿವೆ. ಇದರ ನಡುವೆ ಕೆಲವು ಆಟಗಾರರು ಹೆಚ್ಚು ಬೆಲೆ ಹೊಂದಿದ್ರೆ ಮತ್ತು ಕೆಲವರು ಕಡಿಮೆ ಮೌಲ್ಯವನ್ನು ಹೊಂದಿದ್ದಾರೆ. ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಬೊಂಬಾಟ್ ಪ್ರದರ್ಶನ ನೀಡುತ್ತಾರೆ ಎಂಬ ಉದಾಹರಣೆ ಕಡಿಮೆ. ಆದ್ರೆ ಐಪಿಎಲ್ ಇತಿಹಾಸದಲ್ಲಿ ಕಡಿಮೆ ಮೊತ್ತಕ್ಕೆ ತಂಡ ಸೇರಿಕೊಂಡು ಬೊಂಬಾಟ್ ಪ್ರದರ್ಶನ ನೀಡಿದ ಆಟಗಾರರ ವಿವರ ಈ ಕೆಳಗಿದೆ.

1. ಕ್ರಿಸ್‌ಗೇಲ್ , ಆರ್‌ಸಿಬಿ (2011)

1. ಕ್ರಿಸ್‌ಗೇಲ್ , ಆರ್‌ಸಿಬಿ (2011)

ಟಿ20 ಕ್ರಿಕೆಟ್‌ನ ಬ್ರಾಂಡ್ ಅಂಬಾಸಿಡರ್, ಯೂನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಆರ್‌ಸಿಬಿ ತಂಡಕ್ಕೆ ಬರುವ ಮೊದಲು ಕೆಕೆಆರ್ ತಂಡದಲ್ಲಿ ಸಾಧಾರಣ ಪರ್ಫಾಮೆನ್ಸ್ ನೀಡುತ್ತಿದ್ರು. ಆದ್ರೆ ಯಾವಾಗ ಆರ್‌ಸಿಬಿ 2011ರ ಸೀಸನ್‌ನಲ್ಲಿ ಗೇಲ್‌ರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತೋ, ಯೂನಿವರ್ಸಲ್ ಬಾಸ್ ಅಬ್ಬರ ಶುರುವಾಯ್ತು.

ಕ್ರಿಸ್‌ಗೇಲ್‌ರನ್ನ ಆರ್‌ಸಿಬಿ 2011ರಲ್ಲಿ 2.97 ಕೋಟಿ ರೂಪಾಯಿಗೆ ಖರೀದಿಸಿತು. ಈ ಸೀಸನ್‌ನಲ್ಲಿ ಕ್ರಿಸ್‌ಗೇಲ್‌ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿ 608ರನ್‌ ಕಲೆಹಾಕಿದ್ರು. 188.13 ಸ್ಟ್ರೈಕ್‌ರೇಟ್‌ ಬ್ಯಾಟಿಂಗ್ ಮಾಡಿದ ಕ್ರಿಸ್‌ಗೇಲ್ 2 ಶತಕ ಕೂಡ ಸಿಡಿಸಿದ್ರು. ಈ ಮೂಲಕ ತಂಡದ ಬೆನ್ನಲುಬು ಆಗಿ ಗುರುತಿಸಿಕೊಂಡ ಗೇಲ್ ಮುಂದಿನ ಸೀಸನ್‌ನಲ್ಲೇ 733 ರನ್ ಸಿಡಿಸಿದ್ರು.

2. ಆ್ಯಂಡ್ರೆ ರಸೆಲ್, ಕೆಕೆಆರ್ (2014)

2. ಆ್ಯಂಡ್ರೆ ರಸೆಲ್, ಕೆಕೆಆರ್ (2014)

ಆ್ಯಂಡ್ರೆ ರಸೆಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರುವವರೆಗೂ ಆತನ ನಿಜವಾದ ತಾಕತ್ತೇನು ಎಂದು ಎಲ್ಲರಿಗೂ ತಿಳಿದಿರಲಿಲ್ಲ. 2014 ಐಪಿಎಲ್ ಹರಾಜಿನಲ್ಲಿ ಕೇವಲ 60 ಲಕ್ಷ ರೂಪಾಯಿಗೆ ಆ್ಯಂಡ್ರೆ ರಸೆಲ್ ಕೆಕೆಆರ್ ತಂಡದ ಪರ ಸೇರಿಕೊಂಡ್ರು. ಆನಂತರ ಆತ ನಿಜವಾದ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡ್ರು.

2015ರ ಐಪಿಎಲ್ ಸೀಸನ್‌ನಲ್ಲಿ 326 ರನ್ ಕಲೆಹಾಕಿದ ರಸೆಲ್ 192.89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು. ಇಷ್ಟಲ್ಲದೆ 7.96 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 14 ವಿಕೆಟ್ ಕೂಡ ಕಬಳಿಸಿದ್ರು.

KL ರಾಹುಲ್‌ಗೆ 17 ಕೋಟಿ ನೀಡಿ ಖರೀದಿಸಿದ ಲಕ್ನೋ ಫ್ರಾಂಚೈಸಿ: ಐಪಿಎಲ್‌ನಲ್ಲೇ ಗರಿಷ್ಠ ಮೊತ್ತ

3. ಬ್ರೆಂಡನ್ ಮೆಕಲಮ್, ಕೆಕೆಆರ್ (2014)

3. ಬ್ರೆಂಡನ್ ಮೆಕಲಮ್, ಕೆಕೆಆರ್ (2014)

ತನ್ನ ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್ ಮೂಲಕ 2000 ಇಸವಿಯಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿದ ಬ್ರೆಂಡನ್ ಮೆಕಲಮ್ ತಮ್ಮ ಡಿಸ್ಟ್ರಕ್ಟಿವ್ ಬ್ಯಾಟಿಂಗ್ ಹೆಸರುವಾಸಿ. ಐಪಿಎಲ್ 2008ರ ಚೊಚ್ಚಲ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 158ರನ್ ಸಿಡಿಸಿದ್ದ ಮೆಕಲಮ್ ಆಟವನ್ನ ಇಂದಿಗೂ ಅಭಿಮಾನಿಗಳು ಮರೆತಿಲ್ಲ.

ಕೆಕೆಆರ್ ಪರ ಐಪಿಎಲ್ ಜರ್ನಿ ಆರಂಭಿಸಿದ ಮೆಕಲಮ್‌ರನ್ನ ಕೊಲ್ಕತ್ತಾ ನಂತರದ ಸೀಸನ್‌ಗಳಲ್ಲಿ ಪರ್ಫಾಮೆನ್ಸ್ ಆಧರಿಸಿ ಕೊಚ್ಚಿ ಟಸ್ಕರ್ಸ್‌ಗೆ ಮಾರಾಟ ಮಾಡಿತು. ನಂತರದ ಸೀಸನ್‌ನಲ್ಲಿ ಕೊಚ್ಚಿ ಕೂಡ ಬ್ರೆಂಡನ್‌ಗೆ ಗೇಟ್‌ ಪಾಸ್ ನೀಡಿತು. ಆನಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2014ರ ಐಪಿಎಲ್ ಸೀಸನ್‌ನಲ್ಲಿ ಅವರನ್ನ 3.25 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಆ ಸೀಸನ್‌ನಲ್ಲಿ ಮೆಕಲಮ್ ಅಬ್ಬರದ ಬ್ಯಾಟಿಂಗ್ ತೋರಿದ್ರು. ಅವರ ಸಾಮರ್ಥ್ಯಕ್ಕೆ ಪ್ರೈಸ್ ಟ್ಯಾಗ್ ಕಡಿಮೆಯಾಗಿದ್ರೂ ಸಹ, ಉತ್ತಮ ಆಟದ ಮೂಲಕ ಮಿಂಚಿದ್ರು.

4. ಮನೀಶ್ ಪಾಂಡೆ, ಕೆಕೆಆರ್ (2014)

4. ಮನೀಶ್ ಪಾಂಡೆ, ಕೆಕೆಆರ್ (2014)

2008ರ ಅಂಡರ್-19 ವಿಶ್ವಕಪ್ ಚಾಂಪಿಯನ್ ಭಾರತದ ತಂಡದ ಭಾಗವಾಗಿದ್ದ ಮನೀಶ್ ಪಾಂಡೆ 2009ರಲ್ಲಿ ಆರ್‌ಸಿಬಿ ಪರ ಶತಕ ಸಿಡಿಸುವ ಮೂಲಕ ಸಾಕಷ್ಟು ಹೈಲೈಟ್ ಆಗಿದ್ದರು. 114ರನ್ ಕಲೆಹಾಕಿದ ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಮ್ಮೆಗೆ ಪಾತ್ರರಾದರು.

ಆರ್‌ಸಿಬಿಯಿಂದ ಪುಣೆ ಮೂಲದ ಫ್ರಾಂಚೈಸಿಗೆ ಹೋಗಿದ್ದ ಪಾಂಡೆ 2014ರ ಐಪಿಎಲ್ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್) 1.7 ಕೋಟಿ ರೂಪಾಯಿಗೆ ಖರೀದಿಸಿತು. ಅದೇ ಸೀಸನ್‌ನ ಫೈನಲ್‌ನಲ್ಲಿ ಮಿಂಚಿದ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್‌ ಸಿಡಿಸಿ ಕೆಕೆಆರ್ ಎರಡನೇ ಬಾರಿ ಐಪಿಎಲ್ ಕಪ್ ಗೆಲ್ಲಲು ನೆರವಾದ್ರು. ಇದು ಪಾಂಡೆಯನ್ನ ಖರೀದಿಸಿದಕ್ಕೂ ಸಾರ್ಥಕವಾಯಿತು ಎಂದು ಫ್ರಾಂಚೈಸಿ ಖುಷಿ ಪಟ್ಟಿತು.

IPL 2022 ಹರಾಜು: 2 ಕೋಟಿ ಮೂಲ ಬೆಲೆ ಹೊಂದಿರುವ ಭಾರತದ ಆಟಗಾರರು

5. ರಾಹುಲ್ ತ್ರಿಪಾಠಿ, ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್‌ (2017)

5. ರಾಹುಲ್ ತ್ರಿಪಾಠಿ, ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್‌ (2017)

2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್ ಪ್ರದರ್ಶನ ತಗ್ಗಿದ್ದರೂ ಸಹ ರಾಹುಲ್ ತ್ರಿಪಾಠಿ ಉತ್ತಮ ಬ್ಯಾಟಿಂಗ್ ಮತ್ತು ಆಕರ್ಷಕ ಫೀಲ್ಡಿಂಗ್ ಮೂಲಕ ಗಮನಸೆಳೆದ್ರು. ಹರಾಜು ವೇಳೆ ಕೇವಲ 10 ಲಕ್ಷ ರೂಪಾಯಿಗೆ ಬಿಕರಿಯಾದ ರಾಹುಲ್ ತ್ರಿಪಾಠಿ 14 ಪಂದ್ಯಗಳಲ್ಲಿ 146.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ 391 ರನ್ ಕಲೆಹಾಕಿದ್ರು. 10 ಲಕ್ಷ ರೂಪಾಯಿ ಖರೀದಿಯಾದ ಆಟಗಾಋ 391ರನ್ ಕಲೆಹಾಕಿದ್ದು ನಿಜಕ್ಕೂ ಫ್ರಾಂಚೈಸಿಗೆ ಪೈಸಾ ವಸೂಲ್‌ನಂತಿತ್ತು.

ನಿರ್ಗತಿಕ ವೃದ್ಧನಿಗೆ ನೆರವಾದ ಟ್ರಾಫಿಕ್ ಪೊಲೀಸ್ ವೀಡಿಯೋ ಫುಲ್ ವೈರಲ್ | Oneindia Kannada
6. ರುತುರಾಜ್ ಗಾಯಕ್ವಾಡ್, ಸಿಎಸ್‌ಕೆ (2019)

6. ರುತುರಾಜ್ ಗಾಯಕ್ವಾಡ್, ಸಿಎಸ್‌ಕೆ (2019)

ಭವಿಷ್ಯದ ಟೀಂ ಇಂಡಿಯಾದ ತಾರೆ ಎಂದೇ ಗುರುತಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ 2021ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಕೀರ್ತಿ ಇವರದ್ದಾಗಿದೆ.

2018-2019ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ಅತಿ ಹೆಚ್ಚು ರನ್‌ ಸಿಡಿಸಿದ್ದ ರುತುರಾಜ್ ಗಾಯಕ್ವಾಡ್‌ರನ್ನ ಧೋನಿ ಟೀಮ್ ಸಿಎಸ್‌ಕೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು. 2019ರ ಸೀಸನ್‌ನಲ್ಲಿ ಕೇವಲ 20 ಲಕ್ಷ ರೂಪಾಯಿಗೆ ಗಾಯಕ್ವಡ್‌ರನ್ನ ಸಿಎಸ್‌ಕೆ ಖರೀದಿಸಿತು. ಆನಂತರ ನಡೆದಿದ್ದು ರುತುರಾಜ್‌ ಅದ್ಭುತ ಆಟ.

ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ಈ ಯುವ ಮಹಾರಾಷ್ಟ್ರ ಕ್ರಿಕೆಟಿಗ 2021ರ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ಪರ 45.35 ಬ್ಯಾಟಿಂಗ್ ಸರಾಸರಿ ಮತ್ತು 136.26 ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ 635 ರನ್ ಸಿಡಿಸಿದ್ರು.

For Quick Alerts
ALLOW NOTIFICATIONS
For Daily Alerts
Story first published: Saturday, January 22, 2022, 12:52 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X