ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

Tilak verma

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಪ್ರದರ್ಶನದ ಮೂಲಕ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ ಮುಂಬೈ ಆಟಗಾರ ತಿಲಕ್ ವರ್ಮಾ ಕುರಿತು ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇ ಆಫ್ ತಲುಪುವ ಕೊನೆಯ ದಾರಿಯನ್ನ ಮುಚ್ಚಿದ ಮುಂಬೈ ಇಂಡಿಯನ್ಸ್‌ ಗುರುವಾರ (ಮೇ.12) ವಾಂಖೆಡೆ ಅಂಗಳದಲ್ಲಿ ಗೆಲುವಿನ ನಗೆ ಬೀರಿತು. 98ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್, ಐದು ವಿಕೆಟ್‌ಗಳನ್ನ ಕಳೆದುಕೊಂಡ ಸಂದರ್ಭದಲ್ಲಿ ಅಜೇಯ 34 ರನ್‌ ಕಲೆಹಾಕಿದ ತಿಲಕ್‌ ವರ್ಮಾ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ತಿಲಕ್ ವರ್ಮಾ 32 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಜೊತೆಗೆ 34 ರನ್ ಗಳಿಸಿದರು ಮತ್ತು 23 ಎಸೆತಗಳಲ್ಲಿ 18 ರನ್ ಗಳಿಸಿದ ಹೃತಿಕ್ ಶೋಕೀನ್ ಅವರೊಂದಿಗೆ 48 ರನ್ ಜೊತೆಯಾಟವಾಡಿದ್ರು. ಇವರ ಇನ್ನಿಂಗ್ಸ್‌ನಿಂದ ಮುಂಬೈ ಗೆದ್ದು ಬೀಗಿದೆ.

ಮುಂಬೈ ಪರ ಉತ್ತಮ ಬ್ಯಾಟಿಂಗ್ ಆಡಿರುವ ತಿಲಕ್

ಮುಂಬೈ ಪರ ಉತ್ತಮ ಬ್ಯಾಟಿಂಗ್ ಆಡಿರುವ ತಿಲಕ್

12 ಇನ್ನಿಂಗ್ಸ್‌ಗಳಲ್ಲಿ 40.89 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ತಿಲಕ್ ವರ್ಮಾ 368 ರನ್‌ಗಳನ್ನು ಗಳಿಸಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇಕ್ಕಟ್ಟಿನ ಸಂದರ್ಭಗಳಲ್ಲಿ ಆಟಗಾರನ ಮನಸ್ಥಿತಿಯನ್ನ ಗಮನಿಸಿದ ರೋಹಿತ್ ಹೈದ್ರಾಬಾದ್ ಮೂಲಕ ಬ್ಯಾಟರ್ ಅನ್ನು ಶ್ಲಾಘಿಸಿದರು.

ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!

ಶೀಘ್ರದಲ್ಲೇ ತಿಲಕ್ 3 ಫಾರ್ಮೆಟ್ ಆಡುತ್ತಾನೆ ಎಂದ ರೋಹಿತ್

ಶೀಘ್ರದಲ್ಲೇ ತಿಲಕ್ 3 ಫಾರ್ಮೆಟ್ ಆಡುತ್ತಾನೆ ಎಂದ ರೋಹಿತ್

"ಆತ (ತಿಲಕ್ ವರ್ಮಾ) ಅದ್ಭುತ, ಮೊದಲ ವರ್ಷ ಆಡುತ್ತಿದ್ದರು ಸಹ ಅಂತಹ ಶಾಂತ ತಲೆಯನ್ನು ಹೊಂದುವುದು ಎಂದಿಗೂ ಸುಲಭವಲ್ಲ. ಅವರು ಶೀಘ್ರದಲ್ಲೇ ಭಾರತಕ್ಕೆ ಎಲ್ಲಾ ಮಾದರಿಯ ಆಟಗಾರರಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ, "ಎಂದು ರೋಹಿತ್ ಪಂದ್ಯದ ನಂತರದ ಸುದ್ದಿಗೋಷ್ಠಿ ಸಮಾರಂಭದಲ್ಲಿ ಹೇಳಿದರು.

'' ಆತ ಟೆಕ್ನಿಕ್ ಮತ್ತು ಟೆಂಪರ್‌ಮೆಂಟ್ ಹೊಂದಿದ್ದಾರೆ. ಆತ ಬಹಳಷ್ಟು ವಿಷಯಗಳಲ್ಲಿ ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ, ಜೊತೆಗೆ ರನ್‌ಗಳಿಸುವ ಹಸಿವು ಕೂಡ ಇದೆ. ಅವರು ಸರಿಯಾದ ಹಾದಿಯಲ್ಲಿದ್ದಾರೆ, "ಎಂದು ರೋಹಿತ್ ಶರ್ಮ ತಿಲಕ್ ವರ್ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2022: ಕೆಕೆಆರ್‌ಗೆ ದೊಡ್ಡ ಹೊಡೆತ, ಬೌಲರ್ ಪ್ಯಾಟ್ ಕಮಿನ್ಸ್‌ ಟೂರ್ನಿಯಿಂದ ಔಟ್

ತಿಲಕ್ ವರ್ಮಾ ಅದ್ಭುತ ಆಟವಾಡುತ್ತಿದ್ದಾನೆ ಎಂದು ರೀಮಾ ಮಲ್ಹೋತ್ರಾ

ಭಾರತದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ್ತಿ ರೀಮಾ ಮಲ್ಹೋತ್ರಾ, ರೋಹಿತ್ ಶರ್ಮಾ ನಾಯಕತ್ವ ಹಾಗೂ ತಿಲಕ್ ವರ್ಮಾ ಆಟದ ಕುರಿತು ಹೊಗಳಿದಿದ್ದಾರೆ.

''ತಿಲಕ್ ವರ್ಮಾ ಅವರ ಸಾಮರ್ಥ್ಯವನ್ನು ಪ್ರಯೋಗಿಸುವಲ್ಲಿ ರೋಹಿತ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ತಿಲಕ್ ವರ್ಮಾ ಅವರು ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ ಮತ್ತು ಈ ಯುವ ಚಾಂಪಿಯನ್ ಖಂಡಿತವಾಗಿಯೂ ನಮ್ಮ ದೇಶದ ಹೆಮ್ಮೆಗೆ ಕಾರಣನಾಗುತ್ತಾನೆ. ಅಭಿನಂದನೆಗಳು MI'' ಎಂದು ಸಾಮಾಜಿಕ ಜಾಲತಾಣ 'ಕೂ' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂಬೈ ದಾಳಿಗೆ ತತ್ತರಿಸಿ ಹೋದ ಚೆನ್ನೈ ಸೂಪರ್ ಕಿಂಗ್ಸ್‌

ಮುಂಬೈ ದಾಳಿಗೆ ತತ್ತರಿಸಿ ಹೋದ ಚೆನ್ನೈ ಸೂಪರ್ ಕಿಂಗ್ಸ್‌

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 59ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ತತ್ತರಿಸಿ ಹೋಯಿತು. ಪವರ್‌ ಪ್ಲೇ ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೊದಲ ಆರು ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐದು ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿತು. ಮುಂಬೈ ಇಂಡಿಯನ್ಸ್‌ನ ಬೌಲರ್ ಡೇನಿಯಲ್ ಸ್ಯಾಮ್ಸ್‌ ಮೊದಲ ಓವರ್‌ನಲ್ಲಿಯೇ ಸಿಎಸ್‌ಕೆ ಎರಡು ವಿಕೆಟ್ ಕಳೆದುಕೊಂಡಿತು.

ರುತುರಾಜ್ ಗಾಯಕ್ವಾಡ್ 7, ಡೆವೊನ್ ಕಾನ್ವೆ 0, ಮೊಯಿನ್‌ ಅಲಿ 0, ರಾಬಿನ್ ಉತ್ತಪ್ಪ 1, ಅಂಬಟಿ ರಾಯುಡು 10, ಶಿವಂ ದುಬೆ 10 ರನ್‌ಗಳಿಸಿ ಔಟಾದರು. ಕೊನೆಯಲ್ಲಿ ಧೋನಿ ಅಜೇಯ 36, ಬ್ರಾವೊ 12 ರನ್‌ಗಳಿಸಿ ಔಟಾದರು. 16 ಓವರ್‌ಗಳಲ್ಲಿ ಸಿಎಸ್‌ಕೆ 97 ರನ್‌ಗೆ ಸರ್ವಪತನಗೊಂಡಿತು.

98 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ 18, ತಿಲಕ್ ವರ್ಮಾ ಅಜೇಯ 34, ಹೃತಿಕ್ 18, ಟಿಮ್ ಡೇವಿಡ್ ಅಜೇಯ 16 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.

Story first published: Friday, May 13, 2022, 18:31 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X