ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಭಾರತದಲ್ಲೇ ನಡೆಯಲಿದೆ ಐಪಿಎಲ್‌: ಪ್ರೇಕ್ಷಕರಿಗಿಲ್ಲ ಅವಕಾಶ!

IPL 2022 In india

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಸೀಸನ್‌ ಭಾರತದಲ್ಲೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಎಎನ್‌ಐಗೆ ದೃಢಪಡಿಸಿವೆ.

ಮೂಲಗಳ ಪ್ರಕಾರ ಕೋವಿಡ್-19 ಕಾರಣಗಳಿಂದಾಗಿ ದೇಶದಲ್ಲೇ ಐಪಿಎಲ್ ಟೂರ್ನಿ ನಡೆಸಲು ಸಜ್ಜಾಗಿದ್ದು, ಯಾವುದೇ ಪ್ರೇಕ್ಷಕರಿಗೆ ನೋಡಲು ಅವಕಾಶವಿರುವುದಿಲ್ಲ ಎನ್ನಲಾಗಿದೆ.

'' ಐಪಿಎಲ್ 2022ರ ಸೀಸನ್ ಭಾರತದಲ್ಲೇ ನಡೆಯಲಿದ್ದು ಯಾವುದೇ ಪ್ರೇಕ್ಷಕರು ಭಾಗವಹಿಸುವುದಿಲ್ಲ. ಐಪಿಎಲ್ 2022ರ ಪಂದ್ಯಗಳು ವಾಂಖೆಡೆ ಸ್ಟೇಡಿಯಂ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಬೇಕಾದಲ್ಲಿ ಪುಣೆ ಕಡೆಗೂ ನಾವು ಗಮನ ಹರಿಸಬಹುದು'' ಎಂದು ಮೂಲಗಳು ತಿಳಿಸಿವೆ.

ಪೈಸಾ ವಸೂಲ್: ಕಡಿಮೆ ಮೊತ್ತ ಪಡೆದ್ರೂ, ಸಖತ್ ಫರ್ಪಾಮೆನ್ಸ್ ನೀಡಿದ IPL ಪ್ಲೇಯರ್ಸ್ಪೈಸಾ ವಸೂಲ್: ಕಡಿಮೆ ಮೊತ್ತ ಪಡೆದ್ರೂ, ಸಖತ್ ಫರ್ಪಾಮೆನ್ಸ್ ನೀಡಿದ IPL ಪ್ಲೇಯರ್ಸ್

ಈಗಾಗಲೇ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಆಟಗಾರರ ಹೆಸರು ನೋಂದಣಿಗೆ ಜನವರಿ 20ರಂದೇ ಮುಕ್ತಾಯಗೊಂಡಿದ್ದು, 1214 ಆಟಗಾರರು ( 896 ಭಾರತೀಯರು ಮತ್ತು 318 ವಿದೇಶಿ ಆಟಗಾರರು) ಐಪಿಎಲ್ 2022ರ ಆಟಗಾರರ ಹರಾಜಿಗೆ ಸಹಿ ಮಾಡಿದ್ದಾರೆ.

ಫೆಬ್ರವರಿ 12,13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳು ಬಿಡ್ ಮಾಡಲಿದ್ದು, 270 ಕ್ಯಾಪ್ಡ್‌, 903 ಅನ್‌ಕ್ಯಾಪ್ಡ್‌ ಮತ್ತು 41 ಅಸೋಸಿಯೇಟ್ ಆಟಗಾರರಿಗೆ ಬಿಡ್ ಮಾಡಲಿವೆ.

ಫ್ರಾಂಚೈಸಿಗಳ ಪರ್ಸ್‌ ಮೌಲ್ಯ ಎಷ್ಟಿದೆ?

ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನ ರೀಟೈನ್/ಖರೀದಿ ಮಾಡಿಕೊಂಡಿದೆ ಮತ್ತು ಪರ್ಸ್‌ ಮೌಲ್ಯ ಎಷ್ಟು ಉಳಿದಿದೆ ಎಂಬುದನ್ನ ಈ ಕೆಳಗೆ ನೋಡಬಹುದು

ಸಿಎಸ್‌ಕೆ : 4 ಆಟಗಾರರು (48 ಕೋಟಿ ರೂಪಾಯಿ)
ಮುಂಬೈ ಇಂಡಿಯನ್ಸ್ : 4 ಆಟಗಾರರು (48 ಕೋಟಿ ರೂಪಾಯಿ)
ಡೆಲ್ಲಿ ಕ್ಯಾಪಿಟಲ್ಸ್ : 4 ಆಟಗಾರರು (47.5 ಕೋಟಿ ರೂಪಾಯಿ)
ಕೆಕೆಆರ್ : 4 ಆಟಗಾರರು (48 ಕೋಟಿ ರೂಪಾಯಿ)
ಆರ್‌ಸಿಬಿ : 3 ಆಟಗಾರರು (57 ಕೋಟಿ ರೂಪಾಯಿ)
ಆರ್‌ಆರ್‌ : 3 ಆಟಗಾರರು (62 ಕೋಟಿ ರೂಪಾಯಿ)
ಎಸ್‌ಆರ್‌ಎಚ್‌ : 3 ಆಟಗಾರರು (68 ಕೋಟಿ ರೂಪಾಯಿ)
ಪಿಬಿಕೆಎಸ್‌ : 3 ಆಟಗಾರರು (72 ಕೋಟಿ ರೂಪಾಯಿ)
ಲಕ್ನೋ : 3 ಆಟಗಾರರು (59.8 ಕೋಟಿ ರೂಪಾಯಿ)
ಅಹಮದಾಬಾದ್ : 3 ಆಟಗಾರರು (52 ಕೋಟಿ ರೂಪಾಯಿ)

Story first published: Saturday, January 22, 2022, 18:05 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X