ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LSG and PBKS: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?

IPL 2022: Today match between LSG and PBKS: Both teams eye on victory

ಐಪಿಎಲ್‌ನಲ್ಲಿ ಇಂದು ಗೆಳೆಯರ ನಡುವೆ ಕಾದಾಟ ನಡೆಯಲಿದೆ. ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ತಂಡಗಳನ್ನು ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದು ಆಪ್ತ ಗೆಳೆಯರ ನಡುವಿನ ಸೆಣೆಸಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕೆಎಲ್ ರಾಹುಲ್ ಕಳೆದ ಆವೃತ್ತಿವರೆಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದರು.ಈ ಬಾರಿಯ ಆವೃತ್ತಿಗೆ ಲಕ್ನೋ ತಂಡವನ್ನು ಸೇರಿಕೊಂಡಿರುವ ಅವರು ಈ ತಂಡದ ನಾಯಕತ್ವದ ಜವಾಬ್ಧಾರಿ ಹೊತ್ತಿದ್ದಾರೆ. ಇತ್ತ ಪಂಜಾಬ್ ತಂಡದ ನಾಯಕತ್ವದ ಹೊಣೆಗಾರಿಗೆ ಮಯಾಂಕ್ ಅಗರ್ವಾಲ್ ಹೆಗಲೇರಿದೆ. ಎರಡು ತಂಗಳಿಗೆ ಕೂಡ ಈ ಪಂದ್ಯದ ಗೆಲುವು ಮಹತ್ವದ್ದಾಗಿದ್ದು ಮುಂದಿನ ಹಂತಕ್ಕೇರಲು ಭಾರೀ ಪೈಪೋಟಿ ನಡೆಸುತ್ತಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿದ್ದು ಚೊಚ್ಚಲ ಆವರತ್ತಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಗಮನಸೆಳೆದಿದೆ. ಬಲಿಷ್ಟ ಆಟಗಾರರನ್ನು ಹಿಂದಿರುವ ಕೆಎಲ್ ರಾಹುಲ್ ಪಡೆ ಉತ್ತಮ ಪ್ರದರ್ಶನ ನೀಡುತ್ತಿದ್ದು ಆಡಿರುವ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿದ್ದು 3 ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಆಡಿರುವ 8 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 4 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದೆ. ಹೀಗಾಗಿ ಮುಂದಿನ ಪ್ರತಿಯೊಂದು ಪಂದ್ಯದ ಫಲಿತಾಂಶ ಕುಡ ಬಹಳ ಮುಖ್ಯವಾಗುತ್ತದೆ.

ಲಕ್ನೋ ಸೂಪ್ ಜೈಂಟ್ಸ್ ತಂಡದ ಪರವಾಗಿ ನಾಯಕ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕೆಎಲ್ ಈ ಬಾರಿಯ ಆವೃತ್ತಿಯಲ್ಲಿ ಎರಡು ಭರ್ಜರಿ ಶತಕ ಸಿಡಿಸಿದ್ದಾರೆ. ಈ ಎರಡು ಶತಕಗಳು ಕುಡ ಮುಂಬೈ ಇಂಡಿಯನ್ಸ್ ವಿರುದ್ಧಧ ಪಂದ್ಯದಲ್ಲಿಯೇ ಬಂದಿರುವುದು ಕುತೂಹಲಕಾರಿ ಅಂಶ. ಈ ಅದ್ಭುತ ಫಾರ್ಮ್‌ಅನ್ನು ತನ್ನ ಹಿಂದಿನ ತಂಡದ ವಿರುದ್ಧವೂ ಕೆಎಲ್ ರಾಹುಲ್ ಮುಂದುವರಿಸಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

ಆದರೆ ಪಂಜಾಬ್ ಕಿಂಗ್ಸ್ ಪರವಾಗಿ ನಾಯಕ ಮಯಾಂಕ್ ಅಗರ್ವಾಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟನ್, ಭಾನುಕಾ ರಾಜಪಕ್ಷ ಅವರಂತಾ ಆಟಗಾರರು ಸ್ಪೋಟಕ ಪ್ರದರ್ಶನ ನಿಡುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಇಂಡಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಡೆಯುವುದು ಸ್ಪಷ್ಟವಾಗಿದೆ.

ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಒಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ಅಥರ್ವ ಟೈಡೆ, ವೈಭವ್ ಅರೋರಾ, ಭಾನುಕಾ ರಾಜಪಕ್ಸೆ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ಜಿತೇಶ್ ಶರ್ಮಾ, ಬೆನ್ನಿ ಹೋವೆಲ್, ನಾಥನ್ ಎಲ್ಲಿಸ್

Delhi Captain ಸರಣಿ ಮದ್ಯದಲ್ಲಿ ಜೆರ್ಸಿ ಬಣ್ಣ ಬದಲಿಸಿದರು | Oneindia Kannada

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಎವಿನ್ ಲೂಯಿಸ್, ಆಂಡ್ರ್ಯೂ ಟೈ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಮನನ್ ವೋಹ್ರಾ, ಕೈಲ್ ಮೇಯರ್ಸ್, ಅಂಕಿತ್ ರಾಜ್‌ಪೂತ್, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಮಯಾಂಕ್ ಯಾದವ್

Story first published: Friday, April 29, 2022, 10:30 [IST]
Other articles published on Apr 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X