ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ತಂಡಗಳ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಔಟ್; ಆರ್‌ಸಿಬಿ ಪರ ಯಾರು?

IPL 2022: Top scorers of each team in the tournament in the league stage

ಕಳೆದ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶುರುವಾಗಿದ್ದ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯ ಲೀಗ್ ಹಂತಕ್ಕೆ ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಮೂಲಕ ತೆರೆ ಬಿದ್ದಿದೆ. ಇನ್ನು ಈ ಬಾರಿ ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆದಿದ್ದು, ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಯಶಸ್ವಿಯಾಗಿ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ.

ಗಂಡು ಮಗುವಿಗೆ ತಂದೆಯಾದ ಖುಷಿ ಹಂಚಿಕೊಂಡ ಕೇನ್ ವಿಲಿಯಮ್ಸನ್ಗಂಡು ಮಗುವಿಗೆ ತಂದೆಯಾದ ಖುಷಿ ಹಂಚಿಕೊಂಡ ಕೇನ್ ವಿಲಿಯಮ್ಸನ್

ಮೇ 24ರಿಂದ ಮೇ 29ರವರೆಗೆ ಪ್ಲೇಆಫ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಐದು ವರ್ಷಗಳ ನಂತರ ಹೊಸ ಚಾಂಪಿಯನ್ ಹೊರಹೊಮ್ಮಲಿದೆ. ಇನ್ನು ಈ ಬಾರಿಯ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದಿದ್ದು, ಇನ್ನಿಂಗ್ಸ್‌ವೊಂದರಲ್ಲಿ ಇನ್ನೂರಕ್ಕೂ ಹೆಚ್ಚು ರನ್ ದಾಖಲಾದ ಹಲವು ಪಂದ್ಯಗಳು ಜರುಗಿದವು. ಹೀಗಾಗಿ ಈ ಬಾರಿಯ ಆವೃತ್ತಿಯ ಲೀಗ್ ಹಂತದಲ್ಲಿಯೇ ಸಾವಿರಕ್ಕೂ ಹೆಚ್ಚು ಸಿಕ್ಸರ್ ಸಿಡಿದಿದ್ದು, ಆಟಗಾರರು ಹೊಡಿಬಡಿ ಆಟವನ್ನಾಡಿ ರನ್ ಮಳೆ ಸುರಿಸಿದ್ದಾರೆ. ವಿರಾಟ್ ಕೊಹ್ಲಿ ಈ ಬಾರಿ 7000 ರನ್‌ಗಳ ಗಡಿ ದಾಟಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೃಹತ್ ಮೈಲಿಗಲ್ಲನ್ನು ನಿರ್ಮಿಸಿದ್ದರೆ, ಇದೇ ವಿರಾಟ್ ಕೊಹ್ಲಿ 2016ರ ಟೂರ್ನಿಯಲ್ಲಿ ನಿರ್ಮಿಸಿದ್ದ ರನ್ ದಾಖಲೆಯನ್ನು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮುರಿಯಲಿದ್ದಾರೆ ಎಂಬ ಅಭಿಪ್ರಾಯ ಟೂರ್ನಿಯ ಆರಂಭದಲ್ಲಿತ್ತು.

GT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿGT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಈ ರೀತಿಯ ಅಭಿಪ್ರಾಯ ಹುಟ್ಟುವಂತೆಯೇ ಜೋಸ್ ಬಟ್ಲರ್ ಟೂರ್ನಿಯ ಆರಂಭದಲ್ಲಿ ಬ್ಯಾಟ್ ಕೂಡ ಬೀಸಿದ್ದರು. ಆದರೆ, ತದನಂತರದ ಪಂದ್ಯಗಳಲ್ಲಿ ಮಂಕಾದ ಬಟ್ಲರ್ ಕೊಹ್ಲಿಯ ಆ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ಬರುವುದು ಕೂಡ ಅನುಮಾನ ಮೂಡಿಸಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಪ್ರತಿ ತಂಡದ ಪರ ಅತಿಹೆಚ್ಚು ರನ್ ಕಲೆಹಾಕಿರುವ ಆಟಗಾರರು ಯಾರು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ..

ಅತಿಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿ

ಅತಿಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಪ್ರತೀ ತಂಡದ ಆಟಗಾರರ ಪಟ್ಟಿ ಇಲ್ಲಿದೆ..

ಹಾರ್ದಿಕ್ ಪಾಂಡ್ಯ - ಗುಜರಾತ್ ಟೈಟನ್ಸ್ - 413 ರನ್

ಜೋಸ್ ಬಟ್ಲರ್ - ರಾಜಸ್ಥಾನ್ ರಾಯಲ್ಸ್ - 629 ರನ್

ಕೆಎಲ್ ರಾಹುಲ್ - ಲಕ್ನೋ ಸೂಪರ್ ಜೈಂಟ್ಸ್ - 537 ರನ್

ಫಾಫ್ ಡು ಪ್ಲೆಸಿಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು - 443 ರನ್

ಡೇವಿಡ್ ವಾರ್ನರ್ -ಡೆಲ್ಲಿ ಕ್ಯಾಪಿಟಲ್ಸ್- 432 ರನ್

ಶಿಖರ್ ಧವನ್ - ಪಂಜಾಬ್ ಕಿಂಗ್ಸ್- 460 ರನ್

ಶ್ರೇಯಸ್ ಅಯ್ಯರ್ - ಕೋಲ್ಕತ್ತಾ ನೈಟ್ ರೈಡರ್ಸ್ - 401 ರನ್

ಅಭಿಷೇಕ್ ಶರ್ಮಾ - ಸನ್ ರೈಸರ್ಸ್ ಹೈದರಾಬಾದ್- 426 ರನ್

ರುತುರಾಜ್ ಗಾಯಕ್ವಾಡ್ - ಚೆನ್ನೈ ಸೂಪರ್ ಕಿಂಗ್ಸ್ - 368 ರನ್

ಇಶಾನ್ ಕಿಶನ್ - ಮುಂಬೈ ಇಂಡಿಯನ್ಸ್ - 418 ರನ್

ಈ ಬಾರಿ ಆರೆಂಜ್ ಕ್ಯಾಪ್ ಬಟ್ಲರ್‌ಗೆ ಖಚಿತ

ಈ ಬಾರಿ ಆರೆಂಜ್ ಕ್ಯಾಪ್ ಬಟ್ಲರ್‌ಗೆ ಖಚಿತ

ಹೀಗೆ ಉಳಿದ ತಂಡದ ಎಲ್ಲಾ ಆಟಗಾರರಿಗಿಂತ ಜೋಸ್ ಬಟ್ಲರ್ ಅತಿಹೆಚ್ಚು ( 629 ರನ್ ) ರನ್ ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್ ಪ್ರವೇಶಿಸಿರುವುದರಿಂದ ಬಟ್ಲರ್ ಮತ್ತಷ್ಟು ರನ್ ಗಳಿಸಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್‌ನ್ನು ತಮ್ಮ ಮುಡಿಗೇರಿಸಿಕೊಳ್ಳುವುದು ಖಚಿತ

Ab de Villiers ಮಾತಿಗೆ RCB ಅಭಿಮಾನಿಗಳು ಫುಲ್ ಖುಷ್ | #cricket #ipl2022 | Oneindia Kannada
ಆರ್‌ಸಿಬಿ ಪರ ನಾಯಕನದ್ದೇ ಅತಿಹೆಚ್ಚು ರನ್

ಆರ್‌ಸಿಬಿ ಪರ ನಾಯಕನದ್ದೇ ಅತಿಹೆಚ್ಚು ರನ್

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಈ ಬಾರಿಯ ಟೂರ್ನಿಯಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಅತ್ಯಧಿಕ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಲೀಗ್ ಹಂತ ಮುಕ್ತಾಯದ ಸಮಯಕ್ಕೆ ಫಾಫ್ ಡು ಪ್ಲೆಸಿಸ್ 443 ರನ್ ಕಲೆಹಾಕಿದ್ದಾರೆ.

Story first published: Monday, May 23, 2022, 16:54 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X