ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈ ಸೀಸನ್‌ನಲ್ಲಿ ನನ್ನ ಯಶಸ್ಸಿಗೆ ಡೇಲ್ ಸ್ಟೇನ್ ಕಾರಣ ಎಂದ ಉಮ್ರಾನ್ ಮಲ್ಲಿಕ್

Umran malik

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ವೇಗದ ಬೌಲಿಂಗ್ ಮೂಲಕ ಸದ್ದು ಮಾಡುತ್ತಿರುವ ಎಸ್‌ಆರ್‌ಎಚ್ ಬೌಲರ್ ಉಮ್ರಾನ್ ಮಲ್ಲಿಕ್ ತನ್ನ ಯಶಸ್ಸಿಗೆ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಕಾರಣ ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಉಮ್ರಾನ್ ಮಲ್ಲಿಕ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದರು. ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಮೂರು ಪ್ರಮುಖ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

IPL 2022: SRH ಬಯೋ-ಬಬಲ್ ತೊರೆದು ತವರಿಗೆ ತೆರಳಿದ ನಾಯಕ ಕೇನ್ ವಿಲಿಯಮ್ಸನ್IPL 2022: SRH ಬಯೋ-ಬಬಲ್ ತೊರೆದು ತವರಿಗೆ ತೆರಳಿದ ನಾಯಕ ಕೇನ್ ವಿಲಿಯಮ್ಸನ್

150kmph ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲ್ಲಿಕ್ ಶೀಘ್ರದಲ್ಲೇ ಟೀಂ ಇಂಡಿಯಾ ಪರ ಆಡಬೇಕು ಎಂದು ಅನೇಕ ಕ್ರಿಕೆಟ್ ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಸ್‌ಆರ್‌ಎಚ್‌ನ ಪೇಸರ್ ಈಗಾಗಲೇ 13 ಪಂದ್ಯಗಳಲ್ಲಿ ಐದು ವಿಕೆಟ್ ಗೊಂಚಲು ಸೇರಿದಂತೆ 21 ವಿಕೆಟ್ ಕಬಳಿಸಿದ್ದಾರೆ.

ಭುವನೇಶ್ವರ್ ಕುಮಾರ್ ಜೊತೆಗೆ ವೀಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಉಮ್ರಾನ್ ಮಲ್ಲಿಕ್ ಡೇಲ್ ಸ್ಟೇನ್‌ರ ಅಮೂಲ್ಯ ಸಲಹೆಗಳ ಕುರಿತು ಮಾತನಾಡಿದ್ದಾರೆ.

''ನಾನು ಮೂರು ಗಂಟೆಗಳ ಕಾಲ ನೆಟ್‌ ಪ್ರಾಕ್ಟೀಸ್ ಮಾಡುತ್ತಾ ಬೌಲಿಂಗ್ ಅಭ್ಯಾಸ ಮಾಡುತ್ತೇನೆ. ಡೇಲ್ ಸ್ಟೇನ್ ಮೂರು ಗಂಟೆಗಳ ಕಾಲ ನನ್ನ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ನೀಡುತ್ತಾರೆ'' ಎಂದು ಉಮ್ರಾನ್ ಹೇಳಿದ್ದಾರೆ.

ಇನ್ನು ತನ್ನ ವೇಗದ ಬೌಲಿಂಗ್ ಕುರಿತು ಮಾತನಾಡಿರುವ ಉಮ್ರಾನ್ ಮಲ್ಲಿಕ್ '' ನಾನು ಸ್ವಾಭಾವಿಕವಾಗಿ ಅಷ್ಟು ವೇಗವಾಗಿ ಬೌಲಿಂಗ್ ಮಾಡುತ್ತೇನೆ. ತನಗೆ ವೇಗವಾಗಿ ಬೌಲಿಂಗ್ ಮಾಡಬೇಕು ಅಂದೆನಿಸಿದಾಗಲೆಲ್ಲಾ ವೇಗದ ಎಸೆತವನ್ನು ಹಾಕುತ್ತೇನೆ'' ಎಂದಿದ್ದಾರೆ. '' ನಾನು ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆಡುವಾಗಲೇ ಅನೇಕರು ನನ್ನ ವೇಗಕ್ಕೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದೇ ಹಿಂದೆ ಸರಿದಿದ್ದು ಇದೆ'' ಎಂದು ಉಮ್ರಾನ್ ತನ್ನ ಬೌಲಿಂಗ್ ಶಕ್ತಿ ಕುರಿತಾಗಿ ಮಾತನಾಡಿದ್ದಾರೆ.

ಉಮ್ರಾನ್ ಮಲ್ಲಿಕ್ ಈ ಸೀಸನ್‌ನಲ್ಲಿ ಅತ್ಯಂತ ವೇಗದ ಎಸೆತ 157kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ಎರಡನೇ ಅತಿ ವೇಗದ ಎಸೆತವಾಗಿದೆ.

ಸನ್‌ರೈಸರ್ಸ್ ಹೈದ್ರಾಬಾದ್ ಪ್ರಸ್ತುತ ಆಡಿರುವ 13 ಪಂದ್ಯಗಳಲ್ಲಿ ಏಳು ಪಂದ್ಯ ಸೋತು ಆರು ಪಂದ್ಯಗಳನ್ನ ಗೆದ್ದಿದೆ. ಜೊತೆಗೆ ನೆಟ್‌ ರನ್‌ರೇಟ್ ಕೂಡ -0.230ನಷ್ಟು ಇದ್ದು, ಪ್ಲೇ ಆಫ್ ಆಸೆ ಜೀವಂತವಾಗಿಸಿಕೊಂಡಿದೆ. ಆದ್ರೆ ಪ್ಲೇ ಆಫ್ ತಲುಪಲು ಮುಂದಿನ ಪಂದ್ಯವನ್ನ ದೊಡ್ಡ ಮೊತ್ತದಲ್ಲಿ ಗೆಲ್ಲುವುದರ ಜೊತೆಗೆ ಇತರೆ ತಂಡಗಳ ಫಲಿತಾಂಶಕ್ಕೂ ಕಾಯಬೇಕಿದೆ.

Story first published: Wednesday, May 18, 2022, 15:39 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X