IPL 2022: ಸತತ 14 ಪಂದ್ಯಗಳಲ್ಲಿ ವೇಗದ ಬೌಲಿಂಗ್ ಮಾಡಿ ದಾಖಲೆ ಬರೆದ ಉಮ್ರಾನ್ ಮಲಿಕ್

Umran Malikಗೆ ಅವಕಾಶ ಸಿಕ್ಕಿದ್ದಕ್ಕೆ ಕಾಶ್ಮೀರದಲ್ಲಿ ಸಂಭ್ರಮ | OneIndia Kannada

ಐಪಿಎಲ್ 2022ರ 15ನೇ ಋತು ಮುಕ್ತಾಯದ ಹಂತಕ್ಕೆ ತಲುಪಿದೆ. 70 ಪಂದ್ಯಗಳ ಲೀಗ್ ಹಂತ ಮುಗಿದು, ಪ್ಲೇಆಫ್ ಪಂದ್ಯಗಳು ಮಂಗಳವಾರದಿಂದ (ಮೇ 24) ಆರಂಭವಾಗಲಿವೆ. ಕ್ವಾಲಿಫೈಯರ್ 1ರಲ್ಲಿ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ಮತ್ತು 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ.

ಇತ್ತ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಭಾನುವಾರ (ಮೇ 22) ಸತತ 14ನೇ ಬಾರಿಗೆ "ಪಂದ್ಯದ ವೇಗದ ಎಸೆತ' ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಎಸ್‌ಆರ್‌ಎಚ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2022ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ 153.5 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವೇಗಿ ಈ ಸಾಧನೆ ಮಾಡಿದರು.

ಒಟ್ಟು 14 ಲಕ್ಷ ರೂ. ಬಹುಮಾನ ಗೆದ್ದ ಮಾಲಿಕ್

ಒಟ್ಟು 14 ಲಕ್ಷ ರೂ. ಬಹುಮಾನ ಗೆದ್ದ ಮಾಲಿಕ್

ಗಮನಾರ್ಹವಾದ ಅಂಶವೆಂದರೆ IPL 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಡಿದ ಒಟ್ಟು 14 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ "ಪಂದ್ಯದ ವೇಗದ ಎಸೆತ' ಪ್ರಶಸ್ತಿಯನ್ನು ಗೆದ್ದರು. 22 ವರ್ಷ ವಯಸ್ಸಿನವರು ಒಟ್ಟು 14 ಲಕ್ಷ ರೂ.(ಪ್ರತಿ ಪಂದ್ಯಕ್ಕೆ 1 ಲಕ್ಷ ರೂ.) ನಗದು ಬಹುಮಾನವನ್ನು ಗೆದ್ದಿದ್ದಾರೆ. ಪಂದ್ಯಾವಳಿಯಲ್ಲಿ ಅವರ ವೇಗದ ಎಸೆತ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಂಟೆಗೆ 157 ಕಿ.ಮೀ ಎಸೆದಿದ್ದಾರೆ.

ಉಮ್ರಾನ್ ಮಲಿಕ್ 14 ಪಂದ್ಯಗಳಲ್ಲಿ 20.18 ಸರಾಸರಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತನ್ನ ಐಪಿಎಲ್ 2022 ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು. ಸನ್‌ರೈಸರ್ಸ್ ಹೈದರಾಬಾದ್‌ನ ಪ್ರತಿಯೊಂದು ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ ವೇಗದ ಎಸೆತದ ಪಟ್ಟಿ ಇಲ್ಲಿದೆ.

ಯಾವ ತಂಡದ ವಿರುದ್ಧ ಎಷ್ಟು ವೇಗದಲ್ಲಿ ಬೌಲಿಂಗ್

ಯಾವ ತಂಡದ ವಿರುದ್ಧ ಎಷ್ಟು ವೇಗದಲ್ಲಿ ಬೌಲಿಂಗ್

ರಾಜಸ್ಥಾನ ರಾಯಲ್ಸ್ - 150 kmph

ಲಕ್ನೋ ಸೂಪರ್ ಜೈಂಟ್ಸ್- 152.4 kmph

ಚೆನ್ನೈ ಸೂಪರ್ ಕಿಂಗ್ಸ್ - 153.1 kmph

ಗುಜರಾತ್ ಟೈಟನ್ಸ್- 153.3 kmph

ಕೋಲ್ಕತಾ ನೈಟ್ ರೈಡರ್ಸ್- 150.1 kmph

ಪಂಜಾಬ್ ಕಿಂಗ್ಸ್ - 152.6 kmph

ರಾಯಲ್ ಚಾಲೆಂಜರ್ಸ್ ಬೆಂಗಳೂರು- 151.1 kmph

ಗುಜರಾತ್ ಟೈಟನ್ಸ್- 152.9 kmph

ಚೆನ್ನೈ ಸೂಪರ್ ಕಿಂಗ್ಸ್ - 154 kmph

ದೆಹಲಿ ಕ್ಯಾಪಿಟಲ್ಸ್- 157 kmph

ರಾಯಲ್ ಚಾಲೆಂಜರ್ಸ್ ಬೆಂಗಳೂರು- 150.2 kmph

ಕೋಲ್ಕತಾ ನೈಟ್ ರೈಡರ್ಸ್- 152.2 kmph

ಮುಂಬೈ ಇಂಡಿಯನ್ಸ್- 154.8 kmph

ಪಂಜಾಬ್ ಕಿಂಗ್ಸ್ - 153.5 kmph

ಅಂತಾರಾಷ್ಟ್ರೀಯ ಟಿ20 ಸರಣಿಗೆ ಉಮ್ರಾನ್ ಮಲಿಕ್ ಆಯ್ಕೆ

ಅಂತಾರಾಷ್ಟ್ರೀಯ ಟಿ20 ಸರಣಿಗೆ ಉಮ್ರಾನ್ ಮಲಿಕ್ ಆಯ್ಕೆ

ಇದಲ್ಲದೆ, ಜೂನ್ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಅಂತಾರಾಷ್ಟ್ರೀಯ ಟಿ20 ಸರಣಿಗೆ ಉಮ್ರಾನ್ ಮಲಿಕ್ ಮೊದಲ ಟೀಮ್ ಇಂಡಿಯಾ ಕರೆಯನ್ನು ಪಡೆದರು.

ಕುತೂಹಲಕಾರಿ ಸಂಗತಿಯೆಂದರೆ ಉಮ್ರಾನ್ ಮಲಿಕ್ ಅವರು ಪರ್ವೇಜ್ ರಸೂಲ್ ನಂತರ ಭಾರತಕ್ಕಾಗಿ ಆಡುವ ಜಮ್ಮು ಮತ್ತು ಕಾಶ್ಮೀರದ ಎರಡನೇ ಕ್ರಿಕೆಟಿಗನಾಗಲಿದ್ದಾರೆ. ರಸೂಲ್ ಕಣಿವೆ ರಾಜ್ಯ ಕಾಶ್ಮೀರದಿಂದ ಬಂದವರಾಗಿದ್ದರೆ, ಉಮ್ರಾನ್ ಜಮ್ಮು ಹುಡುಗನಾಗಿದ್ದಾನೆ. ರಣಧೀರ್ ಸಿಂಗ್ ಮನ್ಹಾಸ್ ಅವರಿಂದ ತರಬೇತಿ ಪಡೆದಿದ್ದು ಮತ್ತು ಹಿರಿಯ ರಾಜ್ಯ ತಂಡದ ವೇಗಿ ರಾಮ್ ದಯಾಲ್ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ.

ಮಗನ ಸಾಧನೆಯ ಕುರಿತು ಭಾವನಾತ್ಮಕವಾದ ತಂದೆ

ಮಗನ ಸಾಧನೆಯ ಕುರಿತು ಭಾವನಾತ್ಮಕವಾದ ತಂದೆ

ಈ ಮಧ್ಯೆ, ಉಮ್ರಾನ್ ಮಲಿಕ್ ಅವರ ತಂದೆ ಅಬ್ದುಲ್ ರಶೀದ್ ಅವರು ತಮ್ಮ ಮಗ ದಕ್ಷಿಣ ಆಫ್ರಿಕಾ ಟಿ20ಗಾಗಿ ಭಾರತ ತಂಡಕ್ಕೆ ಆಯ್ಕೆಯಾದ ನಂತರ ಮಾಧ್ಯಮಗಳು ಜೊತೆ ಮಾತನಾಡುವಾಗ ಮಗನ ಸಾಧನೆಯ ಕುರಿತು ಭಾವನಾತ್ಮಕವಾಗಿದ್ದರು.

"ಜನರು ನನ್ನನ್ನು ಅಭಿನಂದಿಸಲು ಬರುತ್ತಿದ್ದರು. ನಾನು ಈಗ ಮನೆಗೆ ಹೋಗುತ್ತಿದ್ದೇನೆ ಮತ್ತು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಂತರ್ಜಾಲದಲ್ಲಿ ಸುದ್ದಿ ನೋಡಿದೆ. ರಾಷ್ಟ್ರ ಬಣ್ಣದ ಜೆರ್ಸಿ ಧರಿಸುವುದಕ್ಕಿಂತ ದೊಡ್ಡ ಸಾಧನೆ ಏನಿದೆ," ಎಂದು ಜಮ್ಮುವಿನ ಗುಜ್ಜರ್ ನಗರದ ನಿವಾಸಕ್ಕೆ ಧಾವಿಸುತ್ತ ಅಬ್ದುಲ್ ರಶೀದ್ ಅವರು ಫೋನ್ ಮೂಲಕ ಪಿಟಿಐಗೆ ತಿಳಿಸಿದರು.

For Quick Alerts
ALLOW NOTIFICATIONS
For Daily Alerts
Story first published: Monday, May 23, 2022, 23:44 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X