ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ಗೆ; ಡೆಲ್ಲಿ ಸೋಲಿಸಿ ಎಂದು ರೋಹಿತ್ ಪಡೆಗೆ ಮನವಿ ಇಟ್ಟ ಕೊಹ್ಲಿ!

IPL 2022: Virat Kohli and Faf Du Plessis cheers for MI ahead of their match against DC

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಸನಿಹಕ್ಕೆ ತಲುಪಿದ್ದು, ಗುರುವಾರ ( ಮೇ 19 ) ನಡೆದ ಮಹತ್ವದ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವನ್ನು ಸಾಧಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

GT vs RCB: ಅಬ್ಬರಿಸಿದ ಕಿಂಗ್ ಕೊಹ್ಲಿ, ಮ್ಯಾಕ್ಸಿ; ಟೇಬಲ್ ಟಾಪರ್ಸ್ ವಿರುದ್ಧ ಗೆದ್ದ ಆರ್‌ಸಿಬಿ ಪ್ಲೇಆಫ್ ಆಸೆ ಜೀವಂತGT vs RCB: ಅಬ್ಬರಿಸಿದ ಕಿಂಗ್ ಕೊಹ್ಲಿ, ಮ್ಯಾಕ್ಸಿ; ಟೇಬಲ್ ಟಾಪರ್ಸ್ ವಿರುದ್ಧ ಗೆದ್ದ ಆರ್‌ಸಿಬಿ ಪ್ಲೇಆಫ್ ಆಸೆ ಜೀವಂತ

ಹೌದು, ಈ ಪಂದ್ಯ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಸರಿಸಮನಾದ ಅಂಕಗಳನ್ನು ಹೊಂದಿದ್ದ ಕಾರಣ ಪ್ಲೇಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿತ್ತು. ಅದರಂತೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದ್ದು, ಇದೀಗ ತಂಡದ ಪ್ಲೇಆಫ್ ಭವಿಷ್ಯ ಶನಿವಾರ ( ಮೇ 21 ) ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ನಿಂತಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ 16 ಅಂಕಗಳನ್ನು ತಲುಪಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸರಿದೂಗಿಸಲಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ರನ್ ರೇಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಹೆಚ್ಚಿರುವ ಕಾರಣ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ನೇರವಾಗಿ ಪ್ಲೇಆಫ್ ತಲುಪಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬೀಳಲಿದೆ.

RR vs CSK: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಮೂವರು ಆಟಗಾರರಿವರುRR vs CSK: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಮೂವರು ಆಟಗಾರರಿವರು

ಹೀಗಾಗಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡುತ್ತಿದ್ದು, ರೋಹಿತ್ ಶರ್ಮಾ ಪಡೆ ಗೆಲ್ಲಲಿ ಎಂದು ಆಶಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿಕೊಂಡಿದ್ದು, ಮುಂಬೈ ಇಂಡಿಯನ್ಸ್ ಬೆಂಬಲಕ್ಕೆ ನಿಂತು ಮನವಿಯನ್ನು ಮಾಡಿದ್ದಾರೆ. ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಇಬ್ಬರಲ್ಲ 25 ಜನರ ಬೆಂಬಲ ನಿಮಗಿದೆ

ಇಬ್ಬರಲ್ಲ 25 ಜನರ ಬೆಂಬಲ ನಿಮಗಿದೆ

ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ನಾವು ನಮ್ಮ ಪ್ರಯತ್ನ ಮಾಡಿದ್ದೇವೆ, ಇನ್ನೆರಡು ದಿನ ಆರಾಮಾಗಿದ್ದು, ಶನಿವಾರ ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡಿ ಎಂದು ಕರೆ ನೀಡಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಕೊಹ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ತನ್ನ ಬೆಂಬಲ ಮಾತ್ರವಲ್ಲ ಇಡೀ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಬೆಂಬಲವಿದೆ ಎಂದಿದ್ದಾರೆ. ಇದೇ ವೇಳೆ ಪಕ್ಕದಲ್ಲೇ ಇದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ "ಮುಂಬೈ.. ಮುಂಬೈ..." ಎಂದು ಘೋಷಣೆ ಕೂಗುವುದರ ಮೂಲಕ ತಮ್ಮ ಬೆಂಬಲವನ್ನು ಹೊರಹಾಕಿದರು.

ನಾವು ಸ್ಟೇಡಿಯಮ್‌ಗೆ ಬಂದರೂ ಬರಬಹುದು

ನಾವು ಸ್ಟೇಡಿಯಮ್‌ಗೆ ಬಂದರೂ ಬರಬಹುದು

ಇದೇ ವೇಳೆ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ನಾವು ಸ್ಟೇಡಿಯಮ್‌ಗೆ ಬಂದರೂ ಬರಬಹುದು ಎಂದಿದ್ದಾರೆ. ಇನ್ನು ಈ ಪಂದ್ಯ ನಾಳೆ ( ಮೇ 21 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಜೆ 7.30ಕ್ಕೆ ಆರಂಭವಾಗಲಿದೆ.

ರೋಹಿತ್ ಪಡೆನ ಎದುರಿಸೊಕೆ ನಾವ್ ರೆಡಿ!! | OneIndia Kannada
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ ಕಮ್‌ಬ್ಯಾಕ್

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ ಕಮ್‌ಬ್ಯಾಕ್

ಇನ್ನು ಗುರುವಾರ ( ಮೇ 19 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ನೀಡಿದ್ದ 169 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 18.4 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 170 ರನ್ ಚಚ್ಚಿದ ಆರ್‌ಸಿಬಿ 8 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ 54 ಎಸೆತಗಳಲ್ಲಿ 73 ರನ್ ಬಾರಿಸಿದ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಿಂದ ಹೊರಬಂದಿದ್ದು, ತನ್ನ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Story first published: Friday, May 20, 2022, 17:44 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X