ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಫೈನಲ್‌ಗಳಲ್ಲಿ ಒಂದೇ ದಿನ ವಿರಾಟ್ ಕೊಹ್ಲಿ, ಬಟ್ಲರ್‌ಗೆ ನಿರಾಸೆ; ಏನಿದರ ಕಥೆ-ವ್ಯಥೆ!

IPL 2022: Virat Kohli And Jos Butler Missed Milestone In IPL Finals in Same Day

ಐಪಿಎಲ್ 2022ರ ಹದಿನೈದನೇ ಆವೃತ್ತಿಯ ತನ್ನ ಪದಾರ್ಪಣೆ ಟೂರ್ನಿಯಲ್ಲೇ ಚಾಂಪಿಯನ್ ತಂಡವಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಗುಜರಾತ್ ಟೈಟನ್ಸ್ ತವರಿನ ಅಂಗಳದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಐಪಿಎಲ್ ಪಂದ್ಯಾವಳಿಯ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಇನ್ನು ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮಂಡಿಯೂರಿದ ರಾಜಸ್ಥಾನ ರಾಯಲ್ಸ್ ಐಪಿಎಲ್ 2022ರ ರನ್ನರ್ ಅಪ್ ತಂಡವಾಗಿದೆ.

IPL 2022: ಟೂರ್ನಿಯಲ್ಲಿ 863 ರನ್ ಚಚ್ಚಿ ಅಬ್ಬರಿಸಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಒಟ್ಟು ಹಣವೆಷ್ಟು?IPL 2022: ಟೂರ್ನಿಯಲ್ಲಿ 863 ರನ್ ಚಚ್ಚಿ ಅಬ್ಬರಿಸಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಒಟ್ಟು ಹಣವೆಷ್ಟು?

ಐಪಿಎಲ್ 2022ರ 15ನೇ ಆವೃತ್ತಿ ಮುಕ್ತಾಯವಾಗಿದ್ದು, ಇದರೊಂದಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕೆಂಬ ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್‌ ಅವರ ಕನಸು ಕೂಡ ಕಮರಿದೆ. ಇಡೀ ಟೂರ್ನಿಯುದಕ್ಕೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಟ್ಲರ್, ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

45 ಸಿಕ್ಸರ್ ಹಾಗೂ 83 ಫೋರ್‌ಗಳು ಸಿಡಿದಿದ್ದವು

45 ಸಿಕ್ಸರ್ ಹಾಗೂ 83 ಫೋರ್‌ಗಳು ಸಿಡಿದಿದ್ದವು

ಜೋಸ್ ಬಟ್ಲರ್‌ ಆಡಿದ 17 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಬಂದಿದ್ದು ಬರೋಬ್ಬರಿ 863 ರನ್‌ಗಳು. ಇದು ಐಪಿಎಲ್ ಟೂರ್ನಿಯೊಂದರಲ್ಲಿ ದಾಖಲಾದ ಎರಡನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ಈ ವೇಳೆ 4 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಭರ್ಜರಿ ಇನಿಂಗ್ಸ್‌ನಲ್ಲಿ 45 ಸಿಕ್ಸರ್ ಹಾಗೂ 83 ಫೋರ್‌ಗಳು ಸಿಡಿದಿದ್ದವು. ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಈ ಹೊರತಾಗಿಯೂ ಐಪಿಎಲ್ ಟ್ರೋಫಿ ಕೈತಪ್ಪಿದೆ.

ಗಮನಾರ್ಹ ಅಂಶವೆಂದರೆ, ಇದೀಗ 863 ರನ್ ಬಾರಿಸಿರುವ ಜೋಸ್ ಬಟ್ಲರ್, ಐಪಿಎಲ್ ಸೀಸನ್‌ವೊಂದರಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. 2016ರಲ್ಲಿ ವಿರಾಟ್ ಕೊಹ್ಲಿ 973 ಬಾರಿಸಿ ದಾಖಲೆ ಬರೆದಿದ್ದು, ಈವರೆಗೂ ಈ ದಾಖಲೆಯನ್ನು ಯಾರೂ ಕೂಡ ಮುರಿಯುವುದಕ್ಕಾಗಿಲ್ಲ. ವಿಶೇಷವೆಂದರೆ ಅಂದು ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ವಿರಾಟ್ ಕೊಹ್ಲಿಗೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಹೈದರಾಬಾದ್ ವಿರುದ್ಧ ಆರ್‌ಸಿಬಿ 8 ರನ್‌ಗಳಿಂದ ಸೋಲು

ಹೈದರಾಬಾದ್ ವಿರುದ್ಧ ಆರ್‌ಸಿಬಿ 8 ರನ್‌ಗಳಿಂದ ಸೋಲು

2016ರ ಐಪಿಎಲ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ, ಆರೆಂಜ್ ಕ್ಯಾಪ್ ಜೊತೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 8 ರನ್‌ಗಳಿಂದ ಸೋತ ಪರಿಣಾಮ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಭಾಗ್ಯ ದೊರತಿರಲಿಲ್ಲ. ಇದೀಗ ಜೋಸ್ ಬಟ್ಲರ್ ಕೂಡ ಹಲವು ಪ್ರಶಸ್ತಿಗಳನ್ನು ಪಡೆದರೂ, ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಿಲ್ಲ.

ಇನ್ನೊಂದು ವಿಶೇಷವೆಂದರೆ ಕಾಕತಾಳೀಯವಾಗಿ ಇಬ್ಬರು ಆಟಗಾರರ ಇನಿಂಗ್ಸ್ ಸೋಲಿನೊಂದಿಗೆ ಅಂತ್ಯವಾಗಿದ್ದು ಮೇ 29ರಂದು. ಅಂದರೆ ಮೇ 29, 2016ರಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರು. ಈ ಬಾರಿಯೂ ಅದೇ ದಿನದಂದು ರಾಜಸ್ಥಾನ ಟೈಟನ್ಸ್ ಐಪಿಎಲ್ ಫೈನಲ್ ಸೋತಿದೆ. ಆ ಮೂಲಕ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ಇಬ್ಬರಿಗೂ ಅದೃಷ್ಟ ಕೈ ಹಿಡಿಯಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಿನಲ್ಲಿ ಒಂದೇ ದಿನಾಂಕದಂದೇ ನಡೆದ ಫೈನಲ್ ಪಂದ್ಯದಲ್ಲಿ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಇಬ್ಬರು ಆಟಗಾರರಿಗೆ ಚಾಂಪಿಯನ್ ಪಟ್ಟ ಒಲಿಯದಿರುವುದು ಕಾಕತಾಳೀಯ ಜೊತೆಗೆ ಅಚ್ಚರಿಯೂ ಹೌದು.

ಉತ್ತಪ್ಪ, ಗಾಯಕ್ವಾಡ್‌ಗೆ ಇದ್ದ ಅದೃಷ್ಟ ಕೊಹ್ಲಿ, ಬಟ್ಲರ್‌ಗಿಲ್ಲ

ಉತ್ತಪ್ಪ, ಗಾಯಕ್ವಾಡ್‌ಗೆ ಇದ್ದ ಅದೃಷ್ಟ ಕೊಹ್ಲಿ, ಬಟ್ಲರ್‌ಗಿಲ್ಲ

15ನೇ ಆವೃತ್ತಿ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗುಜರಾಥ್ ಟೈಟನ್ಸ್ ಎದುರು ಫೈನಲ್ ಪಂದ್ಯ ಸೋತ ರಾಜಸ್ಥಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ವಿಶೇಷ ಸಾಧನೆಯೊಂದರಿಂದ ವಂಚಿರಾಗಿದ್ದಾರೆ.

ಜೋಸ್ ಬಟ್ಲರ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಅದ್ಭುತ ಫಾರ್ಮ್‍ನಲ್ಲಿದ್ದರು. ಆಡಿದ 17 ಪಂದ್ಯಗಳಲ್ಲಿ 4 ಶತಕ 4 ಅರ್ಧಶತಕ ಸಿಡಿಸಿ ಬರೋಬ್ಬರಿ 863 ರನ್ ಚಚ್ಚಿ ಈ ಬಾರಿ ರಾಜಸ್ಥಾನ ತಂಡ ಫೈನಲ್‌ಗೆ ಎಂಟ್ರಿ ಕೊಡಲು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಫೈನಲ್‌ನಲ್ಲಿ ಒಂದು ಮಹತ್ವದ ಸಾಧನೆಯೊಂದು ಮರೀಚಿಕೆಯಾಗಿದೆ.

ಈ ಹಿಂದೆ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಚಾಂಪಿಯನ್ ಆದಾಗ ಆ ತಂಡದ ರಾಬಿನ್ ಉತ್ತಪ್ಪ 660 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು ಅಲ್ಲದೇ ಅವರ ತಂಡ ಚಾಂಪಿಯನ್ ಆಗಿತ್ತು.

ಫೈನಲ್‌ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪ್ತಿ

ಫೈನಲ್‌ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪ್ತಿ

ಆ ಬಳಿಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ 635 ರನ್ ಬಾರಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಈ ವೇಳೆ ಸಿಎಸ್‌ಕೆ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಜೋಸ್ ಬಟ್ಲರ್ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ ಅವರ ತಂಡ ಮಾತ್ರ ಫೈನಲ್‌ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪಿ ಪಡೆದಿದೆ.

ಅದೇ ರೀತಿ 2016ರ ಐಪಿಎಲ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ, ಆರೆಂಜ್ ಕ್ಯಾಪ್ ಜೊತೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರೂ, ಆರ್‌ಸಿಬಿ ಚಾಂಪಿಯನ್ ಆಗಲು ವಿಫಲವಾಗಿತ್ತು.

ಸದ್ಯ ಸಿಎಸ್‌ಕೆಯಲ್ಲಿರುವ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಅವರ ರೀತಿಯ ವಿಶೇಷ ಸಾಧನೆಯಿಂದ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ವಂಚಿರಾಗಿದ್ದಾರೆ.

Story first published: Monday, May 30, 2022, 20:25 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X