ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಒಂದೇ ಫ್ರಾಂಚೈಸಿ ಪರ 7000 ರನ್ ಗಳಿಸಿದ ಮೊದಲ ಆಟಗಾರ ವಿರಾಟ್ ಕೊಹ್ಲಿ

IPL 2022: Virat Kohli Becomes the First Player To Score 7000 Runs For Single Franchise

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗುರುವಾರ ಒಂದೇ ಐಪಿಎಲ್ ಫ್ರಾಂಚೈಸಿ ಪರ 7000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ 57ನೇ ರನ್ ಗಳಿಸಿದ ಕೂಡಲೇ ಇತಿಹಾಸ ನಿರ್ಮಿಸಿದ ಮೊದಲಿಗರಾದರು.

ವಿರಾಟ್ ಕೊಹ್ಲಿ ತಮ್ಮ ಫ್ರಾಂಚೈಸಿಗಾಗಿ ಐಪಿಎಲ್‌ನಲ್ಲಿ 6,600 ರನ್‌ಗಳನ್ನು ಹೊಂದಿದ್ದಾರೆ, ಆದರೆ ಅವರ ಉಳಿದ ರನ್‌ಗಳು ಈಗ ನಿಷ್ಕ್ರಿಯಗೊಂಡ ಚಾಂಪಿಯನ್ಸ್ ಲೀಗ್‌ನಲ್ಲಿ ಬಂದಿವೆ. ವಿರಾಟ್ ಕೊಹ್ಲಿ ಐಪಿಎಲ್ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಶಿಖರ್ ಧವನ್ (6,205), ರೋಹಿತ್ ಶರ್ಮಾ (5,877), ಡೇವಿಡ್ ವಾರ್ನರ್ (5,876), ಸುರೇಶ್ ರೈನಾ (5,528) ಮತ್ತು ಎಬಿ ಡಿವಿಲಿಯರ್ಸ್ (5,162) ನಂತರದ ಸ್ಥಾನದಲ್ಲಿದ್ದಾರೆ.

IPL 2022: Virat Kohli Becomes the First Player To Score 7000 Runs For Single Franchise

ಆರ್‌ಸಿಬಿ vs ಗುಜರಾತ್ ಟೈಟನ್ಸ್ ಪಂದ್ಯದ ಕುರಿತು ಮಾತನಾಡುವುದಾದರೆ, ವಿರಾಟ್ ಕೊಹ್ಲಿ (54 ಎಸೆತಗಳಲ್ಲಿ 73), ಫಾಫ್ ಡು ಪ್ಲೆಸಿಸ್ (38 ಎಸೆತಗಳಲ್ಲಿ 44) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (18 ಎಸೆತಗಳಲ್ಲಿ ಅಜೇಯ 40) ಅವರ ಮನಮೋಹಕ ಬ್ಯಾಟಿಂಗ್ ಸಹಾಯದಿಂದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸುಲಭವಾಗಿ ರನ್ ಚೇಸ್ ಮಾಡಿದರು.

ಗುರುವಾರ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ಪಾಯಿಂಟ್ಸ್ ಟೇಬಲ್‌ನ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕೊಂಡೊಯ್ದರು.

ಇದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಅವರ ಅಜೇಯ 62 ರನ್ ಸಹಾಯದಿಂದ ಗುಜರಾತ್ ಟೈಟನ್ಸ್ 5 ವಿಕೆಟ್‌ಗೆ 168 ರನ್ ಗಳಿಸಿದರು. ನಂತರ ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ, ವಿರಾಟ್ ಕೊಹ್ಲಿ ತಮ್ಮ ಹಳೆಯ ಫಾರ್ಮ್‌ ಪ್ರದರ್ಶಿಸಿ, ಫಾಫ್ ಡು ಪ್ಲೆಸಿಸ್ ಅವರೊಂದಿಗೆ 115 ರನ್ ಆರಂಭಿಕ ಜೊತೆಯಾಟ ವಾಡಿದರು.

IPL 2022: Virat Kohli Becomes the First Player To Score 7000 Runs For Single Franchise

73 ರನ್ ಗಳಿಸುವ ಮೂಲಕ ಪ್ರಸಕ್ತ ಪಂದ್ಯಾವಳಿಯಲ್ಲಿ ಅವರ ಅತ್ಯಧಿಕ ಸ್ಕೋರ್ ಅನ್ನು ಗಳಿಸಿ, ರನ್ ದಾಹ ತೀರಿಸಿಕೊಂಡರು. ಇವರಿಬ್ಬರು ಔಆಟದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇವರಿಗೆ ದಿನೇಶ್ ಕಾರ್ತಿಕ್ ಸಾಥ್ ನೀಡಿದರು. ಆರ್‌ಸಿಬಿ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ ಎಂಟು ವಿಕೆಟ್‌ಗಳ ಅಂತರದಿಂದ ವಿಜಯಶಾಲಿಯಾಯಿತು.

KL ರಾಹುಲ್ ವಿರುದ್ಧ ಸೋತಿದ್ದು ಸ್ವಲ್ಪವೂ ಬೇಸರ ಇಲ್ಲ ಅಂತಾ ಶ್ರೇಯಸ್ ಅಯ್ಯರ್ ಹೇಳಿದ್ಯಾಕೆ? | Oneindia Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಬೆಂಗಳೂರು ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಪ್ಲೇಆಫ್‌ಗೆ ಮುನ್ನಡೆಯಬೇಕೆಂದರೆ, ಶನಿವಾರ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲನುಭವಿಸಬೇಕಾಗಿದೆ.

Story first published: Friday, May 20, 2022, 9:33 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X