ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ವಿರಾಟ್ ಔಟಾಗುತ್ತಿದ್ದಾರೆ: ಫಾಫ್ ಡು ಪ್ಲೆಸಿಸ್

IPL 2022: Virat Kohli is getting dismissed in every possible manner said RCB skipper Faf du Plessis

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯವನ್ನು ಅನುಭವಿಸಿದ್ದಾರೆ. ಉತ್ತಮ ಆರಂಭವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಎಡವುವ ಮೂಲಕ ನಿರಾಸೆ ಅನುಭವಿಸಿದರು. ಪಂಜಾಬ್ ಕಿಂಗ್ಸ್ ತಂಡ ನಿಡಿದ 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರವಾಗಿ ಕೊಹ್ಲಿ 14 ಎಸೆತಗಗಳಲ್ಲಿ 20 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಕೊಹ್ಲಿ ಬ್ಯಾಟ್‌ನಿಂದ ಒಂದು ಭರ್ಜರಿ ಸಿಕ್ಸರ್ ಹಾಗೂ ಎರಡು ಬೌಂಡರಿಗಳು ಸಿಡಿದಿದ್ದವು.

ಸತತವಾಗಿ ವೈಫಲ್ಯವನ್ನು ಅನುಭವಿಸಿರುವ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ಇನ್ನಿಂಗ್ಸ್ ಕಟ್ಟಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅಭಿಮಾನಿಗಳ ಈ ನಿರೀಕ್ಷೆ ಮತ್ತೊಮ್ಮೆ ವಿಫಲವಾಯಿತು. ಈ ಬಗ್ಗೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾIPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

ಎಲ್ಲಾ ರೀತಿಯಲ್ಲಿಯೂ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ

ಎಲ್ಲಾ ರೀತಿಯಲ್ಲಿಯೂ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ರೀತಿಯ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ವಿಧಾನವನ್ನು ಅವರು ಕೂಡ ಲಘು ದಾಟಿಯಲ್ಲಿ ತೆಗೆದುಕೊಂಡಿದ್ದಾರೆ.ಈ ಬಾರಿಯ ಐಪಿಎಲ್ಲಿ ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ಅವರು ವಿಕೆಟ್ ಕಳೆದುಕೊಂಡಿದ್ದಾರೆ. ಈ ಆಟ ಇರುವುದೇ ಹೀಗೆ. ಕಠಿಣ ಪರಿಶ್ರಮ ಹಾಗೂ ಸಕಾರಾತ್ಮಕವಾಗಿರಬೇಕಷ್ಟೇ" ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್.

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ವಿರುದ್ಧ 54 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯದಲ್ಲಿಯೂ ಕನಿಷ್ಠ ಮೊತ್ತಕ್ಕೆ ಕೊಹ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಕೊಹ್ಲಿ ಆಡಿದ 13 ಪಂದ್ಯಗಳಲ್ಲಿ ಕೇವಲ ಒಂದು ಅರ್ಧ ಶತಕವನ್ನು ಮಾತ್ರವೇ ಗಳಿಸಿದ್ದಾರೆ.

ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಕೊಹ್ಲಿ

ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಕೊಹ್ಲಿ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಫಾಫ್ ಡು ಪ್ಲೆಸಿಸ್ ಜೊತೆಗೆ ಕಣಕ್ಕಿಳಿದ ವಿರಾಟ್ ಕೊಹ್ಲಿ 20 ರನ್‌ಗಳಿಸಿದ್ದ ವೇಳೆ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ. ಪಂಜಾಬ್ ವೇಗಿ ರಬಾಡಾ ಎಸೆದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಶಾರ್ಟ್ ಲೆಂತ್ ಆಗಿ ಎಸೆದ 2ನೇ ಎಸೆತವನ್ನು ವಿರಾಟ್ ಕೊಹ್ಲಿ ಲೆಗ್ ಸೈಡ್‌ನತ್ತ ಬಾರಿಸುವ ಪ್ರಯತ್ನದಲ್ಲಿ ಪಕ್ಕೆಲುಬು ಪ್ಯಾಡ್‌ಗೆ ಬಡಿದು ಮೇಲಕ್ಕೆ ಚಿಮ್ಮಿತ್ತು. ಇದನ್ನು ಶಾರ್ಟ್ ಫೈನ್‌ನಲ್ಲಿದ್ದ ರಾಹುಲ್ ಚಾಹರ್ ಕ್ಯಾಚ್ ಪಡೆದುಕೊಂಡರು. ಫೀಲ್ಡ್ ಅಂಪೈರ್ ಬ್ಯಾಟ್ ಬಡಿಯದ ಕಾರಣ ನಾಟೌಟ್ ಎಂದು ನೀಡಿದ್ದರೂ ಮೂರನೇ ಅಂಫೈರ್ ಪರಿಶೀಲಿಸಿದಾಗ ಚೆಂಡು ಕೈ ಗ್ಲೌಸ್‌ಗೆ ಸವರಿಕೊಂಡು ಹೋಗಿರುವುದು ಸ್ಪಷ್ಟವಾಗಿತ್ತು. ಕೊಹ್ಲಿ ಹೀಗೆ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು.

ಪಂಜಾಬ್ ಭರ್ಜರಿ ಬ್ಯಾಟಿಂಗ್

ಪಂಜಾಬ್ ಭರ್ಜರಿ ಬ್ಯಾಟಿಂಗ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗೆ ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ಅಮೋಘ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾಯಿತು. ಕೇವಲ 29 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 66 ರನ್ ಚಚ್ಚಿದರು. ಅದಾದ ಬಳಿಕ ಅಂತಿಮ ಹಂತದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಅಷ್ಟೇ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿದಾಟುವಂತೆ ಮಾಡಿದರು. ಲಿವಿಂಗ್‌ಸ್ಟೋನ್ 42 ಎಸೆತಗಳಲ್ಲಿ 70 ರನ್ ಬಾರಿಸಿದ್ದಾರೆ.

ವಿಫಲವಾದ ಆರ್‌ಸಿಬಿ

ವಿಫಲವಾದ ಆರ್‌ಸಿಬಿ

ಪಂಜಾಬ್ ಕಿಂಗ್ಸ್ ತಂಡ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡ ನಂತರ ಮಹಿಪಾಲ್ ಲೋಮ್ರೊರ್ ಕೂಡ ಔಟಾದರು. ನಂತರ ರಜತ್ ಪಾಟಿದಾರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ ಜೊತೆಯಾಟ ಉತ್ತಮವಾಗಿ ಬೆಳೆಯುತ್ತಿದೆ ಎನ್ನುವಾಗ ಪಾಟಿದಾರ್ ವಿಕೆಟ್ ಕಳೆದುಕೊಂಡರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕೂಡ ಔಟಾಗಿ ಹೊರನಡೆದರು. ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ವಿಫಲವಾದರು. ನಂತರದ ಆಟಗಾರರು ಪಂಜಾಬ್ ಬೌಲರ್‌ಗಳಿಗೆ ಸವಾಲಾಗಲಿಲ್ಲ. ಈ ಮೂಲಕ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಆರ್‌ಸಿಬಿ ಪ್ಲೇಯಿಂಗ್ ‍XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್

Story first published: Saturday, May 14, 2022, 13:18 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X