ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ: ವಾರ್ನಿಂಗ್ ಕೊಟ್ಟ ರವಿಶಾಸ್ತ್ರಿ

Virat kohli

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯಕ್ಕೆ ಕ್ರಿಕೆಟ್ ನಿಂದ ಬ್ರೇಕ್ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಎಚ್ಚರಿಸಿದ್ದಾರೆ.

ಐಪಿಎಲ್ 2022ರ 31ನೇ ಲೀಗ್ ಪಂದ್ಯದಲ್ಲಿ ನಿನ್ನೆ ಆರ್‌ಸಿಬಿ ಮತ್ತು ಲಕ್ನೋ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 18 ರನ್‌ಗಳ ಜಯ ಸಾಧಿಸಿತು. ಅಲ್ಲದೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಮುನ್ನಡೆದಿದೆ.

ಆದರೆ, ಇದು ಅಭಿಮಾನಿಗಳಿಗೆ ಸಂತಸ ತಂದಿಲ್ಲ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್. ವಿರಾಟ್ ಕೊಹ್ಲಿ 2017 ರ ನಂತರ ಮೊದಲ ಬಾರಿಗೆ ಗೋಲ್ಡನ್ ಡಕ್ ನಿಂದ ಔಟಾಗಿದ್ದಾರೆ. ಪಂದ್ಯದ ಮೊದಲ ಓವರ್ ನಲ್ಲೇ ಚಮೀರ ಬಿಳಿ ಗೆರೆಗೆ ಚೆಂಡನ್ನು ಚೆಂಡನ್ನ ಅನಗತ್ಯವಾಗಿ ಹೊಡೆಯಲು ಯತ್ನಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಕೆ.ಎಲ್ ರಾಹುಲ್ ಕಲ್ಯಾಣವಂತೆ! ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ರಾಹುಲ್-ಅಥಿಯಾ ಜೋಡಿ?ಕೆ.ಎಲ್ ರಾಹುಲ್ ಕಲ್ಯಾಣವಂತೆ! ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ರಾಹುಲ್-ಅಥಿಯಾ ಜೋಡಿ?

ಈ ಋತುವಿನಲ್ಲಿ ಕೊಹ್ಲಿ ಫಾರ್ಮ್ ತುಂಬಾ ಚಿಂತಾಜನಕವಾಗಿದೆ. ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಕೇವಲ 119 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 123.95. ಸ್ಟಾರ್ ಪ್ಲೇಯರ್ ಆಗಿ ಕಾಣುವ ಕೊಹ್ಲಿ ಯಾಕೆ ಈ ರೀತಿ ಆಟವಾಡ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ಕೊಹ್ಲಿಗೆ ಮೊದಲ ಸಮಸ್ಯೆ ತಲೆದೋರಿದ್ದು ನಾನು ಕೋಚ್ ಆಗಿದ್ದಾಗ. ಆಟಗಾರನಿಗೆ ಹೆಚ್ಚಿನ ನಿರೀಕ್ಷೆಗಳು ಮತ್ತು ಒತ್ತಡಗಳು ಇದ್ದಾಗ ಇದು ಸಂಭವಿಸುತ್ತದೆ. ಶತಕ ಬಾರಿಸಲಿಲ್ಲ, ಅತಿಯಾದ ನಿರೀಕ್ಷೆ, ಮದುವೆ ಹೀಗೆ ಹಲವು ಗೊಂದಲಗಳಿಂದ ವಿರಾಟ್ ಕೊಹ್ಲಿ ಫಾರ್ಮ್‌ ಕಳೆದುಕೊಂಡಿದ್ದಾರೆ.

ಹೀಗಾಗಿ ಅವರಿಗೆ ಸದ್ಯಕ್ಕೆ ಖಂಡಿತಾ ಬ್ರೇಕ್ ಬೇಕು. ಕೊಹ್ಲಿಗೆ ಇನ್ನೂ 6-7 ವರ್ಷಗಳ ಕ್ರಿಕೆಟ್ ಇದೆ. ಅದರ ಬಗ್ಗೆ ಯೋಚಿಸುವುದನ್ನು ತಪ್ಪಿಸಿಕೊಳ್ಳಬೇಡಿ. ಇನ್ನು 2 ತಿಂಗಳು ಅಥವಾ ಒಂದೂವರೆ ತಿಂಗಳಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಹೊರಗುಳಿಯಬೇಕು ಎಂದಿದ್ದಾರೆ.

Golden Duck Out ಆದ Virat Kohli ಹಿಂಗ್ಯಾಕೆ ಮಾಡಿದ್ರು? ನೆಟ್ಟಿಗರಿಂದ ಫುಲ್ ತರಾಟೆ | Oneindia Kannada

ಟಿ20 ವಿಶ್ವಕಪ್‌ಗೂ ಮುನ್ನ ಅವರು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಹಾಗಾಗಿ ಅದಕ್ಕೂ ಮುನ್ನ ಅಥವಾ ಪ್ರವಾಸದ ನಂತರ ವಿರಾಟ್‌ ವಿಶ್ರಾಂತಿ ಪಡೆಯಬೇಕು. ಇಲ್ಲದಿದ್ದರೆ ಕಷ್ಟ ಎಂದು ರವಿಶಾಸ್ತ್ರಿ ಎಚ್ಚರಿಸಿದ್ದಾರೆ.

Story first published: Thursday, April 21, 2022, 9:25 [IST]
Other articles published on Apr 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X