ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಲು ಸಾಲು ಕಳಪೆ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಐಪಿಎಲ್ ತ್ಯಜಿಸುತ್ತಾರಾ?; ವಿರಾಟ್ ಗುರು ಶಾಸ್ತ್ರಿ ಹೇಳಿದ್ದಿಷ್ಟು!

IPL 2022: Virat Kohli should pull out of IPL and need to take rest says Ravi Shastri

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕನಾಗಿದ್ದು, ಕಳೆದ ಹಲವು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಈ ಬಾರಿ ಓರ್ವ ಆಟಗಾರನಾಗಿ ಕಣಕ್ಕಿಳಿದಿದ್ದಾರೆ.

ಅತ್ತ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರಂಭದ ಪಂದ್ಯಗಳನ್ನು ಗೆದ್ದು ಉತ್ತಮ ಆರಂಭವನ್ನು ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರದ ಪಂದ್ಯಗಳ ಪೈಕಿ ಕೆಲವೊಂದಿಷ್ಟು ಪಂದ್ಯಗಳಲ್ಲಿ ಸೋಲುವುದರ ಮೂಲಕ ಪ್ಲೇ ಆಫ್ ಪ್ರವೇಶಿಸುವುದನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಇತ್ತ ನಾಯಕತ್ವದ ಹೊರೆ ಇಲ್ಲದೆ ಓರ್ವ ಆಟಗಾರನಾಗಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ 9 ಪಂದ್ಯಗಳನ್ನಾಡಿ 128 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.

16ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಒಂದರಲ್ಲಿ ಗಳಿಸಿರುವ ಗರಿಷ್ಠ ರನ್ 48 ಮಾತ್ರ. ಹೀಗೆ ಇದುವರೆಗೂ ಒಂದೇ ಒಂದು ಅರ್ಧ ಶತಕ ಬಾರಿಸುವಲ್ಲಿಯೂ ವಿಫಲರಾಗಿರುವ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ರನ್ ಗಳಿಸಲು ಪರದಾಡುತ್ತಿದ್ದು, ಇತ್ತೀಚಿನ ಪಂದ್ಯಗಳಲ್ಲಿ 2 ಬಾರಿ ಡಕ್ ಔಟ್ ಕೂಡ ಆಗಿದ್ದಾರೆ. ಹೀಗೆ ವಿಫಲರಾಗಿರುವ ವಿರಾಟ್ ಕೊಹ್ಲಿ ಅವರನ್ನು ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರನನ್ನಾಗಿ ಕೂಡಾ ಕಣಕ್ಕಿಳಿಸಲಾಯಿತು. ಆದರೂ ಸಹ ಯಶಸ್ಸು ಕಾಣದ ವಿರಾಟ್ ಕೊಹ್ಲಿ 9 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಮುಗ್ಗರಿಸಿರುವ ವಿರಾಟ್ ಕೊಹ್ಲಿ ಕುರಿತು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಮಾತನಾಡಿದ್ದು ಈ ಕೆಳಕಂಡಂತೆ ಸಲಹೆ ನೀಡಿದ್ದಾರೆ.

ಐಪಿಎಲ್ ಬಿಟ್ಟು ಹೊರ ನಡೆಯಬೇಕು

ಐಪಿಎಲ್ ಬಿಟ್ಟು ಹೊರ ನಡೆಯಬೇಕು

ಸಾಲು ಸಾಲು ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ ಎಂದಿರುವ ರವಿಶಾಸ್ತ್ರಿ ಕೊಹ್ಲಿ ಐಪಿಎಲ್ ಬಿಟ್ಟು ಹೊರ ನಡೆಯಬೇಕು ಎಂದಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯಲ್ಲಿಯೂ ನಾಯಕನಾಗಿ ಮುನ್ನಡೆಸಿದ್ದ ಕೊಹ್ಲಿ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ ಹಾಗೂ ಇದೀಗ ಆರಂಭವಾಗಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹೆಚ್ಚು ದಿನ ಆಡಬೇಕಿದೆ

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹೆಚ್ಚು ದಿನ ಆಡಬೇಕಿದೆ

ಇನ್ನೂ ಮುಂದುವರೆದು ಮಾತನಾಡಿರುವ ರವಿಶಾಸ್ತ್ರಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇನ್ನೂ 5-6 ವರ್ಷಗಳ ಕಾಲ ಆಡಬೇಕು ಎಂದರೆ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಿದೆ ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.

Rashid Khan ಹಾಗು Tewatia ಪಂದ್ಯದ ದಿಕ್ಕನ್ನೇ ಬದಲಿಸಿದರು | Oneindia Kannada
ಕೊಹ್ಲಿಗೆ ಮಾತ್ರವಲ್ಲ ಇತರರಿಗೂ ಇದೇ ಸಲಹೆ

ಕೊಹ್ಲಿಗೆ ಮಾತ್ರವಲ್ಲ ಇತರರಿಗೂ ಇದೇ ಸಲಹೆ

ಇನ್ನು ವಿರಾಟ್ ಕೊಹ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇನ್ನೂ ಹೆಚ್ಚು ದಿನಗಳ ಕಾಲ ಆಡಲು ಬಯಸುವ ಯಾವುದೇ ಆಟಗಾರನಿಗಾದರೂ ಸಹ ತಾನು ಇದೇ ಸಲಹೆ ನೀಡುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಸುಮಾರು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಆಡಬೇಕೆಂದರೆ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಿದೆ, ಯಾರೂ ಸಹ ವಿರಾಮ ತೆಗೆದುಕೊಳ್ಳಲು ಹಿಂಜರಿಯದೇ ತಮ್ಮ ಫ್ರಾಂಚೈಸಿ ಜತೆ ಮಾತನಾಡಬೇಕಿದೆ ಎಂದು ರವಿಶಾಸ್ತ್ರೀ ಸಲಹೆ ನೀಡಿದ್ದಾರೆ.

Story first published: Wednesday, April 27, 2022, 16:38 [IST]
Other articles published on Apr 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X