ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಶುರುವಿಗೂ ಮುನ್ನ ವಿಘ್ನ; ಭಾರತ, ಯುಎಇಯಲ್ಲೂ ಟೂರ್ನಿ ಅನುಮಾನ, ಮತ್ತೆಲ್ಲಿ?

IPL 2022: We are very happy and ready to host the tournament in Sri Lanka says Mohan De Silva

ಒಂದೆಡೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಈ ಬಾರಿ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಶುರುವಿಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐ

ಈ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುರಿತಾಗಿ ಕಳೆದ ವರ್ಷದಿಂದಲೇ ಚಟುವಟಿಕೆಗಳು ಆರಂಭವಾಗಿದ್ದು ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ. ಅದೂ ಅಲ್ಲದೆ ಈ ಬಾರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೌದು, ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯೇ 8 ತಂಡಗಳ ನಡುವಿನ ಸೆಣಸಾಟದ ಅಂತಿಮ ಟೂರ್ನಿಯಾಗಿದ್ದು ಈ ವರ್ಷದಿಂದ ಲಕ್ನೋ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಸೇರ್ಪಡೆಗೊಳ್ಳುತ್ತಿವೆ.

ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು!ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು!

ಹೀಗೆ 2 ನೂತನ ತಂಡಗಳ ಸೇರ್ಪಡೆಯಾಗುತ್ತಿರುವುದರಿಂದ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಹಾಗೂ ಆಟಗಾರರ ಹರಾಜು ಪ್ರಕ್ರಿಯೆಗಳು ಟೂರ್ನಿ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ನಡೆಯಲೇಬೇಕಾಗಿರುವ ಚಟುವಟಿಕೆಗಳಾಗಿದ್ದವು. ಅದರಂತೆ ಈಗಾಗಲೇ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ನಡೆದಿದ್ದು ಫೆಬ್ರವರಿ ತಿಂಗಳಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಹೀಗೆ ಟೂರ್ನಿ ಆರಂಭಕ್ಕೆ ಇನ್ನೂ ತಿಂಗಳುಗಳು ಬಾಕಿ ಇರುವಾಗಲೇ ಟೂರ್ನಿಗೆ ಸಂಬಂಧಪಟ್ಟ ಪ್ರಕ್ರಿಯೆಗಳು ನಡೆಯುತ್ತಿದ್ದು ಇದೀಗ ಕೊರೋನಾವೈರಸ್ ಸೋಂಕು ಕಳೆದ ವರ್ಷದಂತೆ ಈ ವರ್ಷವೂ ಸಹ ಟೂರ್ನಿಯ ಮೇಲೆ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸದ್ಯ ಭಾರತದಲ್ಲಿ ಕೊರೋನಾವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ಈ ವರ್ಷವೂ ಸಹ ಐಪಿಎಲ್ ಟೂರ್ನಿ ನಡೆಯುವುದು ಅನುಮಾನವಾಗಿದೆ. ಹಾಗೂ ಬಿಸಿಸಿಐ ಕಳೆದೆರಡು ಟೂರ್ನಿಗಳನ್ನು ಯುಎಇಯಲ್ಲಿ ಆಯೋಜಿಸಿದ್ದು ಈ ವರ್ಷವೂ ಸಹ ಯುಎಇಯಲ್ಲಿ ಟೂರ್ನಿಯನ್ನು ಆಯೋಜಿಸುವುದು ಬೇಡ ಎಂಬ ಆಲೋಚನೆಯಲ್ಲಿದ್ದು ಇತರೆ ಯಾವುದಾದರೂ ದೇಶದಲ್ಲಿ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆಗಳಿವೆ. ಹೀಗಾಗಿ ಯಾವ ದೇಶದಲ್ಲಿ ಟೂರ್ನಿಯನ್ನು ಬಿಸಿಸಿಐ ಆಯೋಜಿಸಲಿದೆ ಎಂಬ ಪ್ರಶ್ನೆ ಮೂಡಿದ್ದು ಸದ್ಯ ಈ ಕೆಳಕಂಡ ಆಯ್ಕೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ಐಪಿಎಲ್ ಟೂರ್ನಿ ಆತಿಥ್ಯ ವಹಿಸಲು ಶ್ರೀಲಂಕಾ ಸಿದ್ಧ

ಐಪಿಎಲ್ ಟೂರ್ನಿ ಆತಿಥ್ಯ ವಹಿಸಲು ಶ್ರೀಲಂಕಾ ಸಿದ್ಧ

ಸದ್ಯ ಭಾರತ ದೇಶದಲ್ಲಿ ಕೊರೊನಾ ಮತ್ತು ಒಮೈಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಬಿಸಿಸಿಐ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಲ್ಲಿ ನಡೆಸದೇ ಬೇರೆ ದೇಶಗಳಿಗೆ ಸ್ಥಳಾಂತರಿಸುವುದು ಖಚಿತ ಎನ್ನಬಹುದು. ಹೀಗಾಗಿ ಶ್ರೀಲಂಕಾ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆತಿಥ್ಯವನ್ನು ವಹಿಸಿಕೊಳ್ಳಲು ಮುಂದೆ ಬಂದಿದೆ. ಈ ಕುರಿತಾಗಿ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕಾರ್ಯಾಧ್ಯಕ್ಷ ಮೋಹನ್ ಡಿ ಸಿಲ್ವಾ "ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಇತರೆ ದೇಶಗಳಲ್ಲಿ ಆಯೋಜಿಸುವ ಕುರಿತಾದ ವರದಿಗಳನ್ನು ಓದಿದ್ದೇವೆ ಮತ್ತು ಶ್ರೀಲಂಕಾದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಸಂತಸ ವ್ಯಕ್ತಪಡಿಸುತ್ತೇವೆ. ಬಿಸಿಸಿಐ ಜೊತೆ ಈ ಕುರಿತಾಗಿ ಆದಷ್ಟು ಬೇಗ ಮಾತುಕತೆ ನಡೆಸುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಕೊರೊನಾದ ಕೆಟ್ಟ ಪರಿಸ್ಥಿತಿ ಇಲ್ಲ

ಶ್ರೀಲಂಕಾದಲ್ಲಿ ಕೊರೊನಾದ ಕೆಟ್ಟ ಪರಿಸ್ಥಿತಿ ಇಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕಾರ್ಯಾಧ್ಯಕ್ಷ ಮೋಹನ್ ಡಿ ಸಿಲ್ವಾ ಸದ್ಯ ಶ್ರೀಲಂಕಾ ದೇಶದಲ್ಲಿ ಕೊರೋನಾವೈರಸ್ ಕೆಟ್ಟ ಪರಿಸ್ಥಿತಿಯನ್ನು ನಿರ್ಮಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಶ್ರೀಲಂಕಾದಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಕೊರೊನಾ ಸೋಂಕಿನ ಭಯ ಇರುವುದಿಲ್ಲ ಎಂದು ಮೋಹನ್ ಡಿ ಸಿಲ್ವಾ ಭರವಸೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜನೆಯಾದರೂ ಆಗಬಹುದು

ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜನೆಯಾದರೂ ಆಗಬಹುದು

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಈಗಾಗಲೇ 3 ಟೆಸ್ಟ್ ಪಂದ್ಯಗಳನ್ನು ಯಶಸ್ವಿಯಾಗಿ ಆಡಿ ಮುಗಿಸಿವೆ. ದೇಶದಲ್ಲಿ ಕೊರೊನಾ ಸೋಂಕಿನ ಭಯವಿದ್ದರೂ ಸಹ ಟೂರ್ನಿಗೆ ತೊಂದರೆಯಾಗದ ರೀತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕ್ರಮವನ್ನು ಕೈಗೊಂಡಿದೆ. ಹೀಗಾಗಿ ಬಿಸಿಸಿಐ ದಕ್ಷಿಣ ಆಫ್ರಿಕಾದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸಿದರೆ ಯಾವುದೇ ಆಶ್ಚರ್ಯವಿಲ್ಲ. ಹಾಗೂ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಸುವ ಯೋಜನೆಯನ್ನು ಕೂಡ ಬಿಸಿಸಿಐ ಹೊಂದಿದೆ ಎಂಬುದನ್ನು ವರದಿಗಳು ತಿಳಿಸಿವೆ.

Story first published: Friday, January 14, 2022, 13:35 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X