ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಕಪಟ್ಟಿ ಸುಳ್ಳು ಹೇಳಲ್ಲ: ತಮ್ಮ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಸ್ಪ್ರೀತ್ ಬೂಮ್ರಾ

IPL 2022: We were not good enough Jasprit Bumrah disappointed after defeat against LSG

ಈ ಬಾರಿಯ ಐಪಿಎಲ್‌ನಲ್ಲಿ ಸತತ ಸೋಲು ಅನುಭವಿಸುತ್ತಿರುವ ಮುಂಬೈ ಇಂಡಿಯನ್ಸ್ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಶನಿವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುವ ಮೂಲಕ ಮುಂಬೈ ಇಂಡಿಯನ್ಸ್ ಆಡಿದ ಆರು ಪಂದ್ಯಗಳ ಪೈಕಿ ಆರರಲ್ಲಿಯೂ ಸೋಲು ಅನುಭವಿಸಿದೆ. ಈ ಮೂಲಕ ಐಪಿಎಲ್‌ನಲ್ಲಿ ಹಿಂದೆಯೂ ಕಾಣದ ಮುಖಭಂಗವನ್ನು ಅನುಭವಿಸಿದೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್. ಸತತ ಆರನೇ ಸೋಲು ಕಂಡ ಬಳಿಕ ಮಾತನಾಡಿರುವ ಎಂಐ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ತಂಡದ ಪ್ರದರ್ಶನದ ಬಗ್ಗೆ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪರಿಶ್ರಮವನ್ನು ಯಾರೂ ನೋಡಲು ಸಾಧ್ಯವಿಲ್ಲ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಜಸ್ಪ್ರೀತ್ ಬೂಮ್ರಾ ಸೋಲು ಹಾಗೂ ಗೆಲುವು ಆಟದ ಸಾಮಾನ್ಯ ಅಂಶ ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಹೊರಗಿನ ಯಾರೂ ಕೂಡ ತಂಡದ ಆಟಗಾರರು ಪಡುತ್ತಿರುವ ಪರಿಶ್ರಮವನ್ನು ನೋಡಲು ಸಾಧ್ಯವಿಲ್ಲ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

RCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿRCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿ

"ಬದುಕು ಇಲ್ಲಿಗೆ ಮುಗಿದಿಲ್ಲ. ಸೂರ್ಯ ಮತ್ತೆ ನಾಳೆ ಉದಯಿಸುತ್ತಾನೆ. ಇದು ಕ್ರಿಕೆಟ್ ಆಟದ ಒಂದು ಭಾಗ. ಇಲ್ಲಿ ಒಬ್ಬರು ಸೋಲಬೇಕು ಮತ್ತೊಬ್ಬರು ಗೆಲ್ಲಬೇಕು. ನಾವು ಬದುಕಿನಲ್ಲಿ ಎಲ್ಲವನ್ನೂ ಸೋತಿಲ್ಲವಲ್ಲ. ಇಲ್ಲಿ ಒಬ್ಬರು ಸೋಲಬೇಕು ಮತ್ತೊಬ್ಬರು ಗೆಲ್ಲಬೇಕು. ನಾವು ಕ್ರಿಕೆಟ್ ಪಂದ್ಯವನ್ನು ಮಾತ್ರ ಸೋತಿದ್ದೇವೆ. ಈ ಹುರುಪು ನಮ್ಮ ತಂಡದಲ್ಲಿದೆ. ನಾವು ಅಸಮಾಧಾನಗೊಂಡಷ್ಟು ಯಾರೂ ಬೇಸರಗೊಳ್ಳಲು ಸಾಧ್ಯವಿಲ್ಲ. ನಾವು ಪಡುತ್ತಿರುವ ಪರಿಶ್ರಮವನ್ನು ಹೊರಗಿನ ಯಾರೂ ಕುಡ ನೋಡಲು ಸಾಧ್ಯವಿಲ್ಲ" ಎಂದು ಜಸ್ಪ್ರೀತ್ ಬೂಮ್ರಾ ಪಂದ್ಯದ ಮುಕ್ತಾಯದ ಬಳಿಕ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದು ಮಾತನಾಡಿದ ಬೂಮ್ರಾ ತಂಡಕ್ಕೆ ಅದೃಷ್ಟ ಕೂಡ ಕೈಕೊಡುತ್ತಿದೆ ಎಂದಿದ್ದಾರೆ. "ಸಾಕಷ್ಟು ಪಂದ್ಯಗಳು ಆಡುವ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಸ್ವಲ್ಪ ಅದೃಷ್ಟ ಕೂಡ ಜೊತೆಗಿರಬೇಕಾಗುತ್ತದೆ. ಅದು ನಮಗೆ ಕೈಕೊಟ್ಟಿದೆ. ಆದರೆ ನಾನು ಚೆನ್ನಾಗಿ ಆಡುತ್ತಿಲ್ಲ ಎಂದು ಹೇಳಲು ಹಿಂಜರಿಯುತ್ತಿಲ್ಲ. ಯಾಕೆಂದರೆ ಅಂಕಪಟ್ಟಿ ಸುಳ್ಳು ಹೇಳುವುದಿಲ್ಲ. ಇನ್ನು ಉಳಿದುಕೊಂಡಿರುವ ಪಂದ್ಯದಲ್ಲಿ ನಾವು ನಮ್ಮ ಎಲ್ಲಾ ಪ್ರಯತ್ನವನ್ನು ಕೂಡ ನಡೆಸಲಿದ್ದೇವೆ. ತಂಡ ಉತ್ತಮ ಸ್ಥಿತಿಯಲ್ಲಿರಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಕುಡ ನಾವು ನಡೆಸಲಿದ್ದೇವೆ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.

RCB vs DC: ಅದು ನನ್ನ ಪ್ರಮುಖ ಗುರಿ: ಆಯ್ಕೆಗಾರರಿಗೆ ದೊಡ್ಡದಾಗಿ ಸಂದೇಶ ರವಾನಿಸಿದ ದಿನೇಶ್ ಕಾರ್ತಿಕ್RCB vs DC: ಅದು ನನ್ನ ಪ್ರಮುಖ ಗುರಿ: ಆಯ್ಕೆಗಾರರಿಗೆ ದೊಡ್ಡದಾಗಿ ಸಂದೇಶ ರವಾನಿಸಿದ ದಿನೇಶ್ ಕಾರ್ತಿಕ್

ಈ ಬಾರಿಯ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಆರು ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರೆಯದ ಏಕೈಕ ತಂಡವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಶೂನ್ಯ ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಪ್ಲೇಆಫ್ ಹಂತಕ್ಕೇರಬೇಕಾದರೆ ಇನ್ನು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಮುಂಬೈ ಇಂಡಿಯನ್ಸ್‌ಗೆ ಅವಕಾಶವಿದೆ. ಒಂದು ಸೋಲು ಅನುಭವಿಸಿದರೂ ಮುಂಬೈ ಫ್ಲೇಆಫ್ ಸ್ಪರ್ಧೆಯಿಂದ ಹೊರಕ್ಕೆ ಬೀಳಲಿದೆ.

ಮುಂಬೈ ಇಂಡಿಯನ್ಸ್ ಸ್ಕ್ವಾಡ್: ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ರಮಣ್‌ದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್, ಡೆವಾಲ್ಡ್ ಬ್ರೆವಿಸ್, ಬಾಸಿಲ್ ಥಂಪಿ, ಎಂ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮರ್ಕಂಡೆ, ತಿಲಕ್ ಮಾರ್ಕಂಡೆ, ಸಂಜಯ್ ಯಾದವ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್

Story first published: Sunday, April 17, 2022, 14:18 [IST]
Other articles published on Apr 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X