ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI ಆಡುವ 11ರ ಬಳಗದಲ್ಲಿ ಮಗನಿಗೆ ಅವಕಾಶ ಸಿಗದ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು?

IPL 2022: What Did Sachin Tendulkar Advice to His Son About Not Getting a Chance in MI playing 11?

ಮುಂಬೈ ಇಂಡಿಯನ್ಸ್ ತಂಡದ ಆಡುವ 11ರ ಬಳಗದಲ್ಲಿ ಆಯ್ಕೆಯಾಗುವ ಬಗ್ಗೆ ತನ್ನ ಮಗ ಅರ್ಜುನ್‌ಗೆ ನೀಡಿದ ಸಲಹೆಯನ್ನು ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಂಗಳವಾರ ಬಹಿರಂಗಪಡಿಸಿದ್ದಾರೆ.

ಐಪಿಎಲ್ 2022ರಲ್ಲಿ ಐದು ಬಾರಿಯ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್‌ಗೆ ಮಾರ್ಗದರ್ಶಕರಾಗಿದ್ದ ಸಚಿನ್ ತೆಂಡೂಲ್ಕರ್, ತನ್ನ ಮಗ ಅರ್ಜುನ್‌ಗೆ ಕೇವಲ ತಮ್ಮ ಆಟದ ಮೇಲೆ ಕೇಂದ್ರೀಕರಿಸುವಂತೆ ಸಲಹೆ ನೀಡಿದ್ದರು ಮತ್ತು ತಂಡದ ಆಯ್ಕೆ ಭಾಗದ ಬಗ್ಗೆ ಹೆಚ್ಚು ಯೋಚಿಸಬೇಡ ಎಂದು ತಿಳಿಸಿದ್ದರು.

ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿಸಿತ್ತು

ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿಸಿತ್ತು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜಿನ ವೇಗದ ವಿಭಾಗದ ಸಂದರ್ಭದಲ್ಲಿ ಎಡಗೈ ಮಧ್ಯಮ ವೇಗಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಐಪಿಎಲ್ 2022ರಲ್ಲಿ ಮುಂಬೈ ಆಡಿದ ಯಾವುದೇ ಪಂದ್ಯದಲ್ಲಿ ಅರ್ಜುನ್‌ಗೆ ಅವಕಾಶ ನೀಡಿರಲಿಲ್ಲ.

"ಅವನು (ಅರ್ಜುನ್) ತನ್ನ ಆಟದ ಮೇಲೆ ಕೇಂದ್ರೀಕರಿಸಬೇಕು ಮತ್ತು ಆಯ್ಕೆಯ ಭಾಗದ ಬಗ್ಗೆ ಯೋಚಿಸಬಾರದು. ನಾನು ತಂಡದ ಆಡುವ 11ರ ಬಳಗದ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ನಿರ್ಧಾರವನ್ನು ತಂಡದ ಮ್ಯಾನೆಜ್‌ಮೆಂಟ್‌ಗೆ ಮಾತ್ರ ಬಿಡುತ್ತೇನೆ," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಯುಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.

ಅತ್ಯಂತ ನಿರಾಶಾದಾಯಕ ಪ್ರಸಕ್ತ ಋತುವನ್ನು ಮುಗಿಸಿದ ಮುಂಬೈ

ಅತ್ಯಂತ ನಿರಾಶಾದಾಯಕ ಪ್ರಸಕ್ತ ಋತುವನ್ನು ಮುಗಿಸಿದ ಮುಂಬೈ

ಐಪಿಎಲ್ 2022ರ 15ನೇ ಋತುವಿನಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಅತ್ಯಂತ ನಿರಾಶಾದಾಯಕ ಪ್ರಸಕ್ತ ಋತುವನ್ನು ಮುಗಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡ ಎಂಟು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಅಭಿಯಾನ ಮುಗಿಸಿತು.

ಮುಂಬೈ ಇಂಡಿಯನ್ಸ್ ತಮ್ಮ ಅಭಿಯಾನದ ಕೊನೆಯ ಕೆಲವು ಪಂದ್ಯಗಳಲ್ಲಿ ಟಿಮ್ ಡೇವಿಡ್, ರಮಣದೀಪ್ ಸಿಂಗ್, ಸಂಜಯ್ ಯಾದವ್ ಮತ್ತು ಮಯಾಂಕ್ ಮಾರ್ಕಾಂಡೆಯಂತಹ ಆಟಗಾರರಿಗೆ ಅವಕಾಶಗಳನ್ನು ನೀಡಿತು. ಅದರಲ್ಲಿ ಯಶಸ್ವಿಯಾಗಿತ್ತು. ಆದರೆ ಪ್ಲೇಆಫ್ ತಲುಪುವ ಅವಕಾಶ ಕೈತಪ್ಪಿ ಹೋಗಿತ್ತು.

ಬೇರೆ ತಂಡಕ್ಕೆ ಮಾರಿಬಿಡಿ ಎಂದಿದ್ದ ಅಭಿಮಾನಿಗಳು

ಬೇರೆ ತಂಡಕ್ಕೆ ಮಾರಿಬಿಡಿ ಎಂದಿದ್ದ ಅಭಿಮಾನಿಗಳು

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಇಂದು ಕಣಕ್ಕಿಳಿಯಬಹುದು, ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಬಹುದು ಎಂದು ಕಾದು ಕುಳಿತಿದ್ದ ಸಚಿನ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಯಿತು. ಐಪಿಎಲ್ 2022ರ ಕೊನೆಯ ಲೀಗ್‌ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅರ್ಜುನ್‌ಗೆ ಅವಕಾಶ ನೀಡಿಲ್ಲ.

ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೀಸನ್‌ನಲ್ಲಿ ಒಂದೂ ಪಂದ್ಯ ಅವಕಾಶ ನೀಡದ ತಂಡದ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಆತನನ್ನು ಹೊಂದುವ ಯೋಗ್ಯತೆ ನಿಮಗಿಲ್ಲ, ಬೇರೆ ತಂಡಕ್ಕೆ ಮಾರಿಬಿಡಿ ಎಂದು ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.

ಪ್ಲೇಆಫ್ ಹೊಸ ರೂಲ್ಸ್ ನಿಂದ ಮಳೆ ಬಂದ್ರೆ RCB ಗೆ ಉಳಿಗಾಲವೇ ಇಲ್ಲ!ಯಾಕೆ? | OneIndia Kannada
ಟಿಮ್ ಡೇವಿಡ್ ಆಟವನ್ನು ಪ್ರಶಂಸಿಸಿದ ಸಚಿನ್ ತೆಂಡೂಲ್ಕರ್

ಟಿಮ್ ಡೇವಿಡ್ ಆಟವನ್ನು ಪ್ರಶಂಸಿಸಿದ ಸಚಿನ್ ತೆಂಡೂಲ್ಕರ್

ಇದೇ ವೇಳೆ ಮುಂಬೈ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಕುರಿತು ಮಾತನಾಡಿದ ಸಚಿನ್ ತೆಂಡೂಲ್ಕರ್, ""ಅವರು ಕೇವಲ ದೊಡ್ಡ ಹಿಟ್ಟರ್ ಅಲ್ಲ, ಅವರು ಕವರ್ ಏರಿಯಾದಿಂದ ಸ್ವೀಪರ್ ಏರಿಯಾದವರೆಗೆ ಮೈದಾನದ ಸುತ್ತಲೂ ಆಡುತ್ತಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ 18ನೇ ಓವರ್‌ನಲ್ಲಿ ಅವರು 3 ಎಸೆತಗಳಲ್ಲಿ 3 ಸಿಕ್ಸರ್‌ಗಳನ್ನು ಹೊಡೆದರು. ಇದು ಅವರ ಬ್ಯಾಟಿಂಗ್ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಅವನ ಸಾಮರ್ಥ್ಯದಲ್ಲಿ ವಿಶ್ವಾಸವಿದೆ. ಎಂದರು.

ಸಿಂಗಾಪುರ-ಆಸ್ಟ್ರೇಲಿಯನ್ ಟಿಮ್ ಡೇವಿಡ್ ಆಡಿದ ಎಂಟು ಪಂದ್ಯಗಳಲ್ಲಿ 186 ರನ್ ರನ್ ಮತ್ತು 37.20 ಸರಾಸರಿಯೊಂದಿಗೆ ಆಡಿದ್ದಾರೆ. ದೆಹಲಿಯ ಕ್ಯಾಪಿಟಲ್ಸ್ ವಿರುದ್ಧ 11 ಎಸೆತಗಳಲ್ಲಿ 34 ರನ್ ಗಳಿಸಿದ ಅವರು, ಈ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಲ್ಕನೇ ಜಯವನ್ನು ಒದಗಿಸಿತು.

Story first published: Wednesday, May 25, 2022, 10:06 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X