IPL 2022: ಒಂದು ಪಂದ್ಯಕ್ಕೆ ಅಂಪೈರ್ಸ್ ಸ್ಯಾಲರಿ ಎಷ್ಟು, ತಪ್ಪು ನಿರ್ಣಯಕ್ಕೆ ದಂಡ ವಿಧಿಸುವುದಿಲ್ವಾ?

ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಸೀಸನ್‌ನಲ್ಲಿ ಸಾಕಷ್ಟು ರೋಚಕ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣ ಬಡಿಸಿವೆ. ಇದರ ಜೊತೆಗೆ ಒಂದಷ್ಟು ವಿವಾದಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದ್ರಲ್ಲೂ ಕಳೆದ ಕೆಲವು ಪಂದ್ಯಗಳಲ್ಲಿ ಅಂಪೈರ್ ನೀಡಿದ ಕೆಲವು ತೀರ್ಪುಗಳ ಕುರಿತು ಐಪಿಎಲ್ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ.

ಮನೋರಂಜನ್ ಕಾ ಬಾಪ್ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ನಲ್ಲಿ ಹವಲು ಕೋಟಿ ಪಡೆದ ಆಟಗಾರರೇನು ಕಮ್ಮಿ ಇಲ್ಲ. ಆಟಗಾರರು ಫೇಲ್ಯೂರ್ ಆದ್ರೆ ಅಷ್ಟೊಂದು ಕೋಟಿ ನೀಡಿದ್ರೂ ಇಷ್ಟೇ ರನ್ ಅಥವಾ ವಿಕೆಟ್ ಪಡೆದಿದ್ದು ಎಂದು ಟೀಕೆಗೆ ಗುರಿಯಾಗುತ್ತಾರೆ. ಆದ್ರೆ ಅದೇ ರೀತಿಯಲ್ಲಿ ಲಕ್ಷಗಟ್ಟಲೆ ಸ್ಯಾಲರಿ ಎಣಿಸಿದ್ರೂ, ತಪ್ಪು ನಿರ್ಣಯ ನೀಡಿದ ಅಂಪೈರ್ ಕುರಿತು ಜನರು ಮರೆತು ಬಿಡ್ತಾರೆ. ಹೀಗಿರುವಾಗ ಅಂಪೈರ್ಸ್ ಕಿರಿಕ್ ಜೊತೆಗೆ ಅವರ ಸ್ಯಾಲರಿ ಎಷ್ಟಿದೆ ಎಂಬುದನ್ನ ಒಟ್ಟಾಗಿ ತಿಳಿಸುವ ಪ್ರಯತ್ನ ಈ ಕೆಳಗಿದೆ.

ರಿಷಭ್ ಪಂತ್ ನೋ ಬಾಲ್ ಕಿರಿಕ್

ರಿಷಭ್ ಪಂತ್ ನೋ ಬಾಲ್ ಕಿರಿಕ್

ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಲಟ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ನೋ ಬಾಲ್ ವಿವಾದ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿದೆ. ಅಂತಿಮ ಓವರ್‌ನಲ್ಲಿ ನೋ ಬಾಲ್ ನೀಡದಿರುವ ಅಂಪೈರ್ ನಿರ್ಧಾರಕ್ಕೆ ಗಂರ ಆದ ರಿಷಭ್ ಪಂತ್ ಕೋಚ್ ಪ್ರವೀಣ್ ಆಮ್ರೆರನ್ನು ಪ್ರತಿಭಟಿಸಲು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಗೆಲುವಿಗೆ ಕೊನೆ ಓವರ್​​​ನಲ್ಲಿ 36 ರನ್​ಗಳ ಅವಶ್ಯವಿತ್ತು. ಒಬೆದ್​ ಮೆಕಾಯ್​ ಎಸೆದ ಕೊನೆ ಓವರ್​​​​ನ 3 ಎಸೆತಗಳನ್ನು ರಾವ್​​ಮನ್​​ ಪೊವೆಲ್ ಸಿಕ್ಸರ್‍ಗೆ ಅಟ್ಟಿದ್ದರು. ಈ ಮೂಲಕ ಸೋಲುವ ಪಂದ್ಯದಲ್ಲಿ ದೆಹಲಿಗೆ ಗೆಲುವಿನ ಆಸೆಯನ್ನು ಹೆಚ್ಚಿಸಿದ್ದರು. ಆದರೆ ಮೆಕಾಯ್ ಅವರ 3ನೇ ಎಸೆತ ವಿವಾದಕ್ಕೆ ಕಾರಣವಾಯಿತು.

ವಿರಾಟ್ ಕೊಹ್ಲಿಯ ಎಲ್‌ಬಿಡಬ್ಲ್ಯೂ ವಿವಾದ

ವಿರಾಟ್ ಕೊಹ್ಲಿಯ ಎಲ್‌ಬಿಡಬ್ಲ್ಯೂ ವಿವಾದ

ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಮುಂಬೈ - ಆರ್‌ಸಿಬಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಮೀಪಿಸುತ್ತಿದ್ದಂತೆ ಎಲ್‌ಬಿಡಬ್ಲ್ಯೂ ಮೂಲಕ ಔಟಾದರು. ಆದರೆ ಆ ಬಳಿಕ ತೋರಿಸಿರುವ ವಿಡಿಯೋದಲ್ಲಿ ಚೆಂಡು ಬ್ಯಾಟ್‌ಗೆ ಬಡಿದಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಲಕ್ನೋ ಬ್ಯಾಟ್ಸ್ ಮನ್ ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ವೈಟ್ ಗೆರೆಯಿಂದ ಹೊರಗೆ ಹೋದ ಚೆಂಡನ್ನೂ ವೈಡ್ ನೀಡಲಿಲ್ಲ. ಹೀಗಾಗಿ ಆಟದ ಅಂತ್ಯ ಬದಲಾಯಿತು.

IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!

ಅಂಪೈರ್ಸ್ ಸಂಬಳ ಎಷ್ಟಿರಬಹುದು?

ಅಂಪೈರ್ಸ್ ಸಂಬಳ ಎಷ್ಟಿರಬಹುದು?

ಇಂತಹ ವಿವಾದಾತ್ಮಕ ಫಲಿತಾಂಶಗಳ ಮೂಲಕ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಅಂಪೈರ್‌ಗಳ ಸಂಬಳವನ್ನು ಕೇಳಿದರೆ ನೀವು ಶಾಕ್ ಆಗುತ್ತೀರಿ. ಐಪಿಎಲ್ ಸರಣಿಯಲ್ಲಿ ಅಂಪೈರ್‌ಗಳನ್ನು ಒಟ್ಟು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಂದರೆ ಐಸಿಸಿ ಅಂಪೈರ್ ಅಸೋಸಿಯೇಷನ್ ​​ಸದಸ್ಯರಿಗೆ ಪ್ರತಿ ಪಂದ್ಯಕ್ಕೆ 1,98,000 ರೂ. ಸ್ಯಾಲರಿ ಸಿಗಲಿದೆ.

ಐಸಿಸಿ ಅಂಪೈರ್ ಅಸೋಸಿಯೇಷನ್ ಸದಸ್ಯರಲ್ಲದ ಅಂಪೈರ್‌ಗೆ ಪ್ರತಿ ಪಂದ್ಯಕ್ಕೆ 59,000 ರೂ. ನೀಡಲಾಗುತ್ತದೆ. ಇದಲ್ಲದೇ ಪ್ರತಿ ಸೀಸನ್ ಗೆ ಬರೋಬ್ಬರಿ 7,33,000 ರೂ.ಗಳನ್ನು ಪ್ರಾಯೋಜಕತ್ವದ ಹಣವಾಗಿ ಅಂಪೈರ್ಸ್‌ಗೆ ನೀಡಲಾಗುತ್ತದೆ.

ವೃದ್ದಿಮಾನ್ ಸಹಾಗೆ ಬೆದರಿಕೆ ಪ್ರಕರಣ: ಖ್ಯಾತ ಪತ್ರಕರ್ತನಿಗೆ 2 ವರ್ಷಗಳ ಬ್ಯಾನ್ ಶಿಕ್ಷೆ! ಯಾರು ಆ ಪತ್ರಕರ್ತ?

ಐಪಿಎಲ್ 2022 ರಲ್ಲಿ ಭಾರತೀಯ ಅಂಪೈರ್‌ಗಳು

ಐಪಿಎಲ್ 2022 ರಲ್ಲಿ ಭಾರತೀಯ ಅಂಪೈರ್‌ಗಳು

ಅನಿಲ್ ಚೌಧರಿ, ಸಿ. ಸಂಸುದಿನ್, ವೀರೇಂದ್ರ ಶರ್ಮಾ, ಕೆ.ಎನ್.ಅನಂತಪದ್ಮನಾಬನ್, ನಿತಿನ್ ಮಾನ್, ಎಸ್.ರವಿ, ವಿನೀತ್ ಕುಲಕರ್ಣಿ, ಯಶವಂತ್ ಬರ್ಡೆ, ಉಲ್ಲಾಸ್ ಕಾಂತೆ, ಅನಿಲ್ ತಾಂಡೇಕರ್, ಕೆ. ಶ್ರೀನಿವಾಸನ್, ಬಾಶಿಮ್ ಪದಕ್

ವಿದೇಶಿ ಅಂಪೈರ್‌ಗಳು

ವಿದೇಶಿ ಅಂಪೈರ್‌ಗಳು

ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ಪಾಲ್ ರಾಫೆಲ್ (ಆಸ್ಟ್ರೇಲಿಯಾ), ಕ್ರಿಸ್ಟೋಫರ್ ಕೆಫಿನ್ (ನ್ಯೂಜಿಲೆಂಡ್)

ಆಟಗಾರರಿಗೆ ದಂಡ ಹಾಕಲಾಗುತ್ತದೆ? ಅಂಪೈರ್‌ಗೆ ಏನು ಶಿಕ್ಷೆ?

ಆಟಗಾರರಿಗೆ ದಂಡ ಹಾಕಲಾಗುತ್ತದೆ? ಅಂಪೈರ್‌ಗೆ ಏನು ಶಿಕ್ಷೆ?

ಪಂದ್ಯದಲ್ಲಿ ಸರಿಯೋ ತಪ್ಪೋ ಏನೇ ಆಗಲಿ ರೆಫರಿಗಳೇ ನಿರ್ಧರಿಸುತ್ತಾರೆ. ಇದನ್ನು ಆಟಗಾರರಿಂದ ಬದಲಾಯಿಸಲು ಸಾಧ್ಯವಿಲ್ಲ. ಆಟಗಾರರು ವಿವಾದಾತ್ಮಕ ವಾದದಲ್ಲಿ ತೊಡಗಿದರೆ ಮಾತ್ರ ದಂಡ ವಿಧಿಸಲಾಗುತ್ತದೆ. ಆದರೆ ತಪ್ಪಾಗಿ ತೀರ್ಪು ನೀಡಿದ ಅಂಪೈರ್‌ಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, April 24, 2022, 17:40 [IST]
Other articles published on Apr 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X