ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

GT vs RR ಕ್ವಾಲಿಫೈಯರ್ 1: ಮಳೆಗೆ ಪಂದ್ಯ ರದ್ದಾದರೆ ಯಾರು ವಿನ್ನರ್? ಆಯ್ಕೆ ಮಾಡಲು ಇವೆ 3 ವಿಧಾನಗಳು!

IPL 2022: What will happen if qualifier 1 between GT vs RR is cancel due to rain?

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಪ್ಲೇಆಫ್ ಸುತ್ತಿನ ಪಂದ್ಯಗಳು ಇಂದಿನಿಂದ ( ಮೇ 24 ) ಆರಂಭವಾಗುತ್ತಿದ್ದು, ಟೂರ್ನಿಯ ಲೀಗ್ ಹಂತದ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.

IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?

ಇನ್ನು ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಗುಜರಾತ್ ಟೈಟನ್ಸ್ ಮತ್ತು ಎರಡನೇ ಸ್ಥಾನ ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದು, ಇತ್ತಂಡಗಳ ನಡುವಿನ ಒಂದನೇ ಕ್ವಾಲಿಫೈಯರ್ ಪಂದ್ಯ ಇಂದು ( ಮೇ 24 ) ಸಂಜೆ 7.30ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಂಡರೆ, ಸೋಲುವ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಬರುವ ತಂಡದ ಜೊತೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಫೈನಲ್ ಪ್ರವೇಶಕ್ಕಾಗಿ ಸೆಣಸಾಟ ನಡೆಸಲಿದೆ.

IPL 2022: ಪ್ಲೇ ಆಫ್ ಪ್ರವೇಶಿಸಿರುವ 4 ತಂಡಗಳ ಪೈಕಿ ಈ ತಂಡವೇ ಚಾಂಪಿಯನ್ ಆಗಬೇಕು ಎಂದ ರೈನಾIPL 2022: ಪ್ಲೇ ಆಫ್ ಪ್ರವೇಶಿಸಿರುವ 4 ತಂಡಗಳ ಪೈಕಿ ಈ ತಂಡವೇ ಚಾಂಪಿಯನ್ ಆಗಬೇಕು ಎಂದ ರೈನಾ

ಆದರೆ, ಈ ಪಂದ್ಯದ ಕುರಿತಾಗಿ ಇದೀಗ ಬೇಸರದ ಸುದ್ದಿ ಹರಿದಾಡುತ್ತಿದ್ದು, ಪಂದ್ಯ ನಡೆಯಲಿರುವ ಕೋಲ್ಕತ್ತಾದಲ್ಲಿ ಕಳೆದ ಎರಡು ಮೂರು ದಿನಗಳಿಂದ ತೀವ್ರ ಮಳೆ ಸುರಿಯುತ್ತಿದ್ದು, ಇಂದೂ ಸಹ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಇಂದೂ ಸಹ ಕೋಲ್ಕತ್ತಾದಲ್ಲಿ ಮಳೆ ಸುರಿಯುತ್ತಿದ್ದು, ಅನೇಕ ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ಪಂದ್ಯದ ದಿನವೂ ನಗರದಲ್ಲಿ ಮಳೆಯಾಗುತ್ತಿದ್ದು ಪಂದ್ಯದ ವೇಳೆ ಕೂಡ ಮಳೆಯಾಗುವುದು ಖಚಿತ ಎನ್ನುತ್ತಿದ್ದಾರೆ. ಹೀಗಿರುವಾಗ ಈ ಮಹತ್ವದ ಪಂದ್ಯ ಮಳೆಗೆ ಆಹುತಿಯಾದರೆ ನಂತರ ಯಾವ ತಂಡವನ್ನು ವಿಜೇತ ತಂಡವೆಂದು ಘೋಷಿಸುತ್ತಾರೆ ಹಾಗೂ ಯಾವ ಆಧಾರದ ಮೇಲೆ ವಿಜೇತ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಅನೇಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಇನ್ನು ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಈ ಒಂದನೇ ಕ್ವಾಲಿಫೈಯರ್ ಪಂದ್ಯ ಮಳೆಗೆ ತುತ್ತಾದರೆ ವಿನ್ನರ್ ಯಾರು ಎಂದು ಆಯ್ಕೆ ಮಾಡಲು ಮೂರು ನಿಯಮಗಳು ಲಭ್ಯವಿದ್ದು, ಅವುಗಳ ಮಾಹಿತಿ ಈ ಕೆಳಕಂಡಂತಿದೆ..

ಒಂದನೇ ವಿಧಾನ

ಒಂದನೇ ವಿಧಾನ

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯಕ್ಕೆ ಸುಮಾರು ಎರಡು ಗಂಟೆಗಳ ಮಳೆಯ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಒಂದುವೇಳೆ ಹೀಗೇನಾದರೂ ನಡೆದು ಪಂದ್ಯ ನಡೆಸಲು ನಿಗದಿತ ಸಮಯದಲ್ಲಿ ಕೆಲ ಕಾಲಾವಕಾಶ ಮಾತ್ರ ಬಾಕಿ ಉಳಿದರೆ, 20 ಓವರ್‌ಗಳ ಬದಲು 5 ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಅಂದರೆ, ಎರಡೂ ತಂಡಗಳಿಗೂ ತಲಾ 5 ಓವರ್ ಬ್ಯಾಟ್ ಮಾಡುವ ಅವಕಾಶ ಲಭಿಸಲಿದ್ದು, ಈ 5 ಓವರ್‌ಗಳ ಪಂದ್ಯದಲ್ಲಿ ವಿಜೇತ ತಂಡವನ್ನು ಹೊರತರಲಾಗುತ್ತದೆ.

ಎರಡನೇ ಮಾರ್ಗ

ಎರಡನೇ ಮಾರ್ಗ

ಒಂದುವೇಳೆ ಮಳೆ ಹೆಚ್ಚಾಗಿ 5 ಓವರ್‌ಗಳ ಪಂದ್ಯವನ್ನೂ ಕೂಡ ನಡೆಸಲಾಗದೇ ಇದ್ದರೆ, ಇತ್ತಂಡಗಳ ನಡುವೆ ಕೇವಲ ಸೂಪರ್ ಓವರ್‌ನ್ನು ಆಯೋಜಿಸಲಾಗುತ್ತದೆ. ಈ ಸೂಪರ್ ಓವರ್‌ನಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದ್ದರೆ ಸೋಲುವ ತಂಡ ನಿಯಮದಂತೆ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ತೆರಳಲಿದೆ.

ಸೂಪರ್ ಓವರ್ ಕೂಡ ನಡೆಯದೇ ಇದ್ದರೆ?

ಸೂಪರ್ ಓವರ್ ಕೂಡ ನಡೆಯದೇ ಇದ್ದರೆ?

ಈ ಮೇಲಿನ ಎರಡೂ ನಿಯಮಗಳಿಗೂ ಅವಕಾಶ ಸಿಗದಷ್ಟು ಮಳೆ ಸುರಿದು ಒಂದೇ ಒಂದು ಎಸೆತವನ್ನೂ ಸಹ ಹಾಕಲಾಗದೇ ಇದ್ದರೆ ಲೀಗ್ ಹಂತದಲ್ಲಿ ಹೆಚ್ಚು ಪಂದ್ಯ ಗೆದ್ದ ತಂಡವನ್ನು ಅಂಕಗಳ ಆಧಾರದ ಮೇಲೆ ವಿಜೇತ ತಂಡ ಎಂದು ಘೋಷಿಸಿ ಫೈನಲ್‌ಗೆ ಕಳುಹಿಸಲಾಗುತ್ತದೆ. ಹೀಗಾದರೆ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕಿಂತ ಹೆಚ್ಚು ಅಂಕಗಳನ್ನು ಲೀಗ್ ಹಂತದಲ್ಲಿ ಸಂಪಾದಿಸಿದ್ದ ಕಾರಣ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟರೆ, ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶಿಸಲಿದೆ.

Story first published: Tuesday, May 24, 2022, 19:19 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X