ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ರೀಟೆನ್ಶನ್ ಪಟ್ಟಿಯಿಂದ ಹಾರ್ದಿಕ್ ಹೊರ ಬೀಳಲು ಕಾರಣ ವಿವರಿಸಿದ ಜಹೀರ್ ಖಾನ್

IPL 2022: why all-rounder Hardik Pandya was not retained by Mumbai Indians Zaheer Khan explains

ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳ ರಿಟೆನ್ಶನ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದ್ದು ಆಟಗಾರರಿಗೆ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಇದರಲ್ಲಿ ಕೆಲ ತಂಡಗಳು ಗರಿಷ್ಠ ಆಟಗಾರರನ್ನು ಉಳಿಸಿಕೊಂಡಿದ್ದರೆ ಪಂಜಾಬ್ ಕಿಂಗ್ಸ್ ಇಬ್ಬರು ಆಟಗಾರರನ್ನು ಮಾತ್ರವೇ ಉಳಿಸಿಕೊಂಡಿದೆ. ಇನ್ನು ಹೊಸ ತಂಡಗ ಹರಾಜಿಗೆ ಬಿಡುಗಡೆಯಾಗಿರುವ ಆಟಗಾರರ ಪಟ್ಟಿಯಿಂದ ತಲಾ ಮೂವರು ಆಟಗಾರರನ್ನು ಹರಾಜಿಗೆ ಮುನ್ನ ಸೇರ್ಪಡೆಗೊಳಿಸಲು ವಿಶೇಷ ಅವಕಾಶವನ್ನು ನೀಡಲಾಗಿದೆ.

ಇನ್ನು ಈ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಹಾರ್ದಿಕ್ ಪಾಂಡ್ಯ ಅವರನ್ನು ರೀಟೈನ್ ಮಾಡಿಕೊಳ್ಳದಿರಲು ನಿರ್ಧರಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಆರಂಭದಿಂದಲೂ ಮುಂಬೈ ತಂಡದ ಪರವಾಗಿ ಆಡುತ್ತಿರುವ ಹಾರ್ದಿಕ್ ಪಾಂಡ್ಯ ಈ ಬಾರಿ ಹರಾಜಿಗೆ ಬಿಡುಗಡೆಯಾಗಿರುವುದು ಕುತೂಹಲ ಮೂಡಿಸಿದ್ದರೂ ಇತ್ತೀಚಿನ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದಾಗಿ ಕೆಲ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಇದನ್ನು ನಿರೀಕ್ಷಿಸಿದ್ದರು.

ಭಾರತದ ಬೌಲರ್‌ಗಳಿಂದ, ಪ್ರತಿ ಓವರ್‌ನಲ್ಲೂ ಹಾರ್ಟ್‌ ಅಟ್ಯಾಕ್ ಆದಂಗೆ ಆಗ್ತಿದೆ: ಅಂಪೈರ್‌ಭಾರತದ ಬೌಲರ್‌ಗಳಿಂದ, ಪ್ರತಿ ಓವರ್‌ನಲ್ಲೂ ಹಾರ್ಟ್‌ ಅಟ್ಯಾಕ್ ಆದಂಗೆ ಆಗ್ತಿದೆ: ಅಂಪೈರ್‌

ಆದರೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ರೀಟೆನ್ಶನ್ ಪಟ್ಟಿಯಿಂದ ಹೊರಗುಳಿಯಲು ಕಾರಣವೇನೆಂಬ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಜಹೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್, ಜಸ್ಪ್ರೀತ್ ಬೂಮ್ರಾ, ಸೂರ್ಯ ಕುಮಾರ್ ಯಾದವ್ ಮತ್ತು ಕೀರಾನ್ ಪೊಲಾರ್ಡ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು ಅವರನ್ನು ಕೈಬಿಡಲಾಯಿತು. ನಿರಂತರ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಐಪಿಎಲ್ 2021 ರಲ್ಲಿ ಬೌಲಿಂಗ್ ಮಾಡಿರಲೇ ಇಲ್ಲ. ಟಿ20 ವಿಶ್ವಕಪ್‌ ನಲ್ಲಿಯೂ ಸರಾಸರಿ ಪ್ರದರ್ಶನ ನೀಡಿದ ನಂತರ ಅವರ ಭಾರತೀಯ ತಂಡದಿಮದಲೂ ಹೊರಗುಳಿದಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ 2022: ಟೀಂ ಇಂಡಿಯಾ ಘೋಷಣೆ, ಮಿಥಾಲಿ ರಾಜ್ ನಾಯಕತ್ವಐಸಿಸಿ ಮಹಿಳಾ ವಿಶ್ವಕಪ್ 2022: ಟೀಂ ಇಂಡಿಯಾ ಘೋಷಣೆ, ಮಿಥಾಲಿ ರಾಜ್ ನಾಯಕತ್ವ

ಆದರೆ ಜಹೀರ್ ಖಾನ್ ಹಾರ್ದಿಕ್ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ. ಸಂಪೂರ್ಣವಾದ ಫಿಟ್‌ ನೆಸ್ ಪಡೆದುಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಬಲಿಷ್ಠ ಆಟಗಾರನಾಗಿ ಮತ್ತೆ ಮರಳಲಿದ್ದಾರೆ ಎಂದು ಜಹೀರ್ ಖಾನ್ ಹೇಳಿದ್ದಾರೆ. "ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ಶೀಘ್ರದಲ್ಲಿಯೇ ಸಂಪೂರ್ಣ ಫಿಟ್‌ನೆಸ್ ಪಡೆದುಕೊಳ್ಳಲಿದ್ದಾರೆ. ಅವರ ಆ ಸಾಧನೆಯ ಸನಿಹದಲ್ಲಿದ್ದಾರೆ. ರೀಟೆನ್ಶನ್ ಪ್ರಕ್ರಿಯೆ ಸಾಮಾನ್ಯವಾಗಿ ಬೇರೆ ಬೇರೆ ಕೋನಗಳಿಂದ ನಿರ್ಧರಿಸಲಾಗುತ್ತದೆ. ಅದರ ಬಗೆಗಿನ ಚರ್ಚೆಗಳು ಕೂಡ ಸುದೀರ್ಘವಾಗಿ ನಡೆಯುತ್ತದೆ. ಮಹಾ ಹರಾಜಿಗೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಹಾಗೂ ನಿಮ್ಮೊಂದಿಗೆ ಸಾಕಷ್ಟು ಸಮಯ ಹಾಗೂ ಶಕ್ತಿಯನ್ನು ವ್ಯಯಿಸಿದ್ದ ಆಟಗಾರರಿಗೆ ವಿದಾಯ ಹೇಳುವುದು ಬಹಳ ಕಠಿಣವಾಗುತ್ತದೆ" ಎಂಬ ಜಹೀರ್ ಖಾನ್ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿ ವರದಿ ಮಾಡಿದೆ.

ಖ್ಯಾತ ಟೆನಿಸ್ ತಾರೆ ನೊವಾಕ್‌ ಜೊಕೊವಿಕ್‌ಗೆ ಪ್ರವೇಶ ನಿರಾಕರಿಸಿದ ಆಸ್ಟ್ರೇಲಿಯಾ: ವೀಸಾ ರದ್ದು!ಖ್ಯಾತ ಟೆನಿಸ್ ತಾರೆ ನೊವಾಕ್‌ ಜೊಕೊವಿಕ್‌ಗೆ ಪ್ರವೇಶ ನಿರಾಕರಿಸಿದ ಆಸ್ಟ್ರೇಲಿಯಾ: ವೀಸಾ ರದ್ದು!

IND vs Pak ಮಹಿಳಾ ತಂಡದ ಪಂದ್ಯ ಶುರು ! | Oneindia Kannada

ಇನ್ನು ಲಕ್ನೋ ಹಾಗೂ ಅಹ್ಮದಾಬಾದ್ ತಂಡಗಳು ತಲಾ ಮೂವರು ಆಟಗಾರರನ್ನು ಹರಾಜಿಗೆ ಮುನ್ನವೇ ಸೇರಿಸಿಕೊಳ್ಳಲು ಅವಕಾಶವನ್ನು ಹೊಂದಿದ್ದು ಈ ಎರಡು ತಂಡಗಳ ಪೈಕಿ ಯಾವುದಾದರೂ ಒಂದು ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ತಂಡಗಳು ಆಯ್ಕೆ ಮಾಡದಿದ್ದರೆ ಸಹಜವಾಗಿಯೇ ಹಾರ್ದಿಕ್ ಪಾಂಡ್ಯ ಹರಾಜು ಪ್ರಕ್ರಿಯೆಗೆ ಒಳಗಾಗಲಿದ್ದಾರೆ.

Story first published: Thursday, January 6, 2022, 17:05 [IST]
Other articles published on Jan 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X