ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್‌ಗೂ ಮುಂಚೆ ಬ್ಯಾಟ್‌ ಅನ್ನು ತಿನ್ನುವ ಧೋನಿ! ಕಾರಣ ತಿಳಿಸಿದ ಅಮಿತ್ ಮಿಶ್ರಾ

MS DHONI

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಬಹಳ ನಿಧಾನವಾಗಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಆರಂಭಿಕ ನಾಲ್ಕು ಪಂದ್ಯಗಳನ್ನ ಸೋತು ಹಿನ್ನಡೆ ಅನುಭವಿಸಿದ್ದ ಸಿಎಸ್‌ಕೆ ಕಳೆದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ದಾಖಲಿಸಿದೆ.

ಭಾನುವಾರ(ಮೇ.09) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಜಯ ಸಾಧಿಸಿತು. ಈ ಪಂದ್ಯದ ವೇಳೆಯಲ್ಲಿ ಸೆರೆಯಾಗಿರುವ ಒಂದು ವೀಡಿಯೋ ಭಾರೀ ವೈರಲ್ ಆಗಿತ್ತು. ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟ್‌ ಕಚ್ಚುವ ಮೂಲಕ ಗಮನ ಸೆಳೆದಿದ್ದರು. ಬ್ಯಾಟಿಂಗ್‌ಗೆ ಇಳಿಯೋಕು ಮೊದಲು ಧೋನಿ ಬ್ಯಾಟ್ ಕಚ್ಚೋದು ಏಕೆ ಎಂಬ ಪ್ರಶ್ನೆಯನ್ನ ಹುಟ್ಟುಹಾಕಿತ್ತು.

ಡೆಲ್ಲಿ ವಿರುದ್ಧ 91ರನ್‌ಗಳಿಂದ ಭರ್ಜರಿಯಾಗಿ ಗೆದ್ದ ಸಿಎಸ್‌ಕೆ

ಡೆಲ್ಲಿ ವಿರುದ್ಧ 91ರನ್‌ಗಳಿಂದ ಭರ್ಜರಿಯಾಗಿ ಗೆದ್ದ ಸಿಎಸ್‌ಕೆ

ಚೆನ್ನೈ ಸೂಪರ್ ಕಿಂಗ್ಸ್‌ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಾರುಪತ್ಯ ಮೆರೆದಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ನೆಲಕಚ್ಚಿದ ಡೆಲ್ಲಿ ಕ್ಯಾಪಿಟಲ್ಸ್ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲ್ ಔಟ್ ಆಯಿತು.

IPL 2022 Points table: ಆರ್‌ಸಿಬಿ, ಸಿಎಸ್‌ಕೆ ಗೆಲುವಿನ ನಂತರ ಅಂಕಪಟ್ಟಿ ಹೇಗಿದೆ!

ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟಿಂಗ್ ಬರೋಕು ಮುಂಚೆ ಬ್ಯಾಟ್ ಕಚ್ಚಿದ ಧೋನಿ

ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟಿಂಗ್ ಬರೋಕು ಮುಂಚೆ ಬ್ಯಾಟ್ ಕಚ್ಚಿದ ಧೋನಿ

ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ ಪರ ಧೋನಿ ಎದುರಿಸಿದ 8 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್‌ಗಳ ಮೂಲಕ 21 ರನ್ ಕಲೆಹಾಕಿದರು. ಆದ್ರೆ ಈ ಬ್ಯಾಟಿಂಗ್ ಬರೋಕು ಮುಂಚೆ ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟ್ ಹಿಡಿದು ಕುಳಿತ್ತಿದ್ದ ಧೋನಿ, ತನ್ನ ಬ್ಯಾಟ್‌ ಅನ್ನು ಕಚ್ಚಿರುವ ಫೋಟೋ ಸೆರೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಮಾಹಿ ಹೀಗೆ ಏಕೆ ಮಾಡಿರಬಹುದು ಎಂಬ ಚರ್ಚೆ ಶುರುವಾಗಿತು. ಆದ್ರೆ ಇದಕ್ಕೆ ಭಾರತದ ಮಾಜಿ ಅನುಭವಿ ಸ್ಪಿನ್ನರ್ ಉತ್ತರ ನೀಡಿದ್ದಾರೆ.

RCB vs SRH: ಹಸರಂಗ ಮ್ಯಾಜಿಕ್; ಬೃಹತ್ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಗಮ

ಧೋನಿ ಬ್ಯಾಟ್ ಕಚ್ಚುವ ಹಿಂದಿನ ಉದ್ದೇಶ ತಿಳಿಸಿದ ಅಮಿತ್ ಮಿಶ್ರಾ

ಧೋನಿಯ ಈ ವಿಭಿನ್ನ ಅಭ್ಯಾಸವನ್ನು ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ತಿಳಿಸಿದ್ದಾರೆ. "ಒಂದು ವೇಳೆ ಧೋನಿ ಆಗಾಗ್ಗೆ ಅವರ ಬ್ಯಾಟ್ ಅನ್ನು ಏಕೆ ಕಚ್ಚುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಆದ್ರೆ ಅವರು ತನ್ನ ಬ್ಯಾಟ್ ಸ್ವಚ್ಛವಾಗಿಡಲು ಇಷ್ಟಪಡುವ ಕಾರಣ ಬ್ಯಾಟ್‌ಗೆ ಅಂಟಿಸಿರುವ ಟೇಪ್‌ ಅನ್ನು ನೀಟ್ ಆಗಿ ತೆಗೆದುಹಾಕಲು ಆ ರೀತಿ ಮಾಡುತ್ತಾನೆ. ಎಂಎಸ್‌ನ ಬ್ಯಾಟ್‌ನಿಂದ ಒಂದೇ ಒಂದು ತುಂಡು ಟೇಪ್ ಅಥವಾ ಥ್ರೆಡ್ ಹೊರಬಂದಿರುವುದನ್ನು ನೀವು ನೋಡಲು ಸಾಧ್ಯವಿಲ್ಲ'' ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

ತಾಯಂದಿರ ದಿನ 2022: ಕೊಹ್ಲಿ, ಸಚಿನ್ ಸೇರಿ ಇತರ ಕ್ರಿಕೆಟಿಗರಿಂದ ಪ್ರೀತಿಯ ಶುಭಾಶಯಗಳು

ಅನ್‌ಸೋಲ್ಡ್ ಆಗಿರುವ ಅಮಿತ್ ಮಿಶ್ರಾ

ಅನ್‌ಸೋಲ್ಡ್ ಆಗಿರುವ ಅಮಿತ್ ಮಿಶ್ರಾ

ಬೆಂಗಳೂರಿನಲ್ಲಿ ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅಮಿತ್ ಮಿಶ್ರಾ ಅನ್‌ಸೋಲ್ಡ್‌ ಆಗುವ ಮೂಲಕ ಐಪಿಎಲ್ ಆಡುವ ಅವಕಾಶ ಕಳೆದುಕೊಂಡರು. ಮಿಶ್ರಾ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಆದರೆ ದುರದೃಷ್ಟವಶಾತ್,ಯಾವುದೇ ಫ್ರಾಂಚೈಸಿಗಳು ಕೊಂಡುಕೊಂಡಿಲ್ಲ.

ಮೆಗಾ ಹರಾಜಿನಲ್ಲಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ನಂತರ, ದೆಹಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರಾರನ್ನ ವೈಯಕ್ತಿಕವಾಗಿ ಅಭಿನಂದಿಸಿದರು ಮತ್ತು ಫ್ರಾಂಚೈಸಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಧನ್ಯವಾದ ತಿಳಿಸಿದರು. ಅಮಿತ್ ಮಿಶ್ರಾ ಅವರನ್ನು ಮರಳಿ ಪಡೆಯಲು ದೆಹಲಿ ಇಷ್ಟಪಡುತ್ತದೆ ಎಂದು ಜಿಂದಾಲ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಮಿಶ್ರಾ ಡಿಸಿ ಬಾಸ್‌ಗೆ ಧನ್ಯವಾದ ಎಂದು ಹೇಳಿದ್ದಷ್ಟೇ ಅಲ್ಲದೆ, ಅಗತ್ಯವಿದ್ದಾಗ ತಂಡಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು.

Story first published: Monday, May 9, 2022, 14:56 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X