ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ರೋಹಿತ್‌ಗೆ ಕರಾಳ ಆವೃತ್ತಿ: ಒಂದೂ ಅರ್ಧ ಶತಕವಿಲ್ಲದೆ ಸೀಸನ್ ಮುಗಿಸಿದ ಎಂಐ ನಾಯಕ

IPL 2022: Worst season for Rohit Sharma: MI skipper ends season without a half century

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹಿಂದೆಂದೂ ನೀಡದಷ್ಟು ಕಳಪೆ ಪ್ರದರ್ಶನ ನೀಡಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡಿರುವ ರೋಹಿತ್ ಶರ್ಮಾ ಸಾಕಷ್ಟು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಆವೃತ್ತಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಎಂದೂ ನೆನಪಿಸಿಕೊಳ್ಳಲು ಇಚ್ಚಿಸದಷ್ಟು ಕಹಿಯಾಗಿದೆ.

ಆಟಗಾರನಾಗಿ ಹಾಗೂ ನಾಯಕನಾಗಿ ಎರಡೂ ಜವಾಬ್ಧಾರಿಯಲ್ಲಿಯೂ ರೋಹಿತ್ ಶರ್ಮಾ ಈ ಆವೃತ್ತಿಯಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ತಂಡವಾಗಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿದ್ದು ಟೂರ್ನಿಯ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡು ಹೊರಬಿದ್ದಿದೆ. ರೋಹಿತ್ ಶರ್ಮಾ ಸಹಿತ ಪ್ರಮುಖ ಆಟಗಾರರು ಫಾರ್ಮ್‌ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?

ಒಂದೂ ಅರ್ಧ ಶತಕ ಬಾರಿಸದ ರೋಹಿತ್

ಒಂದೂ ಅರ್ಧ ಶತಕ ಬಾರಿಸದ ರೋಹಿತ್

ರೋಹಿತ್ ಶರ್ಮಾ ಪಾಲಿಗೆ ಈ ಬಾರಿಯ ಐಪಿಎಲ್ ಆವೃತ್ತಿ ಎಷ್ಟು ಕಳಪೆಯಾಗಿತ್ತು ಎಂದರೆ ಒಂದೂ ಅರ್ಧ ಶತಕ ಈ ಆವೃತ್ತಿಯಲ್ಲಿ ರೋಹಿತ್ ಬ್ಯಾಟ್‌ನಿಂದ ಸಿಡಿದಿಲ್ಲ. ಈ ಬಾರಿಯ ಟೂರ್ನಿಯಲ್ಲಿ 14 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 19.14ರ ಸರಾಸರಿಯಲ್ಲಿ 268 ರನ್‌ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 48. ಆರಂಭಿಕ ಆಟಗಾರನಾಗಿ ಈ ರೀತಿಯ ಪ್ರದರ್ಶನ ಬಂದಿರುವುದು ಮುಂಬೈ ಇಂಡಿಯನ್ಸ್ ಪಾಲಿಗೆ ಭಾರೀ ಹಿನ್ನಡೆಗೆ ಕಾರಣವಾಗಿದೆ.

ಐಪಿಎಲ್‌ನಲ್ಲಿ 40 ಅರ್ಧ ಶತಕ ಬಾರಿಸಿದ್ದಾರೆ ರೋಹಿತ್

ಐಪಿಎಲ್‌ನಲ್ಲಿ 40 ಅರ್ಧ ಶತಕ ಬಾರಿಸಿದ್ದಾರೆ ರೋಹಿತ್

ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಈವರಗೆ ಒಟ್ಟು 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 2009 ಹಾಗೂ 2021ರ ಆವೃತ್ತಿಗಳಲ್ಲಿ ರೋಹಿತ್ ತಲಾ ಒಂದು ಅರ್ಧ ಶತಕ ಬಾರಿಸಿದ್ದರು. 2018 ಹಾಗೂ 2019ರ ಆವೃತ್ತಿಯಲ್ಲಿ ತಲಾ ಎರಡು ಅರ್ಧ ಶತಕ ರೋಹಿತ್ ಬ್ಯಾಟ್‌ನಿಂದ ಸಿಡಿದಿತ್ತು. 2010, 2011, 2012, 2014, 2015, 2017 ಮತ್ತು 2020ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ತಲಾ ಮೂರು ಅರ್ಧ ಶತಕ ಸಿಡಿಸಿದ್ದರು. 2008 ಹಾಗೂ 2013ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಲ್ಕು ಅರ್ಧ ಶತಕ ಸಿಡಿಸಿದ್ದಾರೆ. 2016ರಲ್ಲಿ ಆವೃತ್ತಿಯೊಂದರಲ್ಲಿ ತಮ್ಮ ಗರಿಷ್ಠ 5 ಅರ್ಧ ಶತಕ ಸಿಡಿಸಿ ಮಿಂಚಿದ್ದರು ರೋಹಿತ್ ಶರ್ಮಾ.

Dinesh Karthik ಹಂಚಿಕೊಂಡ ವಿಶೇಷ ಫೋಟೋ ಯಾವುದು | OneIndia Kannada
2013 ರೋಹಿತ್ ಯಶಸ್ವಿ ಆವೃತ್ತಿ

2013 ರೋಹಿತ್ ಯಶಸ್ವಿ ಆವೃತ್ತಿ

ರೋಹಿತ್ ಶರ್ಮಾ ಅವರ ಅತ್ಯಂತ ಯಶಸ್ವಿ ಆವೃತ್ತಿಯೆಂದರೆ ಅದು 2013ರ ಐಪಿಎಲ್ ಆವೃತ್ತಿ. ಈ ಆವೃತ್ತಿಯಲ್ಲಿ ರೋಹಿತ್ 19 ಪಂದ್ಯಗಳನ್ನು ಆಡಿದ್ದು 38.42ರ ಸರಾಸರಿಯಲ್ಲಿ 538 ರನ್‌ಗಳಿಸಿದ್ದರು. ನಾಲ್ಕು ಅರ್ಧ ಶತಕ ಈ ಆವೃತ್ತಿಯಲ್ಲಿ ರೋಹಿತ್ ಬ್ಯಾಟ್‌ನಿಂದ ಸಿಡಿದಿತ್ತು. ಈ ಆವೃತ್ತಿಯಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 79 ರನ್. ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆ ಆವೃತ್ತಿಯಲ್ಲಿ ರೋಹಿತ್ 6ನೇ ಸ್ಥಾನದಲ್ಲಿದ್ದರು.

Story first published: Sunday, May 22, 2022, 22:32 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X