ಆತನ ನಾಯಕತ್ವದಲ್ಲಿ ಆಡುವುದು ಎಲ್ಲಾ ಆಟಗಾರರ ಕನಸು: ಡೆವಾಲ್ಡ್ ಬ್ರೇವಿಸ್

ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತನೋರ್ವ ಅದ್ಭುತ ನಾಯಕನಾಗಿದ್ದಯ ಎಲ್ಲಾ ಕ್ರಿಕೆಟಿಗರು ಕೂಡ ಆತನಂಥಾ ನಾಯಕತ್ವದಲ್ಲಿ ಆಡುವುದನ್ನು ಬಯಸುತ್ತಾರೆ ಎಂದಿದ್ದಾರೆ.

ಡೆವಾಲ್ಡ್ ಬ್ರೆವೀಸ್ ಅಂಡರ್ 19 ವಿಶ್ವಕಪ್‌ನಲ್ಲಿ ಅದ್ಭುತ ಪಾರ್ಮ್‌ನಲ್ಲಿದ್ದರು. ದಕ್ಷಿಣ ಆಪ್ರಿಕಾ ತಂಡದ ಪರವಾಗಿ ಅನೇಗ ಸ್ಪೋಟಕ ಪ್ರದರ್ಶನಗಳನ್ನು ನೀಡಿ ತಂಡವನ್ನು ಗೆಲ್ಲಿಸಿದ್ದಾರೆ. ಅಂಡರ್ 19 ವಿಶ್ವಕಪ್‌ನಲ್ಲಿ ಅವರು 506 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ ಎಬಿ ಡಿವಿಲಿಯರ್ಸ್ ಅವರ ಶೈಲಿಗೆ ಹೊಂದಾಣಿಕೆಯಾಗುವ ಕಾರಣ 'ಬೇಬಿ ಎಬಿ' ಎಂದೇ ಡೆವಾಲ್ಡ್ ಬ್ರೆವೀಸ್ ಖ್ಯಾತರಾಗಿದ್ದಾರೆ.

IND vs SA: ಟಿ20 ಮುಖಾಮುಖಿಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಪಟ್ಟಿ; ಯಾವ ತಂಡ ಟಾಪ್?IND vs SA: ಟಿ20 ಮುಖಾಮುಖಿಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಪಟ್ಟಿ; ಯಾವ ತಂಡ ಟಾಪ್?

ಐಪಿಎಲ್ ಹರಾಜಿಗೂ ಮುನ್ನವೇ ಸಾಕಷ್ಟು ಚರ್ಚೆಯಲ್ಲಿದ್ದ ಬ್ರೆವೀಸ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಮೊತ್ತಕ್ಕೆ ಹರಾಜಾದರು. 3 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ತಂಡ ಬ್ರೆವೀಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿಯೂ ಕೆಲ ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ ಡೆವಾಲ್ಡ್ ಬ್ರೆವೀಸ್ 11 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 161 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಸಂವಾದ ನಡೆಸಿದ ಡೆವಾಲ್ಡ್ ಬ್ರೇವಿಸ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ಎಲ್ಲಾ ಆಟಗಾರರಿಗೂ ಉತ್ತಮವಾಗಿ ಬೆಂಬಲವನ್ನು ನೀಡಿದ್ದು ಒತ್ತಡಕ್ಕೆ ಸಿಲುಕಿಸುತ್ತಿರಲಿಲ್ಲ. ತಮ್ಮ ಸಹಜ ಆಟದೊಂದಿಗೆ ಎಲ್ಲರು ಕೂಡ ಆಟವನ್ನು ಆನಂದಿಸಬೇಕು ಎಂದು ಬಯಸುತ್ತಾರೆ" ಎಂದಿದ್ದಾರೆ ಡೆವಾಲ್ಡ್ ಬ್ರೇವಿಸ್.

ನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡ

"ನನ್ನ ಪ್ರಕಾರ ಆತನ ನಾಯಕತ್ವದಲ್ಲಿ ಆಡುವುದು ಎಲ್ಲಾ ಆಟಗಾರರ ಕನಸಾಗಿದೆ. ಅವರು ನಿಜವಾಗಿಯೂ ನಿಮಗೆ ಬೆಂಬಲವನ್ನು ನೀಡುತ್ತಾರೆ ಹಾಗೂ ಯಾರಿಗೂ ಒತ್ತಡಗಳಾದಂತೆ ನಿಭಾಯಿಸುತ್ತಾರೆ ಅಲ್ಲದೆ ಅಂಗಳದಲ್ಲಿ ಆಟವನ್ನು ಆನಂದಿಸುವಂತೆ ಮಾಡುತ್ತಾರೆ" ಎಂದಿದ್ದಾರೆ ಡೆವಾಲ್ಡ್ ಬ್ರೇವಿಸ್. ಇನ್ನು ಇದಕ್ಕೂ ಮುನ್ನ ಡೆವಾಲ್ಡ್ ಬ್ರೇವಿಡ್ ಮುಂಬೈ ಇಂಡಿಯನ್ಸ್ ತಂಡ ಯಾವಾಗಲೂ ನನ್ನ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು ಎಂದಿದ್ದರು.

Kl Rahul OUT.... ಪಂತ್ & ಪಾಂಡ್ಯಾಗೆ ಹೊಡೀತು ಲಕ್!!! | *Cricket | OneIndia Kannada

ಇನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿದೆ. ಐಪಿಎಲ್ ಆಡಿದ ಬಹುತೇಕ ಆಟಗಾರರು ಈ ಸರಣಿಯಲ್ಲಿ ಭಾಗಿಯಾಗುತ್ತಿದ್ದಾರೆ. ಟೆಂಬಾ ಬವುಮಾ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ರಿಷಭ್ ಪಂತ್ ನೇತೃತ್ವದ ಭಾರತ ಸವಾಲೊಡ್ಡಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, June 9, 2022, 17:49 [IST]
Other articles published on Jun 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X