ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಆರ್‌ಸಿಬಿ ತಂಡದಲ್ಲಿರುವ ಮೂವರು ದುಬಾರಿ ಆಟಗಾರರು

IPL 2023: 3 Most Expensive Players in Royal Challengers Bangalore Squad

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಡಿಸೆಂಬರ್ 23ರಂದು ಕೊಚ್ಚಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ 25 ಆಟಗಾರರ ಕೋಟಾವನ್ನು ಭರ್ತಿ ಮಾಡಿಕೊಂಡಿದೆ. ಈ ಮೂಲಕ 16ನೇ ಐಪಿಎಲ್ ಆವೃತ್ತಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ.

ಹರಜಾಇಗೂ ಮುನ್ನ ತನ್ನಲ್ಲಿ ಉಳಿದಿದ್ದ 8.75 ಕೋಟಿ ಮೊತ್ತವನ್ನು ಆರ್‌ಸಿಬಿ ಚಾಣಾಕ್ಷತನದಿಂದ ಖರ್ಚು ಮಾಡಿದ್ದು, ಕಡಿಮೆ ಮೊತ್ತದ ಪರ್ಸ್ ಹೊಂದಿದ್ದ ಕಾರಣ ಆರ್‌ಸಿಬಿ ದೊಡ್ಡ ಆಟಗಾರರನ್ನು ಸೇರ್ಪಡೆಗೊಳಿಸುವ ಯಾವುದೇ ನಿರೀಕ್ಷೆಯಿರಲಿಲ್ಲ. ಆದರೆ, ಪ್ರತಿಭಾನ್ವಿತ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್‌ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲವೇ ಆಟಗಾರರಿಗೆ ಪರ್ಸ್‌ನ ಹೆಚ್ಚಿನ ಮೊತ್ತ ವ್ಯಯಿಸಲಾಗಿದೆ. ವನಿಂದು ಹಸರಂಗ ಕೂಡ 10 ಕೋಟಿ ರೂ. ಬೆಲೆ ಹೊಂದಿದ್ದು, ತಮ್ಮ ಬೆಲೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಇತರರ ಪ್ರದರ್ಶನಗಳು ನಿರಾಸೆ ಮೂಡಿಸಿವೆ.

ಐಪಿಎಲ್ 2023ರ ಅವೃತ್ತಿಗಾಗಿ ಅತ್ಯಧಿಕ ಬೆಲೆ ಹೊಂದಿರುವ ಮೂವರು ಆರ್‌ಸಿಬಿ ಆಟಗಾರರ ಪಟ್ಟಿ ಇಲ್ಲಿದೆ.

ಜೋಶ್ ಹ್ಯಾಜಲ್‌ವುಡ್ - 7.75 ಕೋಟಿ ರೂ.

ಜೋಶ್ ಹ್ಯಾಜಲ್‌ವುಡ್ - 7.75 ಕೋಟಿ ರೂ.

ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಎತ್ತರದ ವೇಗಿ 12 ಪಂದ್ಯಗಳಲ್ಲಿ 8.11ರ ಎಕಾನಮಿ ದರದಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಕರೆದು ಬಾಲ್ ಕೈಗೆ ಕೊಟ್ಟಾಗಲೂ ವಿಕೆಟ್ ತಂದುಕೊಡುತ್ತಿದ್ದರು.

ಜೋಶ್ ಹ್ಯಾಜಲ್‌ವುಡ್ ಅವರನ್ನು ಆರ್‌ಸಿಬಿ ತಂಡ 7.75 ಕೋಟಿ ರೂ.ಗೆ ಖರೀದಿ ಮಾಡಿದೆ. ಆದರೆ, ಆ ಮೊತ್ತಕ್ಕೆ ಹ್ಯಾಜಲ್‌ವುಡ್ ನ್ಯಾಯ ಒದಗಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎನ್ನಬಹುದು.

ಐಪಿಎಲ್ ಪಂದ್ಯಾವಳಿಯಲ್ಲಿನ ಇತರ ಕೆಲವು ಸ್ಟಾರ್ ವೇಗಿಗಳಂತೆ ಡೆತ್ ಓವರ್‌ಗಳಲ್ಲಿ ವಿಶ್ವಾಸಾರ್ಹ ಬೌಲರ್ ಅಲ್ಲ ಮತ್ತು ಬೌಲಿಂಗ್ ಹೆಚ್ಚಿನ ವೇಗದಿಂದ ಕೂಡಿಲ್ಲ. ಆದರೆ, ಹೊಸ ಚೆಂಡು ಮತ್ತು ಮಧ್ಯಮ ಓವರ್‌ಗಳಲ್ಲಿ ನೊಂದಿಗೆ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆಯನ್ನು ಒಡ್ಡುತ್ತಾನೆ.

ಜೋಶ್ ಹ್ಯಾಜಲ್‌ವುಡ್ ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಇತ್ತೀಚಿಗೆ ಸಪ್ಪೆ ಪ್ರದರ್ಶನ ನೀಡುತ್ತಿದ್ದಾರೆ. ಸೆಪ್ಟೆಂಬರ್ 2022ರಿಂದ, ಅವರು 11 ಟಿ2 ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ವಿಕೆಟ್ ರಹಿತರಾಗಿದ್ದಾರೆ ಮತ್ತು ಆರು ಪಂದ್ಯಗಳಲ್ಲಿ ತಲಾ 35ಕ್ಕೂ ಅಧಿಕ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ಹರ್ಷಲ್ ಪಟೇಲ್ - 10.75 ಕೋಟಿ ರೂ.

ಹರ್ಷಲ್ ಪಟೇಲ್ - 10.75 ಕೋಟಿ ರೂ.

2021ರ ಐಪಿಎಲ್ ಪಂದ್ಯಾವಳಿಯಲ್ಲಿ 32 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ವಿಜೇತರಾದ ಹರ್ಷಲ್ ಪಟೇಲ್ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದರು. ತಿರುವು ಮಿಶ್ರಿತ ನಿಧಾನಗತಿ ಬೌಲಿಂಗ್ ಬ್ಯಾಟರ್‌ಗಳನ್ನು ವಂಚಿಸುತ್ತಿದ್ದನು ಮತ್ತು ಬ್ಯಾಟಿಂಗ್‌ನಲ್ಲಿಯೂ ಕೆಲವು ರನ್ ಗಳಿಸುವ ಆಟಗಾರನಾಗಿ ಮೂಡಿಬಂದರು.

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ 10.75 ಕೋಟಿ ರೂ.ಗೆ ಮತ್ತೆ ಆರ್‌ಸಿಬಿ ತಂಡಕ್ಕೆ ಮರಳಿದರು. ಅಂದಿನಿಂದ ಅವರ ಪ್ರದರ್ಶನಗಳಲ್ಲಿ ಬಹಳ ಏರಿಳಿತ ಕಂಡಿದೆ. ಅವರ ಪ್ರದರ್ಶನಕ್ಕೆ 10.75 ಕೋಟಿ ರೂ. ದುಬಾರಿಯಾಗಿದೆ ಎಂದು ಹೇಳಬಹುದು. ಐಪಿಎಲ್ 2022ರಲ್ಲಿ ಹರ್ಷಲ್ ಪಟೇಲ್ 15 ಪಂದ್ಯಗಳಲ್ಲಿ ಕೇವಲ 19 ವಿಕೆಟ್‌ಗಳನ್ನು ಪಡೆದರು ಮತ್ತು ಟಿ20 ಸ್ವರೂಪದಲ್ಲಿ ಭಾರತ ತಂಡಕ್ಕೂ ನಿರಾಶೆ ಮೂಡಿಸಿದ್ದಾರೆ.

ಈಗಾಗಲೇ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿರುವ ಹರ್ಷಲ್ ಪಟೇಲ್, ಉತ್ತಮ ಡೆತ್ ಬೌಲರ್ ಅಲ್ಲ ಎನ್ನಬಹುದು. ಐಪಿಎಲ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿದ್ದರೆ ಹರ್ಷಲ್ ಪಟೇಲ್‌ರನ್ನು ಬಿಡುಗಡೆ ಮಾಡಲು ಆರ್‌ಸಿಬಿ ಯೋಚಿಸಬಹುದಾಗಿದೆ.

ಆರ್‌ಸಿಬಿ ತಂಡದಲ್ಲಿರುವ ಅತ್ಯಂತ ದುಬಾರಿ ಆಟಗಾರ

ಆರ್‌ಸಿಬಿ ತಂಡದಲ್ಲಿರುವ ಅತ್ಯಂತ ದುಬಾರಿ ಆಟಗಾರ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ವಿರಾಟ್ ಕೊಹ್ಲಿ ಖಾಯಂ ಸದಸ್ಯರಾಗಿದ್ದಾರೆ. 15 ಕೋಟಿ ರೂ. ಪಡೆಯುವ ಮೂಲಕ ತಂಡದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ರನ್ ಶಿಖರ್ ನಿರ್ಮಸುತ್ತಿದ್ದ ಮಾಜಿ ನಾಯಕ, ಕಳೆದ ಎರಡು ಲೀಗ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಕಳೆದ ಮೂರು ಐಪಿಎಲ್ ಋತುಗಳಲ್ಲಿ 125 ಸ್ಟ್ರೈಕ್‌ರೇಟ್‌ಗಿಂತ ಕಡಿಮೆಯಾಗುತ್ತಿದೆ. ಅವರು ತಮ್ಮ ಕೊನೆಯ ಎರಡು ಆವೃತ್ತಿಗಳಲ್ಲಿ ಕೇವಲ 746 ರನ್ ಗಳಿಸಿದ್ದಾರೆ. ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಆಧಾರಸ್ತಂಭವಾಗಿದ್ದಾರೆ ಮತ್ತು ಆರ್‌ಸಿಬಿಯೊಂದಿಗೆ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೆ, 15 ಕೋಟಿ ರೂ.ಗೆ ತಕ್ಕಂತೆ ಅವರ ಬ್ಯಾಟ್‌ನಿಂದ ದೊಡ್ಡ ಮೊತ್ತ ಬರಬೇಕಿದೆ.

Story first published: Saturday, February 4, 2023, 17:04 [IST]
Other articles published on Feb 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X