ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023ರ ಸೀಸನ್‌ನಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ವಾಪಸ್ಸಾಗಲಿದ್ದಾರೆ ಎಬಿಡಿ! ಅಭಿಮಾನಿಗಳಿಗೆ ಗುಡ್‌ನ್ಯೂಸ್

AB De Villiers

ಅಬ್ರಹಾಂ ಡಿ ವಿಲಿಯರ್ಸ್.. ಇದಕ್ಕಿಂತ ಬೆಸ್ಟ್‌ ಅಂದ್ರೆ ಎಬಿಡಿ ವಿಲಿಯರ್ಸ್‌ ಅಂತ ಹೇಳಿದ್ರೆ ಸಾಕು, ಎಲ್ಲರಿಗೂ ಎಲ್ಲವೂ ಗೊತ್ತಾಗುತ್ತೆ. ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಮೈದಾನದ ಯಾವ ಮೂಲೆಗೆ ಬೇಕಾದ್ರೂ ಚೆಂಡನ್ನು ಅಟ್ಟಬಲ್ಲರು. ಕ್ರಿಕೆಟ್‌ ಪುಸ್ತಕದ ಎಲ್ಲಾ ಶಾಟ್‌ಗಳು ಎಬಿಡಿಗೆ ಗೊತ್ತು. ಅದನ್ನು ಹೊರತಾಗಿ 360 ಡಿಗ್ರಿಯಲ್ಲಿ ಬ್ಯಾಟ್‌ ಬೀಸೋದಿಕ್ಕೆ ಎಬಿಡಿ ಫೇಮಸ್‌.

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್‌ನಿಂದಾಗಿ ಮನೆಮಾತಾಗಿರುವ ಎಬಿಡಿ ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2021ರ ಐಪಿಎಲ್‌ ಸೀಸನ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಎಬಿಡಿಗೂ ಮತ್ತು ಆರ್‌ಸಿಬಿಗೆ ಎಲ್ಲಿಲ್ಲದ ನಂಟು. ಎಬಿಡಿಯನ್ನ ಮತ್ತೆ ಹೋಮ್ ಗ್ರೌಂಡ್‌ ಚಿನ್ನಸ್ವಾಮಿ ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ಇಲ್ಲಿದೆ ಗುಡ್‌ನ್ಯೂಸ್.. ಮುಂದಿನ ಐಪಿಎಲ್ ಸೀಸನ್‌ಗೆ ಎಬಿಡಿ ಬೆಂಗಳೂರಿಗೆ ಬರಲಿದ್ದಾರೆ..!

ಕೆಕೆಆರ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಎಬಿಡಿ

ಕೆಕೆಆರ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಎಬಿಡಿ

2021ರ ಐಪಿಎಲ್‌ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ ಎಬಿಡಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನಾಡುವ ಮೂಲಕ ಸ್ಪರ್ಧಾತ್ಮಕ ಟಿ20 ಲೀಗ್‌ನಿಂದ ಹೊರಗುಳಿದರು. ಆದ್ರೆ ಇದಕ್ಕೂ ಮೊದಲೇ ಎಬಿಡಿ 2018ರಲ್ಲಿ ಎಲ್ಲರಿಗೂ ಶಾಕ್ ಆಗುವ ರೀತಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ರು. ಎಬಿಡಿ ಇಷ್ಟು ವರ್ಷಗಳಿಂದ ದೂರ ಉಳಿದ್ರೂ ಅವರ ಫೇಮ್ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ.

ಚಿನ್ನಸ್ವಾಮಿ ಮೈದಾನಕ್ಕೆ ಮರಳಿ ಬರಳಿದ್ದಾರೆ ಡಿವಿಲಿಯರ್ಸ್‌

ಆರ್‌ಸಿಬಿ ಅಭಿಮಾನಿಗಳಿಗೆ ಎಬಿಡಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮುಂದಿನ 2023ರ ಐಪಿಎಲ್ ಸೀಸನ್‌ನಲ್ಲಿ ಎಬಿ ಡಿವಿಲಿಯರ್ಸ್‌ ಚಿನ್ನಸ್ವಾಮಿ ಮೈದಾನಕ್ಕೆ ಬರಲಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ತನ್ನ ಟ್ವೀಟ್‌ನಲ್ಲಿ ತಿಳಿಸಿರುವ ಎಬಿಡಿ ''ನಾನು ಮುಂದಿನ ವರ್ಷ ಚಿನ್ನಸ್ವಾಮಿಗೆ ಮರಳುತ್ತೇನೆ, ಆಡುವುದಕ್ಕಾಗಿ ಅಲ್ಲ, ಆದರೆ ಟ್ರೋಫಿ ಗೆಲ್ಲದಿದ್ದಕ್ಕಾಗಿ ಎಲ್ಲಾ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ ಮತ್ತು ಒಂದು ದಶಕದಿಂದ ನೀಡಿದ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದು ಡಿವಿಲಿಯರ್ಸ್ ಸೋಮವಾರ ಸ್ವತಃ ಟ್ವೀಟ್‌ನಲ್ಲಿ ತಿಳಿಸಿದ್ರು.

ಎಬಿಡಿ ಕಣ್ಣಿಗೆ ಶಸ್ತ್ರಚಿಕಿತ್ಸೆ, ಕ್ರಿಕೆಟ್‌ನಿಂದ ಎಬಿಡಿ ಬಹುದೂರ

ಎಬಿಡಿ ಕಣ್ಣಿಗೆ ಶಸ್ತ್ರಚಿಕಿತ್ಸೆ, ಕ್ರಿಕೆಟ್‌ನಿಂದ ಎಬಿಡಿ ಬಹುದೂರ

ಎಬಿ ಡಿವಲಿಯರ್ಸ್ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡಿದ್ದು, ತಾನು ಮತ್ತೆಂದು ಕ್ರಿಕೆಟ್ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಎಬಿಡಿ ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದೆ.

"ಬಲಭಾಗದ ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಮತ್ತೆ ಕ್ರಿಕೆಟ್ ಆಡುತ್ತಿಲ್ಲ" ಎಂದು ಸ್ವತಃ ತಿಳಿಸಿದ್ದಾರೆ.

ಐಪಿಎಲ್‌ ಕೋವಿಡ್ ಪೂರ್ವ ಸೀಸನ್‌ಗಳಂತೆ ವಾಪಸ್ಸಾಗಲಿದ್ದು, ಹೋಮ್ ಮತ್ತು ಅವೇಗಳಲ್ಲಿ ಪಂದ್ಯಗಳು ನಡೆಯಲಿದೆ. ಈ ಕುರಿತಾಗಿ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ವತಃ ದೃಢಪಡಿಸಿದ್ದಾರೆ.

"ಪುರುಷರ ಐಪಿಎಲ್‌ನ ಮುಂದಿನ ಋತುವಿನಲ್ಲಿ ಎಲ್ಲಾ ಹತ್ತು ತಂಡಗಳು ತಮ್ಮ ತವರು ಪಂದ್ಯಗಳನ್ನು ತಮ್ಮ ನಿಗದಿತ ಸ್ಥಳಗಳಲ್ಲಿ ಆಡುವುದರೊಂದಿಗೆ ಹೋಮ್ ಮತ್ತು ಅವೇ ಸ್ವರೂಪಕ್ಕೆ ಹಿಂತಿರುಗುತ್ತವೆ" ಎಂದು ಸೌರವ್ ಗಂಗೂಲಿ ಕಳೆದ ತಿಂಗಳು ರಾಜ್ಯ ಘಟಕಗಳಿಗೆ ಬರೆದ ಟಿಪ್ಪಣಿಯಲ್ಲಿ ತಿಳಿಸಿದ್ರು.

ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಎಬಿಡಿ

ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಎಬಿಡಿ

ಎಬಿಡಿಗೆ ಇಷ್ಟು ದೊಡ್ಡ ಮಟ್ಟಿನ ಫ್ಯಾನ್ ಫಾಲೋವರ್ಸ್ ಇರಲು ಕಾರಣ ಅವರ ಆನ್‌ಫೀಲ್ಡ್ ಮತ್ತು ಆಫ್‌ಫೀಲ್ಡ್‌ ವ್ಯಕ್ತಿತ್ವ. ಎಬಿ ಡಿವಿಲಿಯನ್ಸ್ 22 ಯಾರ್ಡ್ ಒಳಗಷ್ಟೇ ಓರ್ವ ಅದ್ಭುತ ಕ್ರಿಕೆಟಿಗನಾಗಿರಲಿಲ್ಲ. ಮೈದಾನದ ಹೊರಗೂ ಅವರ ಆಕರ್ಷಕ ವ್ಯಕ್ತಿತ್ವ, ಸೌಜನ್ಯತೆ, ವಿಶ್ವಾಸವು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಒಂದರರ್ಥದಲ್ಲಿ ಈತ ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಅಂದ್ರೆ ತಪ್ಪಾಗಲಾರದು.

ಎಬಿಡಿಯ ರೆಕಾರ್ಡ್‌ಗಳ ಕುರಿತು ಮಾತನಾಡುವುದಾದರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ 47 ಶತಕಗಳು, 109 ಅರ್ಧಶತಕಗಳನ್ನ ಒಳಗೊಂಡಂತೆ 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆ ಟಿ 20, ಲಿಸ್ಟ್-ಎ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಕೂಡ ದಿಗ್ಭ್ರಮೆಗೊಳಿಸುವಂತಿದೆ.

Story first published: Tuesday, October 4, 2022, 0:05 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X