ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರಾಜಿಗೆ ಬಿಡುಗಡೆಯಾಗುವ ಬಗ್ಗೆ ಲಕ್ನೋ ಫ್ರಾಂಚೈಸಿಯಿಂದ ಮಾಹಿತಿಯೇ ಇರಲಿಲ್ಲ: ಮನೀಶ್ ಪಾಂಡೆ

IPL 2023 Auction: Manish Pandey reaction after Getting Released By Lucknow Super Giants ahead of mini Auction

ಐಪಿಎಲ್ ಮುಂದಿನ ಆವೃತ್ತಿಗೆ ಮಿನಿ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರೀಟೆನ್ಶನ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಕೆಲ ಪ್ರಮುಖ ಆಟಗಾರರು ಹರಾಜಿಗಾಗಿ ತಮ್ಮ ಫ್ರಾಂಚೈಸಿಯಿಂದ ಬಿಡುಗಡೆಯಾಗಿದ್ದಾರೆ. ಕರ್ನಾಟಕದ ಅನುಭವಿ ಆಟಗಾರ ಮನೀಶ್ ಪಾಂಡೆ ಕಳೆದ ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು. ಆದರೆ ಈ ಬಾರಿಯ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಮನೀಶ್ ಪಾಂಡೆ ಅವರನ್ನು ಲಕ್ನೋ ಫ್ರಾಂಚೈಸಿ ಬಿಡುಗಡೆಗೊಳಿಸಿದೆ. ಈ ವಿಚಾರವಾಗಿ ಮನೀಶ್ ಪಾಂಡೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ತನಗೆ ಫ್ರಾಂಚೈಸಿ ಈ ವಿಚಾರವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮನೀಶ್ ಪಾಂಡೆ 4.6 ಕೋಟಿಗೆ ಹರಾಜಾಗಿದ್ದರು. ಆದರೆ ಮುಂದಿನ ಆವೃತ್ತಿಗೆ ಎಲ್‌ಎಸ್‌ಜಿ ತಂಡದಲ್ಲಿ ಉಳಿಸಿಕೊಳ್ಳದಿರಲು ನಿರ್ಧರಿಸಿದ್ದು ಹರಾಜಿಗೆ ಬಿಡುಗಡೆಗೊಳಿಸಿದೆ. ಅಜಿಂಕ್ಯಾ ರಹಾನೆ ಹಾಗೂ ಮಯಾಂಕ್ ಅಗರ್ವಾಲ್ ಕೂಡ ತಮ್ಮ ತಮ್ಮ ತಂಡದಿಂದ ಹೊರಬಿದ್ದ ಭಾರತದ ಪ್ರಮುಖ ಆಟಗಾರರಾಗಿದ್ದಾರೆ.

ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ರೀಟೆನ್ಶನ್ ವಿಚಾರವಾಗಿ ಸ್ಪೋರ್ಟ್ಸ್ ಕೀಡಾಗೆ ಮನೀಷ್ ಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹರಾಜಿಗೆ ಬಿಡುಗಡೆಗೊಳಿಸುವ ವಿಚಾರವಾಗಿ ಎಲ್‌ಎಸ್‌ಜಿ ಫ್ರಾಂಚೈಸಿ ಕರೆ ಮಾಡಿ ಮಾಹಿತಿ ನೀಡಿತ್ತೇ ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮನೀಶ್ ಪಾಂಡೆ "ಇಲ್ಲ ನನಗೆ ಯಾವುದೇ ಕರೆ ಬಂದಿರಲಿಲ್ಲ. ನನಗೆ ಈ ಪಟ್ಟಿ ಬಿಡುಗಡೆಯಾದ ದಿನವೇ ಈ ಬಗ್ಗೆ ಮಾಹಿತಿ ದೊರೆಯಿತು. ಯಾವುದೇ ಮಾತುಕತೆಯಾಗಿರಲಿಲ್ಲ. ಆದರೆ ಅದು ಪರವಾಗಿಲ್ಲ. ಆಟಗಾರನಾಗಿ ನೀವು ಎಲ್ಲದಕ್ಕೂ ಸಿದ್ಧವಾಗಿರಬೇಕು" ಎಂದಿದ್ದಾರೆ ಮನೀಶ್ ಪಾಂಡೆ.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಎವಿನ್ ಲೆವಿಸ್, ಜೇಸನ್ ಹೋಲ್ಡರ್ ಮತ್ತು ಮನೀಶ್ ಪಾಂಡೆ ಅವರಂತಹ ದೊಡ್ಡ ಆಟಗಾರರನ್ನು ಹರಾಜಿಗೆ ಬಿಡುಗಡೆಗೊಳಿಸಿದೆ. ಎಲ್ಎಸ್‌ಜಿ ತಂಡವು 23.35 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಐಪಿಎಲ್ 2023 ಹರಾಜಿನಲ್ಲಿ ಭಾಗಿಯಾಗಲಿದೆ.

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮೆಂಟರ್ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಉಳಿಸಿಕೊಂಡ ಮತ್ತು ಬಿಡುಗಡೆಗೊಳಿಸಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ಲಕ್ನೋ ಸೂಪರ್ ಜೈಂಟ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್.

ಲಕ್ನೋ ಸೂಪರ್ ಜೈಂಟ್ಸ್ ತಂಡ ಕೈಬಿಟ್ಟ ಆಟಗಾರರ ಪಟ್ಟಿ ಆಂಡ್ರ್ಯೂ ಟೈ, ಅಂಕಿತ್ ರಜಪೂತ್, ದುಷ್ಮಂತ ಚಮೀರಾ, ಎವಿನ್ ಲೆವಿಸ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಶಹಬಾಜ್ ನದೀಮ್.

Story first published: Friday, November 25, 2022, 21:29 [IST]
Other articles published on Nov 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X