ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2023ರಲ್ಲಿ ಜಾರಿಯಾಗಲಿದೆ ಹೊಸ ನಿಯಮ: ಇದರಿಂದ ಆಟದಲ್ಲಿ ಆಗುವ ಬದಲಾವಣೆ ಏನು ಗೊತ್ತಾ?

IPL 2023: BCCI Confirms That Tactical Substitute Will Be Introduced From 2023 Season

ಐಪಿಎಲ್‌ 2023 ರ ಆವೃತ್ತಿಯನ್ನು ಹೆಚ್ಚು ರೋಚಕವಾಗಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. 'ಬದಲೀ ಆಟಗಾರ'ನ ಬಗ್ಗೆ ಹೊಸ ನಿಯಮ 2023ರ ಐಪಿಎಲ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಕಟಿಸಿದೆ.

ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಖಾತೆಯಲ್ಲಿ ಶುಕ್ರವಾರ ಪ್ರಕಟಿಸುವ ಮೂಲಕ ಖಚಿತಪಡಿಸಿದೆ. 2022ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪ್ರಯೋಗಿಸಿತ್ತು. ಅಲ್ಲಿ ಈ ತಂತ್ರ ಹೆಚ್ಚು ಯಶಸ್ವಿಯಾದ ಕಾರಣ ಐಪಿಎಲ್‌ನಲ್ಲಿ ಕೂಡ ಅಳವಡಿಸಲು ಮುಂದಾಗಿದೆ.

Ind vs Ban: ಅಭ್ಯಾಸ ಮಾಡಿದ ಕೊಹ್ಲಿ, ವಿಶ್ರಾಂತಿ ಪಡೆದ ರೋಹಿತ್ ಶರ್ಮಾ ಮತ್ತು ತಂಡInd vs Ban: ಅಭ್ಯಾಸ ಮಾಡಿದ ಕೊಹ್ಲಿ, ವಿಶ್ರಾಂತಿ ಪಡೆದ ರೋಹಿತ್ ಶರ್ಮಾ ಮತ್ತು ತಂಡ

ಈ ಹೊಸ ನಿಯಮದಿಂದ ಐಪಿಎಲ್ ಮತ್ತಷ್ಟು ರೋಚಕವಾಗುವ ಸಾಧ್ಯತೆ ಇದೆ. ಈವರೆಗೂ ಫುಟ್ಬಾಲ್, ಕಬಡ್ಡಿ ಸೇರಿದಂತೆ ಹಲವು ಆಟಗಳಲ್ಲಿ ಇದ್ದ ನಿಯಮ ಈಗ ಕ್ರಿಕೆಟ್‌ಗೂ ಕಾಲಿಟ್ಟಿದೆ. ಈ ಮೂಲಕ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ.

ಪ್ರಭಾವಿ ಆಟಗಾರ ಅಥವಾ ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ಪರಿಕಲ್ಪನೆ ಕ್ರಿಕೆಟ್ ಲೋಕಕ್ಕೆ ಹೊಸದಾಗಿದೆ. ಇದುವರೆಗೂ ಆಟದಲ್ಲಿ ಯಾರದರೂ ಆಟಗಾರ ಗಾಯಗೊಂಡರೆ ಅವರ ಬದಲಿಗೆ ಮತ್ತೊಬ್ಬ ಆಟಗಾರ ಆಡುತ್ತಿದ್ದ, ಆದರೆ ಆ ಆಟಗಾರನಿಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಯಾವುದೇ ಅವಕಾಶ ಇರುತ್ತಿರಲಿಲ್ಲ. ಆದರೆ, ಬಿಸಿಸಿಐ ರೂಪಿಸಿರುವ ಹೊಸ ನಿಯಮದ ಪ್ರಕಾರ, ಬದಲೀ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

ಇಂಪ್ಯಾಕ್ಟ್ ಪ್ಲೇಯರ್ ಅಥವಾ ಪ್ರಭಾವಿ ಆಟಗಾರ, ಫುಟ್ಬಾಲ್, ಕಬಡ್ಡಿಯಂತಹ ಆಟಗಳ ಪರಿಚಯ ಇರುವವರಿಗೆ ಈ ನಿಯಮಗಳು ಈಗಾಗಲೇ ಪರಿಚಿತವಾಗಿರುತ್ತವೆ. ಆಡುವ ಬಳಗದಲ್ಲಿ ಆಟದ ಮಧ್ಯದಲ್ಲಿ ಬದಲಾವಣೆ ಮಾಡುವ ಅವಕಾಶ ನೀಡುವುದನ್ನು ಇಂಪ್ಯಾಕ್ಟ್ ಪ್ಲೇಯರ್ ಎಂದು ಸುಲಭವಾಗಿ ಹೇಳಬಹುದು.

ಈಗಿರುವ ನಿಯಮಗಳ ಪ್ರಕಾರ, ಟಾಸ್ ನಂತರ ಘೋಷಿಸುವ ಪ್ಲೇಯಿಂಗ್ XI ಅನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆಟಗಾರ ಗಾಯಗೊಂಡರೆ, ಅತನಿಗೆ ಬದಲಿಯಾಗಿ ಆಡುವ ಆಟಗಾರ ಕೇವಲ ಫೀಲ್ಡಿಂಗ್ ಮಾತ್ರ ಮಾಡಲು ಅವಕಾಶವಿತ್ತು. ಅವರು ಬ್ಯಾಟ್ ಅಥವಾ ಬೌಲಿಂಗ್ ಮಾಡಲು ಅನುಮತಿ ಇರುತ್ತಿರಲಿಲ್ಲ.

Dwayne Bravo : ಐಪಿಎಲ್‌ಗೆ ನಿವೃತ್ತಿ ಘೋಷಿಸಿ ಪೊಲಾರ್ಡ್‌ ದಾರಿ ಹಿಡಿದ ಸಿಎಸ್‌ಕೆ ಮಾಜಿ ಆಟಗಾರ!

14ನೇ ಓವರ್‌ ಮುಗಿಯುವ ಮೊದಲು ಬದಲಾವಣೆಗೆ ಅವಕಾಶ

14ನೇ ಓವರ್‌ ಮುಗಿಯುವ ಮೊದಲು ಬದಲಾವಣೆಗೆ ಅವಕಾಶ

ಹೊಸ ನಿಯಮದ ಪ್ರಕಾರ, ಎರಡೂ ತಂಡಗಳು ತಮ್ಮ ಪ್ಲೇಯಿಂಗ್ ಅನ್ನು ಘೋಷಿಸುತ್ತವೆ. ನಂತರ ಎರಡೂ ತಂಡಗಳು ನಾಲ್ಕು ಇಂಪ್ಯಾಕ್ಡ್ ಪ್ಲೇಯರ್ ಹೆಸರನ್ನು ನೀಡಬೇಕಾಗುತ್ತದೆ. ಎರಡೂ ತಂಡಗಳು ಕೂಡ ಆಟದ ಮಧ್ಯದಲ್ಲಿ ತಮ್ಮ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಿಂದ ಒಬ್ಬ ಆಟಗಾರನನ್ನು ಅಂತಿಮ ತಂಡದಲ್ಲಿ ಸೇರಿಸಿಕೊಳ್ಳಲು ಅನುಮತಿ ಇರುತ್ತದೆ. ಆತ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಮಾಡಲು ಅವಕಾಶ ನೀಡಲಾಗುತ್ತದೆ.

ಪಂದ್ಯದ ಟಾಸ್ ಸಮಯದಲ್ಲಿ ಉಭಯ ತಂಡಗಳು ತಮ್ಮ ಪ್ಲೇಯಿಂಗ್ XI ಮತ್ತು ನಾಲ್ವರು ಇಂಪ್ಯಾಕ್ಟ್ ಆಟಗಾರರ ಪಟ್ಟಿಯನ್ನು ನೀಡಬೇಕು. ನಾಲ್ವರು ಇಂಪ್ಯಾಕ್ಟ್ ಆಟಗಾರರ ಪಟ್ಟಿಯನ್ನು ನೀಡಿದರೂ, ಕೇವಲ ಒಬ್ಬ ಆಟಗಾರನನ್ನು ಮಾತ್ರ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಇಂಪ್ಯಾಕ್ಟ್ ಆಟಗಾರನನ್ನು ಇನ್ನಿಂಗ್ಸ್‌ನ 14ನೇ ಓವರ್‌ ಮುಗಿಯುವುದರ ಒಳಗೆ ಬದಲಾವಣೆ ಮಾಡಲು ಅವಕಾಶ ಇರುತ್ತದೆ. ಬ್ಯಾಟಿಂಗ್ ಅಥವ ಬೌಲಿಂಗ್ ಮಾಡುವ ಯಾವುದೇ ತಂಡ ಬದಲಾವಣೆ ಮಾಡಲು ಅನುಮತಿ ನೀಡಲಾಗುತ್ತದೆ. 15 ರಿಂದ 20ನೇ ಓವರ್ ನಡುವೆ ಬದಲಾವಣೆಗೆ ಯಾವುದೇ ಅವಕಾಶ ಇಲ್ಲ.

ಅಂಪೈರ್ ಜೊತೆ ಮಾತನಾಡಬೇಕು

ಅಂಪೈರ್ ಜೊತೆ ಮಾತನಾಡಬೇಕು

ಇಂಪ್ಯಾಕ್ಟ್ ಪ್ಲೇಯರ್ ಮೈದಾನಕ್ಕೆ ಬಂದ ನಂತರ ಹೊರ ನಡೆದ ಆಟಗಾರನಿಗೆ ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಯಾವುದೇ ಅವಕಾಶ ಸಿಗುವುದಿಲ್ಲ. ಬದಲಾವಣೆ ಮಾಡುವ ಮುನ್ನ, ತಂಡದ ನಾಯಕನು, ಫೀಲ್ಡ್ ಅಂಪೈರ್ ಅಥವಾ ನಾಲ್ಕನೇ ಅಂಪೈರ್ ಬಳಿ ಮಾಹಿತಿ ನೀಡಬೇಕು.

ಈಗಾಗಲೇ ಬ್ಯಾಟಿಂಗ್‌ ಮಾಡಿ ಔಟ್ ಆಗಿರುವ ಆಟಗಾರನನ್ನು ಕೂಡ ಬದಲಾಯಿಸಲು ಹೊಸ ನಿಯಮ ಅನುಮತಿ ನೀಡುತ್ತದೆ. ಬದಲೀ ಆಟಗಾರ ಕೂಡ ಬ್ಯಾಟಿಂಗ್ ಮಾಡಬಹುದಾಗಿದೆ. ಒಂದು ವೇಳೆ ಬೌಲರ್ ಅನ್ನು ಬದಲಾವಣೆ ಮಾಡಿದರೆ, ಆತ ಎರಡು ಓವರ್ ಬೌಲಿಂಗ್ ಮಾಡಿದ್ದರೆ, ಬದಲೀ ಆಟಗಾರ ನಾಲ್ಕು ಓವರ್ ಕೂಡ ಬೌಲಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ.

Story first published: Friday, December 2, 2022, 20:24 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X