ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಹತ್ವದ ಘೋಷಣೆ: ಮುಂದಿನ ಐಪಿಎಲ್ ಟೂರ್ನಿಗೆ ಈತನೇ ನಾಯಕ!

 IPL 2023: CSK CEO Confirms MS Dhoni will lead Chennai Super Kings team in upcoming season

ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಗೊಂದಲಕ್ಕೂ ಒಳಗಾಗಿತ್ತು. ನಾಯಕತ್ವದ ವಿಚಾರವಾಗಿ ನಡೆದ ಕೆಲ ಬೆಳವಣಿಗೆಗಳು ತಮಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಮೊದಲಿಗೆ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಂಡರಾದರೂ ಸತತ ಸೋಲಿನ ಬಳಿಕ ತಂಡದಿಂದಲೇ ನಿಗೂಢ ರೀತಿಯಲ್ಲಿ ಹೊರಬಿದ್ದರು. ಸಿಎಸ್‌ಕೆ ತಂಡದಲ್ಲಿ ಜಡೇಜಾ ಮುಂದುವರಿಯಲಿದ್ದಾರಾ ಎಂಬುದು ಇನ್ನೂ ಅಸ್ಪಷ್ಟವಾಗಿರುವಾಲೇ ಮುಂದಿನ ಆವೃತ್ತಿಗೆ ಸಿಎಸ್‌ಕೆ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವವರು ಯಾರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಎಂಎಸ್ ಧೋನಿಯೇ ಮುಂದಿನ ಆವೃತ್ತಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಸಿಎಸ್‌ಕೆ ಸಿಇಒ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

IND vs PAK: ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಜಡೇಜಾ ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ!IND vs PAK: ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಜಡೇಜಾ ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ!

ನಾಯಕತ್ವದಲ್ಲಿ ಬದಲಾವಣೆ ಮಾಡಲಾರೆವು

ನಾಯಕತ್ವದಲ್ಲಿ ಬದಲಾವಣೆ ಮಾಡಲಾರೆವು

ಇನ್‌ಸೈಡ್‌ಸ್ಪೋರ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕಾಸಿ ವಿಶ್ವನಾಥನ್ ಸಿಎಸ್‌ಕೆ ಫ್ರಾಂಚೈಸಿಯ ನಿರ್ಧಾರವನ್ನು ತಿಳಿಸಿದ್ದಾರೆ. "ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂಬುದನ್ನು ನಾವು ಯಾವತ್ತೂ ಹೇಳಿಲ್ಲ" ಎಂದಿದ್ದಾರೆ ಕಾಸಿ ವಿಶ್ವನಾಥನ್. ಎಂಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿದ್ದು 2021ರಲ್ಲಿ ಕೊನೆಯ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

ಜಡೇಜಾಗೆ ನಾಯಕತ್ವ ಒಪ್ಪಿಸಿದ್ದ ಎಂಎಸ್ ಧೋನಿ

ಜಡೇಜಾಗೆ ನಾಯಕತ್ವ ಒಪ್ಪಿಸಿದ್ದ ಎಂಎಸ್ ಧೋನಿ

2021ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಕಳೆದ 2022ರ ಐಪಿಎಲ್ ಆವೃತ್ತಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದರು. ರವೀಂದರ ಜಡೇಜಾ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಾ ಸಾಗಿತ್ತು. ಮಾತ್ರವಲ್ಲದೆ ವೈಯಕ್ತಿಕವಾಗಿಯೂ ರವೀಂದ್ರ ಜಡೇಜಾ ಪ್ರದರ್ಶನ ಕಳಪೆಯಾಗಲು ಆರಂಬಿಸಿತ್ತು. ಮೊದಲ ಎಂಟು ಪಂದ್ಯಗಳ ಪೈಕಿ ಸಿಎಸ್‌ಕೆ ತಂಡ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಆಘಾತಕ್ಕೊಳಗಾಯಿತು. ಅದಶಾದ ಬಳಿಕ ಜಡೇಜಾ ನಾಯಕತ್ವವನ್ನು ಎಂಎಸ್ ಧೋನಿಗೆ ಮರಳಿಸಿದ್ದರು.

ಭರ್ಜರಿ ಕಮ್‌ಬ್ಯಾಕ್‌ನ ನಿರೀಕ್ಷೆಯಲ್ಲಿದೆ ಸಿಎಸ್‌ಕೆ

ಭರ್ಜರಿ ಕಮ್‌ಬ್ಯಾಕ್‌ನ ನಿರೀಕ್ಷೆಯಲ್ಲಿದೆ ಸಿಎಸ್‌ಕೆ

ಕಳೆದ ಆವೃತ್ತಿಯಲ್ಲಿ ನೀಡಿದ ಕಳಪೆ ಪ್ರದರ್ಶನದಿಂದಾಗಿ ಸಿಎಸ್‌ಕೆ ಭಾರೀ ಮುಖಭಂಗಕ್ಕೊಳಗಾಗಿತ್ತು. ಹಾಲಿ ಚಾಂಪಿಯನ್ ಆಗಿ ಟೂರ್ನಿಯನ್ನು ಆರಂಭಿಸಿದ್ದ ತಂಡ ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಪೈಪೋಟಿಗಿಳಿದಿತ್ತು. ಆದರೆ ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಮತ್ತೆ ತಿರುಗೇಟು ನೀಡುವ ವಿಶ್ವಾಸದಲ್ಲಿದ್ದು ಯಾವ ರೀತಿಯಾಗಿ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಎಂಎಸ್ ಧೋನಿಯೇ ನಾಯಕನಾಗಿ ಮುಂದುವರಿಯಲಿರುವ ಕಾರಣ ತಂಡ ಮತ್ತೆ ಹೊಸತನದೊಂದಿಗೆ ಕಣಕ್ಕಿಳಿಯುವ ವಿಶ್ವಾಸದಲ್ಲಿದೆ.

ಕುತೂಹಲ ಮೂಡಿಸಿದೆ ಜಡೇಜಾ ನಿಲುವು

ಕುತೂಹಲ ಮೂಡಿಸಿದೆ ಜಡೇಜಾ ನಿಲುವು

ಮತ್ತೊಂದೆಡೆ ರವೀಂದ್ರ ಜಡೇಜಾ ಅವರ ಐಪಿಎಲ್‌ನ ಮುಂದಿನ ಪಯಣದ ಬಗ್ಗೆ ಕುತೂಹಲ ಮೂಡಿದೆ. ಸಿಎಸ್‌ಕೆ ನಾಯಕನಾಗಿ ವೈಫಲ್ಯವನ್ನು ಅನುಭವಿಸಿದ್ದ ರವೀಂದ್ರ ಜಡೇಜಾ ನಂತರ ತಂಡದ ನಾಯಕತ್ವವನ್ನು ಎಂಎಸ್ ಧೋನಿಗೆ ಮರಳಿಸಿದ್ದರು. ಅದಾದ ಬಳಿಕ ಗಾಯದ ಕಾರಣವನ್ನು ನೀಡಿ ಟೂರ್ನಿಯೀಂದಲೇ ಹೊರಗುಳಿದಿದ್ದರು. ಈ ಬೆಳವಣಿಗೆಯಿಂದಾಗಿ ರವೀಂದ್ರ ಜಡೇಜಾ ಹಾಗೂ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಗಳು ಎದ್ದಿದ್ದವು. ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದಲ್ಲಿ ರವೀಂದ್ರ ಜಡೇಜಾ ಮುಂದುವರಿಯುವುದಿಲ್ಲ ಎಂಬ ಮಾತುಗಳು ಬಲವಾಗಿ ಕೇಲಿ ಬಂದಿದ್ದು ಜಡ್ಡು ಹಾಗೂ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನ ನಿರ್ಧಾರ ಏನು ಎಂಬುದು ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿಯ ಪ್ರಕಾರ ಜಡೇಜಾ ಮುಂದಿನ ಆವೃತ್ತಿಗೆ ಮುನ್ನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ರವೀಂದ್ರ ಜಡೇಜಾ ಭಾಗಿಯಾಗುವುದು ನಿಶ್ಚಿತ ಎನ್ನಲಾಗಿದೆ.

Story first published: Sunday, September 4, 2022, 12:12 [IST]
Other articles published on Sep 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X