ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?

IPL 2023: Fans Slams Chris Gayle For His Comments On RCB And PBKS Franchise

ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್‌ ಗೇಲ್ ವಿವಾದಿತ ಹೇಳಿಕೆ ನೀಡುವ ಮೂಲಕ ಆರ್‌ಸಿಬಿ ತಂಡದ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ಆರ್‌ಸಿಬಿ ಪರವಾಗಿ 7 ವರ್ಷಗಳ ಕಾಲ ಆಡಿರುವ, ತಂಡದ ಬಗ್ಗೆ ಅಭಿಮಾನ ಹೊಂದಿದ್ದ ಗೇಲ್ ಹೀಗ್ಯಾಕೆ ಆದರು ಎಂದು ಪ್ರಶ್ನಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಮ್ಮ ಆಟಗಾರರನ್ನು ನಂಬುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್‌ಗೆ ಬಂಪರ್ ಸಾಧ್ಯತೆಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್‌ಗೆ ಬಂಪರ್ ಸಾಧ್ಯತೆ

ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿರುವ ಅವರು, ಎರಡೂ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಹೇಗೆ ನಂಬಬೇಕು ಮತ್ತು ಅವರಿಗೆ ನಿಷ್ಠೆಯಿಂದ ಹೇಗಿರಬೇಕು ಎನ್ನುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.

IPL 2023: Fans Slams Chris Gayle For His Comments On RCB And PBKS Franchise

"ನಿಷ್ಟೆ ಮತ್ತು ನಂಬಿಕೆ - ಇದು ಬಹಳ ಮುಖ್ಯ" ಎಂದು ಗೇಲ್ ಜಿಯೋ ಸಿನಿಮಾ ವಿಡಿಯೋದಲ್ಲಿ ಹೇಳಿದ್ದಾರೆ. "ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಆ ಎರಡು ಪದಗಳೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಯಬೇಕಾಗಿದೆ" ಎಂದು ಹೇಳಿದ್ದಾರೆ.

ಆರ್‌ಸಿಬಿ ಪರವಾಗಿ ಸುದೀರ್ಘ ಆಟ

ಕ್ರಿಸ್‌ ಗೇಲ್ ಸುದೀರ್ಘ ಅವಧಿಯವರೆಗೆ ಆರ್‌ಸಿಬಿ ತಂಡಕ್ಕಾಗಿ ಆಡಿದ್ದಾರೆ. ಗೇಲ್‌ಗೆ ಆರ್‌ಸಿಬಿ ತಂಡದಲ್ಲಿದ್ದಾಗಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಸತತ 7 ಆವೃತ್ತಿಯಲ್ಲಿ ಅವರು ಆರ್‌ಸಿಬಿಯ ಪ್ರಮುಖ ಆಟಗಾರನಾಗಿದ್ದರು.

ಅಲ್ಲದೆ ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಫ್ರಾಂಚೈಸಿ ತನ್ನ ಆಟಗಾರರಿಗೆ ಹಾಲ್‌ ಆಫ್ ಫೇಮ್ ಗೌರವ ಸಲ್ಲಿಸಿದೆ. ತಂಡದ ಮಾಜಿ ದಿಗ್ಗಜರಾದ ಎಬಿ ಡಿವಿಲಿಯರ್ಸ್‌ ಜೊತೆ ಕ್ರಿಸ್‌ ಗೇಲ್‌ ಕೂಡ ಆರ್‌ಸಿಬಿಯ ಮೊದಲ ಹಾಲ್‌ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರು.

2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾದ ಗೇಲ್, ತಂಡಕ್ಕಾಗಿ 84 ಇನ್ನಿಂಗ್ಸ್‌ಗಳಲ್ಲಿ 3164 ರನ್ ಗಳಿಸಿದ್ದಾರೆ. 2011 ಮತ್ತು 2012ರಲ್ಲಿ 608 ಮತ್ತು 733 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು.

ನಂತರ ಪಂಜಾಬ್ ಪರವಾಗಿ ಆಡಿದ ಅವರು 41 ಇನ್ನಿಂಗ್ಸ್‌ಗಳಲ್ಲಿ 1339 ರನ್ ಗಳಿಸಿದ್ದಾರೆ. ಫಾರ್ಮ್ ಕಳೆದುಕೊಂಡ ನಂತರ ಪಂಜಾಬ್‌ ಅವರನ್ನು ತಂಡದಿಂದ ಕೈಬಿಟ್ಟಿತು.

ಗೇಲ್ ವಿರುದ್ಧ ಅಭಿಮಾನಿಗಳ ಟೀಕೆ

ಕ್ರಿಸ್‌ ಗೇಲ್ ವಿಚಾರದಲ್ಲಿ ಆರ್‌ಸಿಬಿ ಇಷ್ಟೆಲ್ಲಾ ಗೌರವ ನೀಡಿದ್ದರೂ ಗೇಲ್ ಅದನ್ನು ಲೆಕ್ಕಿಸದೆ ಟೀಕಿಸಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಗೇಲ್ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಕೆಲವು ನೆಟ್ಟಿಗರು "ನಿಮ್ಮ ಮೇಲೆ ನಂಬಿಕೆ ಇದ್ದಿದ್ದಕ್ಕೆ ನೀವು ಆರ್‌ಸಿಬಿ ಪರವಾಗಿ 7 ವರ್ಷಗಳ ಕಾಲ ಆಡಿದ್ದು" ಎಂದು ಹೇಳಿದ್ದಾರೆ.

ಮತ್ತೊಬ್ಬರು "ಎಬಿ ಡಿವಿಲಿಯರ್ಸ್ ಅಂತಹ ಆಟಗಾರನ ಜೊತೆ ನಿಮಗೆ ಹಾಲ್‌ ಆಫ್ ಫೇಮ್ ನೀಡಿ ಗೌರವಿಸಿದ್ದಕ್ಕೆ ಸಾರ್ಥಕವಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ವಿರಾಟ್ ಕೊಹ್ಲಿ, ಜೊಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್ ಅವರೆಲ್ಲ ಆರ್‌ಸಿಬಿಯಲ್ಲಿ ಒಂದೇ ಕುಟುಂಬದಂತೆ ಇದ್ದಾರೆ, ಸುಮ್ಮನೆ ಆರ್‌ಸಿಬಿ ಬಗ್ಗೆ ಟೀಕೆ ಮಾಡಬೇಡಿ" ಎಂದು ಮತ್ತೊಬ್ಬರು ಅಭಿಮಾನಿ ಟ್ವೀಟ್ ಮಾಡಿದ್ದಾರೆ.

Story first published: Sunday, January 29, 2023, 10:50 [IST]
Other articles published on Jan 29, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X