ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪ್ರಸಾರ ಹಕ್ಕು ಮಾರಾಟದಿಂದ ಪ್ರತಿ ಓವರ್‌, ಪ್ರತಿ ಬೌಲ್‌ನಿಂದ ಬಿಸಿಸಿಐ ಗಳಿಸುವ ಮೊತ್ತವೆಷ್ಟು?

IPL 2023: How Much Does BCCI Earn From IPL Broadcast Sales Per Over and Per Bowl?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ಐದು ವರ್ಷಗಳ (2023-27) ಮಾಧ್ಯಮ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 48,390 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದು, ಈವರೆಗಿನ ಗರಿಷ್ಠ ಮೊತ್ತದ ಹರಾಜು ಎಂಬ ದಾಖಲೆ ಬರೆದಿದೆ.

ಡಿಸ್ನಿ ಸ್ಟಾರ್ ಟಿವಿ ಹಕ್ಕುಗಳನ್ನು (ಪ್ಯಾಕೇಜ್ ಎ) 23,575 ಕೋಟಿಗೆ ಉಳಿಸಿಕೊಂಡಿದ್ದು, ಇದು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಆದರೆ Viacom18 ಡಿಜಿಟಲ್ ಹಕ್ಕುಗಳನ್ನು 23,758 ಕೋಟಿ ರೂ.ಗೆ (ಪ್ಯಾಕೇಜ್ ಬಿ & ಸಿ) ಪಡೆದುಕೊಂಡಿದೆ. Viacom 18 ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ಹೊರ ಪ್ರದೇಶಗಳಿಗೆ ಪ್ಯಾಕೇಜ್ D ನಲ್ಲಿ ಹಕ್ಕುಗಳನ್ನು ಪಡೆದುಕೊಂಡರೆ, ಟೈಮ್ಸ್ MENA ಮತ್ತು US ಅನ್ನು ಪಡೆದುಕೊಂಡಿತು.

ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಪಾಂಡ್ಯ ನಾಯಕಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಪಾಂಡ್ಯ ನಾಯಕ

ಗಮನಾರ್ಹವಾದ ಅಂಶವೆಂದರೆ 8,200 ಕೋಟಿ ರೂ. ಒಪ್ಪಂದದೊಂದಿಗೆ ಸೋನಿ ಮೊದಲ 10 ಸೀಸನ್‌ಗಳಿಗೆ (2008-2017) ಹಕ್ಕುಗಳನ್ನು ಹೊಂದಿತ್ತು ಮತ್ತು ಸ್ಟಾರ್ ಮುಂದಿನ ಐದು ವರ್ಷಗಳ (2018-2022) ಹಕ್ಕುಗಳನ್ನು ಪಡೆದಾಗ ಹಣವು ಸುಮಾರು ದ್ವಿಗುಣಗೊಂಡಿತ್ತು.

ಹಣದ ಸುರಿಮಳೆಯೇ ಸುರಿದಿದೆ

ಹಣದ ಸುರಿಮಳೆಯೇ ಸುರಿದಿದೆ

ಮುಂದಿನ ಋತುವಿಗೆ (2023-2027) ಹಣದ ಸುರಿಮಳೆಯೇ ಸುರಿದಿದ್ದು, 48,390 ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಬಿಸಿಸಿಐ ಅನ್ನು ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದು ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನು ಐಪಿಎಲ್ 2023ರಿಂದ 2027ರ ಅವಧಿಯಲ್ಲಿ ಒಟ್ಟು 410 ಪಂದ್ಯಗಳನ್ನು ಆಡಲಾಗುತ್ತದೆ. ಲೆಕ್ಕಾಚಾರಗಳ ಪ್ರಕಾರ, ಈ ಸೂಚಿಸಿದ ಅವಧಿಯಲ್ಲಿ ಆಡಲಾದ ಪ್ರತಿ ಐಪಿಎಲ್ ಪಂದ್ಯವು 118 ಕೋಟಿ ರೂ.ಗಳಷ್ಟು ಮೌಲ್ಯದ್ದಾಗಿದೆ. ಇದೇ ವೇಳೆ ಬಿಸಿಸಿಐ ಪ್ರತಿ ಓವರ್‌ಗೆ (ಸೂಪರ್ ಓವರ್ ಹೊರತುಪಡಿಸಿ) 2.95 ಕೋಟಿ ರೂ. ಆದಾಯ ಪಡೆದರೆ, ಟೂರ್ನಿಯಲ್ಲಿ ಬೌಲ್ ಮಾಡುವ ಪ್ರತಿ ಚೆಂಡಿನ ಬೆಲೆ 49 ಲಕ್ಷ ರೂ. ಆಗಿದೆ.

ಪ್ರತಿ ಐಪಿಎಲ್ ಪಂದ್ಯವು 118 ಕೋಟಿ ರೂ. ಗಳಿಸುತ್ತದೆ

ಪ್ರತಿ ಐಪಿಎಲ್ ಪಂದ್ಯವು 118 ಕೋಟಿ ರೂ. ಗಳಿಸುತ್ತದೆ

2023ರಿಂದ ಪ್ರತಿ ಐಪಿಎಲ್ ಪಂದ್ಯವು 118 ಕೋಟಿ ರೂ. ಗಳಿಸಲು ಸಹಾಯ ಮಾಡುವುದರಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯು ಮತ್ತಷ್ಟು ಶ್ರೀಮಂತರಾಗಲಿದೆ. ಇದು 2018ರಲ್ಲಿ 6,138 ಕೋಟಿ ರೂಪಾಯಿ ಮೌಲ್ಯದ ಸ್ಟಾರ್ ಇಂಡಿಯಾದ ಐದು ವರ್ಷಗಳ ಒಪ್ಪಂದದ ಪ್ರಕಾರ, ಪ್ರತಿ ಭಾರತ ಮತ್ತು ಹೊರ ದೇಶ ಸೇರಿ ಆಟದ ಸರಾಸರಿ ಮೌಲ್ಯ 60 ಕೋಟಿ ರೂ. ಆಗಿತ್ತು. 2018-22ರ ಹಿಂದಿನ ಋತುವಿನಲ್ಲಿ ಬಿಸಿಸಿಐ ಪ್ರತಿ ತವರಿನ ಐಪಿಎಲ್ ಪಂದ್ಯದಿಂದ ಸುಮಾರು 55 ಕೋಟಿ ರೂಪಾಯಿ ಗಳಿಸುತ್ತಿತ್ತು.

ಮೂರು ದಿನಗಳ ಕಾಲ ಬಿಸಿಸಿಐ ನಡೆಸಿದ ಮೊದಲ ಬಾರಿಯ ಇ-ಹರಾಜಿನಲ್ಲಿ, ಡಿಸ್ನಿ-ಸ್ಟಾರ್ ಟಿವಿ ಮಾಧ್ಯಮ ಹಕ್ಕುಗಳನ್ನು ಉಳಿಸಿಕೊಂಡರೆ, Viacom18 ಭಾರತೀಯ ಉಪಖಂಡಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 2023-27 ನಡುವಿನ ಡಿಜಿಟಲ್ ಹಕ್ಕನ್ನು ಗೆದ್ದಿದೆ.

ಪ್ಯಾಕೇಜ್ ಎ- ಭಾರತ ಉಪಖಂಡದ (ಟಿವಿ)

ಪ್ಯಾಕೇಜ್ ಎ- ಭಾರತ ಉಪಖಂಡದ (ಟಿವಿ)

ಮೊದಲ ಬಾರಿಗೆ ಬಿಸಿಸಿಐ ಐಪಿಎಲ್‌ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ವಿಭಜಿಸಿದೆ. ಬಿಡ್ಡರ್‌ಗಳಿಗೆ ನಾಲ್ಕು ಪ್ಯಾಕೇಜ್‌ಗಳನ್ನು ನೀಡಿತ್ತು.
(A) ಭಾರತ ಉಪ-ಖಂಡದ ದೂರದರ್ಶನ (ಟಿವಿ)
(B) ಭಾರತ ಉಪ-ಖಂಡ ಡಿಜಿಟಲ್
(C) ಇಂಡಿಯಾ ಡಿಜಿಟಲ್ ನಾನ್-ಎಕ್ಸ್‌ಕ್ಲೂಸಿವ್ ವಿಶೇಷ ಪ್ಯಾಕೇಜ್
(D) ಪ್ರಪಂಚದ ಉಳಿದ ಭಾಗಗಳು

ಟಿವಿ ಹಕ್ಕುಗಳ ಮೂಲ ಬೆಲೆ 49 ಕೋಟಿ ರೂ.

ಟಿವಿ ಹಕ್ಕುಗಳ ಮೂಲ ಬೆಲೆ 49 ಕೋಟಿ ರೂ.

ಜೂನ್ 12ರಂದು ಬೆಳಗ್ಗೆ 11 ಗಂಟೆಗೆ ಹರಾಜು ಪ್ರಾರಂಭವಾಯಿತು ಮತ್ತು ಪ್ಯಾಕೇಜ್ A ಮತ್ತು B ಅನ್ನು ಮೊದಲು ಹರಾಜು ಮಾಡಲಾಯಿತು. ಟಿವಿ ಹಕ್ಕುಗಳ ಮೂಲ ಬೆಲೆ 49 ಕೋಟಿ ರೂ. ಮತ್ತು ಡಿಜಿಟಲ್ ಹಕ್ಕುಗಳಿಗಾಗಿ 33 ಕೋಟಿ ರೂ.ನಿಂದ ಬಿಡ್ಡಿಂಗ್ ಪ್ರಾರಂಭವಾಯಿತು. ಬಿಡ್‌ದಾರರು ಪ್ರತಿ ಬಿಡ್‌ಗಳ ನಡುವೆ 30 ನಿಮಿಷಗಳವರೆಗೆ ಸಮಯವನ್ನು ಹೊಂದಿದ್ದವು. ಬಿಡ್‌ದಾರರು ಪ್ರತಿ ಪಂದ್ಯದ ಆಧಾರದ ಮೇಲೆ ಅಂಕಿ ಅಂಶವನ್ನು ಉಲ್ಲೇಖಿಸಿದ್ದು, ಕನಿಷ್ಠ ಬಿಡ್ ಹೆಚ್ಚಳ (MBI) ಮೌಲ್ಯವನ್ನು 50 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು.

Story first published: Thursday, June 16, 2022, 9:58 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X